ಕೊಳಾರ್ ಬಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ
ತಾಯಿಯ ಎದೆ ಹಾಲು ಅಮೃತಕ್ಕೆ ಸಮವಾಗಿರುತ್ತದೆ. ಹೆರಿಗೆಯಾದ ಮೊದಲನೇ ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನೇ ಉಣಿಸುವುದು ಅತಿ ಉತ್ತಮವಾಗಿರುತ್ತದೆ ಎಂದು ಅರವಿಂದ್ ಕುಲಕರ್ಣಿ ಅವರು ತಿಳಿಸಿದರು. ಅವರು ಇಂದು ಕೊಳಾರ್ ಬಿ. ಗ್ರಾಮದಲ್ಲಿ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ, ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾ ಕೇಂದ್ರ ಕೊಳಾರ ಬಿ. ಗ್ರಾಮದಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡು ತ್ತಿದ್ದರು. ತಾಯಿಯ ಹಾಲಿಗೆ ಸಮವಾದ ಆಹಾರ ಮತ್ತೊಂದಿಲ್ಲ. ತಾಯಿಯ ಎದೆಯಲ್ಲಿ ಅನೇಕ ಪೌಷ್ಟಿ ಕಾಂಶಗಳನ್ನು ಹೊಂದಿದ್ದು, ಹುಟ್ಟಿದ ಕೂಡಲೇ ಮಗುವಿಗೆ ತಾಯಿಯ ಹಾಲನ್ನು ಉಣಿಸುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಸಿಗುತ್ತದೆ. ಮಕ್ಕಳಲ್ಲಿ ಬರುವ ನಿಮೋನಿಯಾ, ಕಾಮಲೆ ರೋಗಗಳನ್ನು ಬರದಂತೆ ಕಾಪಾಡ ಬಹುದು. ಆದ್ದರಿಂದ ತಾಯಂದಿರು ಮಗುವಿಗೆ ಆರು ತಿಂಗಳಿನಿAದ ಎರಡು ವರ್ಷದವರೆಗೆ ತನ್ನ ಎದೆಯ ಹಾಲನ್ನೇ ಉಣಿಸು ವುದು ಸೂಕ್ತವಾಗಿದೆ ಎಂದು ನುಡಿ ದರು. ಆರೋಗ್ಯ ಕೇಂದ್ರದ ಕವಿತಾ ಸಿಸ್ಟರ್ ಅವರು ಮಾತನಾಡಿ, ಮಗುವಿಗೆ ಹಾಲುಣಿಸುವುದರಿಂದ ಮಗುವಿನ ಮೇಲೆ ಪ್ರೀತಿ ವಾತ್ಸಲ್ಯ ಹೆಚ್ಚುವುದರೊಂದಿಗೆ ತಾಯಿ – ಮಗುವಿನ ಆರೋಗ್ಯವು ಉತ್ತಮವಾಗಿ ರುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆಗಸ್ಟ್ ಒಂದರಿAದ ಎಂಟ ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಮಾಡ ಲಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ಸಿಎಚ್ಒ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೆಲವು ಮಹಿಳೆಯರು ಮಗುವಿಗೆ ಹಾಲುಣಿ ಸುವುದರಿಂದ ತಮ್ಮ ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದು ಹಾಲನ್ನು ಉಣಿಸದೇ ಇರುವುದು ವಿಷಾಧಕರ ಸಂಗತಿ ಇಂತಹ. ಮಹಿಳೆಯರಲ್ಲಿ ರಕ್ತದೊತ್ತಡ, ಸ್ತನದ ಕ್ಯಾನ್ಸರ್ ಹಾಗೂ ಅನೇಕ ರೋಗ-ರುಜಿ ನೆಗಳಿಗೆ ಬಲಿಯಾಗುತ್ತಾರೆ. ಎದೆ ಹಾಲು ಕುಡಿಯದ ಮಗು ಆಪೌಷ್ಟಿಕತೆಯಿಂದ ಬಳಲು ತ್ತವೆ. ಆದ್ದರಿಂದ ಇಂತಹ ಮೂಢನಂಬಿಕೆಯನ್ನು ಹೊಗಲಾಡಿಸಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಆರೋಗ್ಯ ತಪಾಸಣೆಯ ಸದುಪಯೋಗವನ್ನು ತಾಯಂದಿರು ಪಡೆದುಕೊಳ್ಳ ಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ ವತಿಯಿಂದ ಆರೋಗ್ಯ ತಪಾಸಣೆ, ಬಿಪಿ ಪರೀಕ್ಷೆ, ಮಧುಮೇಹ ಪರೀಕ್ಷೆ, ಹೆಚ್ ಐ ವಿ, ಸಿಪಿಲಿಸ್ ಮುಂತಾದ ಪರೀಕ್ಷೆಗಳನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಂಚಾಳ್, ಆನಂದ್, ಭಾರತಿ, ಸವಿತಾ, ಮುಂತಾದವರು ಉಪಸ್ಥಿತ ರಿದ್ದರು.