ಬೀದರ್

ಕೋಳಾರ್ (ಕೆ )ಗ್ರಾಮದಲ್ಲಿ ಉಚಿತ  ಆರೋಗ್ಯ ತಪಾಸಣಾ ಶಿಬಿರ””

ಸರ್ಕಾರದ ವತಿಯಿಂದ ಗ್ರಾಮೀಣ ಭಾಗದಲ್ಲಿ ಪ್ರತಿ ತಿಂಗಳು ನುರಿತ ಅನುಭವಿ ವೈದ್ಯರು ಮತ್ತು ರೋಗ ಪತ್ತೆ ಹಚ್ಚುವ ಪರಿಣಿತ ತಂತ್ರಜ್ಞರು ಗ್ರಾಮೀಣ ಭಾಗದಲ್ಲಿ  ಜನರ ಮನೆಯ ಬಾಗಿಲಿನವರೆಗೆ ಬಂದು  ಆರೋಗ್ಯ ತಪಾಸಣೆ,  ಜಾಗೃತಿ ಮತ್ತು ಆವಶ್ಯಕ ಪರೀಕ್ಷೆಗಳನ್ನು ಮಾಡುತ್ತಾರೆ. ಇದರ ಲಾಭವನ್ನು ಎಲ್ಲಾ ಜನರು ಪಡೆಯಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮುದಿನಿ ಮಲ್ಲಿಕಾರ್ಜುನ್ ಕರೆ ನೀಡಿದರು.  ಅವರು ಇಂದು ಕೊಳಾರ (ಕೆ) ಗ್ರಾಮದಲ್ಲಿ  ಕರ್ನಾಟಕ ರಾಜ್ಯ ಏಡ್ಸ್  ಪ್ರಿವೇನ್ ಷನ್ ಸೊಸೈಟಿ,  ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ,  ಸಮುದಾಯ ಆ ರೋಗ್ಯ ಕೇಂದ್ರ ಕೊಳಾರ್ ಮತ್ತು  ಬ್ರಿಮ್ಸ್ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ “”ಉಚಿತ ಆರೋಗ್ಯ ತಪಾಸಣಾ ಶಿಬಿರ”” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬ್ರಿಮ್ಸ್  ಆಸ್ಪತ್ರೆಯ ಪ್ರಯೋಗ ಶಾಲಾ ತಂತ್ರಜ್ಞರಾದ  ಅರ ವಿಂದ್ ಕುಲಕರ್ಣಿ ಅವರು ಮಾತನಾಡಿ,  ಸರ್ಕಾರವು ಗ್ರಾಮೀಣ ಭಾಗದ ಜನರಿಗಾಗಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡು ಜನರಿಗೆ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ  ಆರೋಗ್ಯ ಕೇಂದ್ರಗಳಲ್ಲಿ,  ಸಮುದಾಯ ಭವನಗಳಲ್ಲಿ,  ಪಂಚಾಯತ್ ಆವರಣದಲ್ಲಿ ಹೀಗೆ ಹತ್ತು ಹಲವಾರು ಕಡೆ ಚಿಕಿತ್ಸಾ ಶಿಬಿರಗಳನ್ನು ಆಯೋ ಜಿಸಿ,  ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿರು ತ್ತದೆ.  ಈ ಶಿಬಿರದಲ್ಲಿ ಆರೋಗ್ಯ ತಂಡವು  ಗ್ರಾಮಗಳಿಗೆ ಬಂದು ಆರೋಗ್ಯ ತಪಾಸಣೆ ಮಾಡು ತ್ತಿದೆ.  ಈ ಸಂದರ್ಭದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಷಯರೋಗ, ಆನೆಕಾಲು,  ಹೆಚ್ಐವಿ ಏಡ್ಸ್,  ಗುಪ್ತ ರೋಗಗಳು ಮುಂತಾದವುಗಳ ಬಗ್ಗೆ ಜಾಗೃತಿಯನ್ನು ಮೂಡಿಸು ವುದರ ಜೊತೆಗೆ ಉಚಿತ ಪರೀಕ್ಷೆಗಳನ್ನು ಮಾಡಿ ಜನರ ಸ್ವಾಸ್ಥವನ್ನು ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ  ಎಲ್ಲರೂ ಕೈಜೋಡಿಸಬೇ ಕೆಂದು  ತಿಳಿಸಿದರು. ಅಖಿಲ ಭಾರತ ವಿಶ್ವವಿದ್ಯಾಲಯ ನೌಕ ರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ್ ರವರು ಮುಖ್ಯ ಅತಿಥಿಗಳಾಗಿ ಭಾಗ ವಹಿಸಿ ಮಾತನಾಡಿ, ಸರಕಾರವು ಅರೋಗ್ಯ ಕ್ಷೇತ್ರದಲ್ಲಿ ಖರ್ಚು ಮಾಡುತ್ತಿರುವ ಹಣವನ್ನು ಗ್ರಾಮೀಣ ಭಾಗದ ಜನತೆಯು ಸದುಪಯೋಗ ಪಡಿಸಿಕೊಳ್ಳ ಬೇಕು ಕರೆ ನೀಡಿದರು.  ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರುವುದರಿಂದ  ಗ್ರಾಮೀಣ ಭಾಗದಲ್ಲಿ ಎಲ್ಲ ರೀತಿಯ ಆರೋಗ್ಯ ಸೇವೆಯನ್ನು ಸರ್ಕಾರ ಒದಗಿಸಿಕೊಟ್ಟಿದೆ ಎಂದರು. ಸಮುದಾಯ ಆರೋಗ್ಯ ಅಧಿಕಾರಿ  ಸೀಮಾ ಅವರು  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಎಲ್ಲಾ ಸೇವಾ ಸೌಲಭ್ಯಗಳ ಬಗ್ಗೆ ವಿವರ ವಾಗಿ ತಿಳಿಸಿದರು.  ನವಜಾತ ಶಿಶುಗಳಿಗೆ ಲಸಿಕೆಗಳನ್ನು ನೀಡುವುದು, ಗರ್ಭಿಣಿ, ಬಾಣಂತಿಯರಿಗೆ ದೊರೆಯುವ ಸೌಲಭ್ಯಗಳನ್ನು ವಿವರಿಸಿದರು. ಡಿಎಸ್ಆರ್‌ಸಿ ಆಪ್ತ ಸಮಾ ಲೋಚಕರಾದ  ಲಕ್ಷ್ಮಿ ವೈದ್ಯ ಅವರು ಲೈಂಗಿಕ ರೋಗಗಳು ಮತ್ತು ಗುಪ್ತ ರೋಗಗಳ ಬಗ್ಗೆ ಜಾಗೃತಿ ಯನ್ನು ಮೂಡಿಸಿದರು.   ಔಷಧಗಳನ್ನು ನೀಡಿದರು.
ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕರಾದ ಅಶೋಕ ಪಾಂಚಾಳ್ ಅವರು ಸಂಸ್ಥೆಯ ಧ್ಯೇಯ-ಉದ್ದೇಶ ಮತ್ತು ಕಾರ್ಯಕ್ರಮಗಳನ್ನು ವಿವರಿಸಿದರು. ಕಾರ್ಯಕ್ರಮ ದಲ್ಲಿ ಆರೋಗ್ಯ ಕೇಂದ್ರದ ಕವಿತಾ, ಲಾಲ್ ಬಹದ್ದೂರ್ ಸಂಸ್ಥೆಯ ಆನಂದ್, ಸವಿತಾ, ಭಾರತಿ, ಮಕ್ಕಳ ಆಪ್ತ ಸಮಾ ಲೋಚಕರಾದ  ವನಜಾಕ್ಷಿ ಉಪಸ್ಥಿತರಿದ್ದರು. ಸುಮಾರು 50 ಜನರ ಆರೋಗ್ಯ ತಪಾ ಸಣಾ,  ಹೆಚ್ಐವಿ ಪರೀಕ್ಷೆ,  ಸಿಫಿಲಿಸ್, ಮಧುಮೇಹ, ಹೆಪಟೈಟಿಸ್, ಕ್ಷಯದ ಕಫ ಸಂಗ್ರಹಣೆ ಮಾಡಲಾಯಿತು.

Ghantepatrike kannada daily news Paper

Leave a Reply

error: Content is protected !!