ಕ್ಲಸ್ಟರ್ ಮಟ್ಟದ ಕಾರ್ಯಗಾರ ಸಂಪನ್ನ
ಬೀದರ: ಎಲ್ ಅಂಡ್ ಟಿ ಫೈನಾನ್ಸ್ ಆಕ್ಸಿಸ್ ಲವ್ಲೀಹೂಡ್ಸ್ ಡಿಜಿಟಲ್ ಸಖಿ ಯೋಜನೆ ಬೀದರ್ ಮತ್ತು ಕಲ್ಬುರ್ಗಿ ಡಿಜಿಟಲ್ ಸಖಿ ಯೋಜನೆ ವತಿಯಿಂದ ಒಂದು ದಿನದ ಕ್ಲಸ್ಟರ್ ಮಟ್ಟದ ಕಾರ್ಯಗಾರವನ್ನು ತಾಲೂಕ ಪಂಚಾಯತ್ ಹುಮ್ನಾಬಾದ್ ಸಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹುಮ್ನಾಬಾದ್ ತಸಿಲ್ದಾರರು ಹಾಗೂ ದಂಡಾಧಿಕಾರಿಗಳು ಶ್ರೀಮತಿ ಅಂಜುಮ್ ತಬಸುಮ್ ಕಾರ್ಯಕ್ರಮವನು ಉದ್ದೇಶಿಸಿ ಮಾತನಾಡಿ ಡಿಜಿಟಲ್ ಸಖಿಯವರ ಸಮವಸ್ತ್ರ ತುಂಬಾ ಸಿಸ್ತು ಬದ್ಧವಾಗಿ ಕೂಡಿದೆ ಈ ಹಿಂದೆ ಹಳ್ಳಿಯ ಜನರು ತಮ್ಮ ಹಣವನ್ನು ಮನೆಯಲ್ಲಿ ಜಮಾ ಮಾಡುತಿದ್ದರು ತುಂಬಾ ಜನರಿಗೆ ಉಳಿತಾಯ ಎಂದರೇನು ಬಡ್ಡಿದರ ಎಂದರೇನು ಹಣವನ್ನು ಎಲ್ಲಿ ಕೂಡಿ ಹಾಕಿದರೆ ಅವರಿಗೆ ಲಾಭ ಬರುತ್ತೆ ಎಂಬುದರ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ ತಾಂತ್ರಿಕ ಮತ್ತು ಹಣಕಾಸು ಸೇರ್ಪಡೆ ಪರಿಚಯವಾಗಿದರಿಂದ ಮತ್ತು ಡಿಜಿಟಲ್ ಸಖಿ ಮನೆ ಮನೆಗೆ ಭೇಟಿ ನೀಡಿ ಹಣಕಾಸಿನ ಯೋಜನೆ ಬಗ್ಗೆ ಮಾಹಿತಿ ನೀಡುತ್ತಿದ್ದರಿಂದ ಬಹಳಷ್ಟು ಜನರಿಗೆ ಅನುಕೂಲಕರವಾಗಿದೆ, ಅದೇ ರೀತಿಯಾಗಿ ಡಿಜಿಟಲ್ ಸಖಿ ಯುಪಿಐ ಪಾವತಿಗಳ ಬಗ್ಗೆ ಹಳ್ಳಿಯ ಜನರಿಗೆ ಮಾಹಿತಿ ಕೊಡುವುದರ ಮೂಲಕ ಡಿಜಿಟಲ್ ಸಖಿಯವರು ಮಾದರಿಯಾಗಿದ್ದರೆ, ಹುಮ್ನಾಬಾದ್ ಡಿಜಿಟಲ್ ಸಖಿ ಯವರನ್ನು ಉದ್ದೇಶಿಸಿ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಡಿಜಿಟಲ್ ಮತ್ತು ಸ್ವಯಂ ಉದ್ಯೋಗದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಕೊಡಬೇಕೆಂದು ಸೂಚಿಸಿದರು ಹಾಗೆ ರೈತ ಬಾಂಧವರಿಗೆ ಗ್ರಾಮೀಣ ವಿಭಾಗದಲ್ಲಿ ಈ ಞಥಿಛಿ ಮಾಡಿಸಲು ಡಿಜಿಟಲ್ ಸಖಿ ಯವರು ಬೆಂಬಲಿಸಬೇಕೆಂದು ಕೇಳಿಕೊಂಡರು.
ಕಾರ್ಯಕ್ರಮದ ಘನಅಧ್ಯಕ್ಷತೆಯನ್ನು ವಹಿಸಿದಂತಹ ಹುಮ್ನಾಬಾದ್ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕರು ಅಧಿಕಾರಿಗಳು ಶ್ರೀಮತಿ ದೀಪಿಕಾ ನಾಯ್ಕರ್, ಮುಖ್ಯ ಅತಿಥಿಯಾಗಿ ಹುಮ್ನಾಬಾದ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಜಿ ಎಸ್ ಲಿಂಗರಾಜು, ಅತಿಥಿಯಾಗಿ ಆಗಮಿಸಿದಂತಹ ಹುಮ್ನಾಬಾದ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕರು ರಘುನಾಥ್ ಶಾಖಾ, ಪ್ರಸ್ತಾವಿಕವಾಗಿ ಡಿಜಿಟಲ್ ಸಖಿ ಯೋಜನೆ ಯೋಜನಾ ವ್ಯವಸ್ಥಾಪಕರು ಡಿಜಿಟಲ್ ಸಖಿ ಯೋಜನೆ ಮೊಹಮದ್ ಸಿರಾಜ್, ನಂತರ ಹುಮ್ನಾಬಾದ್ ಡಿಜಿಟಲ್ ಸಖಿ ಯೋಜನೆ ಕ್ಲಸ್ಟರ್ ಮ್ಯಾನೇಜರ್ ಉಮೇಶ್ ನೇಳಗೆ ಇವರು ಯುವಜನ ಸುಮಾರು ಎರಡು ವರ್ಷಗಳಿಂದ ಹೊನ್ನವ ತಾಲೂಕಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದು 176 ಮಹಿಳಾ ಉದ್ಯಮಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉದ್ಯಮಶೀಲದ ತರಬೇತಿ ನೀಡಿದ್ದು ಹಾಗೂ ಅವರಿಗೆ ಹಣದ ಸಹಾಯವನ್ನು ನೀಡಿರುತ್ತೇವೆ, ಹಾಗೂ ಸರ್ಕಾರದ ಯೋಜನೆಗಳು ಕೂಡ ಸಹಾಯ ಮಾಡಿದ್ದೇವೆ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರದ ಯೋಜನೆಗಳ ಬಗ್ಗೆ ಸಹಾಯವನ್ನು ಮಾಡಿದ್ದಾರೆ, ಹುಮ್ನಾಬಾದ್ ತಾಲೂಕಿನಲ್ಲಿ 15 ಸಖಿರವರು ಕಾರ್ಯನಿರ್ವಹಿಸುತ್ತಿದ್ದಾರೆ, 30 ಗ್ರಾಮಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ವರದಿಯನ್ನು ಮಂಡಿಸಿದರು.
ನಿರೂಪಣೆ ಶ್ರೀಮತಿ.ಪಿಂಕಿ ಮತ್ತು ಸೇಡೊಳ್ ಮಾಲಾಶ್ರೀ, ನಡೆಸಿಕೊಟ್ಟರು, ಸ್ವಾಗತ ಭಾಗ್ಯಶ್ರೀ ಆರ್, ವಂದನಾರ್ಪಣೆ ಶ್ರೀಮತಿ ರಂಜಿತ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಾದಾರರು, ಸಂಘ ಸಂಸ್ಥೆಗಳಿಂದ ರಿಲಯನ್ಸ್ ಫೌಂಡೇಶನ್ , ಸೆಲ್ಕೋ ಸೋಲಾರ್ ಸಿಬ್ಬಂದಿ ಅವರು ಕೂಡ ಭಾಗವಹಿಸಿದ್ದರು ಸುಮಾರು 40 ಕು ಹೆಚ್ಚು ವಿವಿಧ ಗ್ರಾಮಗಳಿಂದ ಭಾಗವಹಿಸಿದ್ದರು.