ಚಿಂಚೋಳಿ ಪ್ರೌಢಶಾಲೆಯಲ್ಲಿ ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ
ಚಿಂಚೋಳಿ ಪಟ್ಟಣದ ವಿರೇಂದ್ರ ಪಾಟೀಲ್ ಪ್ರಾಥಮಿಕ ಹಾಗು ಪ್ರೌಢಶಾಲೆ ಶಾಲೆಯಲ್ಲಿ ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸ ಸಾ, ಆಸ್ಪತ್ರೆ ಚಿಂಚೋಳಿ ಡಾ. ದೀಪಾ , ಬಿಎಚ್ಇ ಓ ಮಹೇಶ್ ವಿರೇಂದ್ರ ಪಾಟೀಲ್ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಜ್ಯೋತಿ ರಡ್ಡಿ ಸಿಬ್ಬಂದಿಗಳು ಹಾಗು ಶ್ರೀ ಶಕ್ತಿ ಸಂಘದ ಅಧ್ಯಕ್ಷ ರಾದ ನರಸಮ್ಮ ಆವುಂಟಿ ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕರು ಸರಕಾರಿ ಸಾರ್ವಜನಿಕ ಆಸ್ಪತ್ರೆ ಚಿಂಚೋಳಿ ಹಾಜರಿದ್ದರು ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಮಾಡಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಜೊತೆ ವಿಶೇಷವಾಗಿ ಡೇಂಗು ಕುರೀತು ಮಾಹಿತಿ ನಂತರ ಪೌಷ್ಟಿಕ ಆಹಾರ ಕುರೀತು ಸ್ಕೀಟ್ ಮತ್ತು ಆಕ್ಟ್ಟ ಸ್ಪರ್ಧೆಯನ್ನು ಮಾಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ವಿತರಣೆ ಮಾಡಿ, ಪೌಷ್ಟಿಕ ಆಹಾರ ಕುರೀತು ಮಾಹೀತಿ ಹಾಗೂ ವೈಯಕ್ತಿಕ ಸ್ವಚ್ಛತೆ ಮುಟ್ಟಿ ನೈರ್ಮಲ್ಯ ಶುಚಿ ಪ್ಯಾಡ್ ಬಳಕೆ ಮತ್ತು ವಿಲೇವಾರಿ ಕುರಿತು ಮಾಹಿತಿ ನೀಡಲಾಯಿತು. ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ
ಜಾತಾ ಮಾಡಿಸಲು ಮಾಹಿತಿ ನೀಡಿದರು.