ಬೀದರ್

ಚನ್ನಬಸವೇಶ್ವರ್ ಸಂಸ್ಥಾನ ಹಿರೇಮಠ್ ಹಾರ್ಕುಡ ಶ್ರೀಮಠದಲ್ಲಿ ಪರಿಸರ ಜಾಗ್ರತಿ ಅಭಿಯಾನ

ಹಾರಕುಡ  ಮಠದ ಪೀಠಾ ಧಿಪತಿಗಳಿಗೆ ಸಸಿ ವಿತರಣೆ
ಅಖಿಲ ಭಾರತ ವಿಶ್ವವಿದ್ಯಾ ಲಯಗಳ ನೌಕರರ ಒಕ್ಕೂಟದ ವತಿಯಿಂದ ಇಂದು, ಚನ್ನಬಸ ವೇಶ್ವರ ಸಂಸ್ಥಾನ ಮಠ ಹಾರ ಕೂಡದಲ್ಲಿ ಪರಿಸರ ಜಾಗ್ರತಿ ಅಭಿಯಾನದ ಅಂಗವಾಗಿ, ಪೂಜ್ಯರಿಗೆ ಸಸಿಯನ್ನು ವಿತ ರಿಸಲಾಯಿತು. ಮಠದ ಪೂಜ್ಯ ಶ್ರೀಗಳು ಮಾತನಾಡಿ, ನಮ್ಮ ಪರಿಸರವನ್ನು ಸ್ವಚ್ಛ ಹಾಗೂ ಹಸಿರಾಗಿರಿಸಲು ಎಲ್ಲರೂ ತಮ್ಮ ಕೈಲಾದ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು. ಬೃಹತ ಪ್ರಮಾಣ ದಲ್ಲಿ ಸಸಿ ನೆಡುವುದು ಸಾಧ್ಯವಾಗದೆ ಇದ್ದರೂ, ಒಬ್ಬೊ ಬ್ಬರು ಒಂದೊAದು ಗಿಡವನ್ನು ನೆಟ್ಟು ಅದರ ಪಾಲನೆ ಪೋಷಣೆ ಮಾಡಿದರೆ,  ಆ ಕೆಲಸವು ಹನಿ- ಹನಿ ಕೂಡಿದರೆ ಹಳ್ಳದoತೇ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.ಒಕ್ಕೂಟದ  ಕಾರ್ಯ ಕಾರಿ ಸಮಿತಿ ಸದಸ್ಯರಾದ  ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, ಸಂಪನ್ಮೂಲಗಳ ಲಭ್ಯತೆಗೆ ಅನುಗುಣವಾಗಿ, ವಿಭಿನ್ನ ಸ್ಥಳಗಳಲ್ಲಿ,  ಸಾಧ್ಯ ವಿರುವೆಲ್ಲೆಡೆಯಲ್ಲೂ ಕನಿಷ್ಠ ಒಂದು ಸಸಿಯನ್ನಾದರೂ ನೆಡುವ ಯೋಜನೆ ಹಾಕಿ ಕೊಳ್ಳಲಾಗಿದೆ ಎಂದರು.   ಸಂತೋಷ ಕುಮಾರಿ, ಸಾಗರ್ ಅಮರ್ ಬಿರಾದಾರ್, ಮಠದ ಅಧಿಕಾರಿ ಅಪ್ಪಣ್ಣ ಹಾಗೂ ಅನೇಕ ಭಕ್ತಾಧಿಗಳು  ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!