ಬೀದರ್

ಕೇವಲ ಸಾಲ ವಿತರಣೆ ಮಾತ್ರವಲ್ಲ ಎಲ್ಲಾ ರೀತಿಯ ಸೇವೆಗಳನ್ನು ನೀಡುವಂತೆ ಅನುಮತಿಸಲಾಗಿದೆ : ಶ್ರೀಮತಿ ಮಂಜುಳಾ

ದೇಶದ ಕೃಷಿಕರ ಮತ್ತು ಗ್ರಾಮೀಣ ಭಾಗದ ಜನರ ಆರ್ಥಿಕ ಆವಶ್ಯಕತೆಗಳನ್ನು ಪೂರೈಸುವ ಮೂಲಕ ಅವರ ಜೀವನಾಡಿಯಾಗಿರುವ ಸಹಕಾರ ಸಂಘಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಭಾರತ ಸರಕಾರವು ಇತ್ತೀಚ್ಚೇಗೆ ಸಂಘಗಳ ಹೆಸರನ್ನು ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಎಂದು ಬದಾಲಾಯಿಸಿದ್ದು ಕೇವಲ ಸಾಲ ವಿತರಣೆ ಮಾತ್ರವಲ್ಲ ಎಲ್ಲಾ ರೀತಿಯ ಸೇವೆಗಳನ್ನು ನೀಡುವಂತೆ ಅನುಮತಿಸಲಾಗಿದೆ. ಸದಸ್ಯರಿಗೆ ಅನುಕೂಲವಾಗುವ ಸೇವೆಗಳನ್ನು ನೀಡುವುದು ಮತ್ತು ಆ ಮೂಲಕ ಸ್ವಾವಲಂಬಿ ಸಂಸ್ಥೆಯಾಗಿ ಬೆಳೆಸುವುದು ಇದರ ಉದ್ದೇಶವಾಗಿದೆ. ಸಂಘಗಳ ಗಣಕೀಕರಣದ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ ತರುವುದು ಮತ್ತು ಕಾರ್ಯ ದಕ್ಷತೆಯನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗಣಕೀಕರಣವು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು ರಾಜ್ಯದಲ್ಲಿ ಇರುವ 5491 ಪ್ಯಾಕ್ಸಗಳನ್ನು ಗಣಕೀಕರಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಏಕರೂಪದ ಲೆಕ್ಕಪದ್ದತಿಯ ತಂತ್ರಾಂಶವನ್ನು ಅಭಿವೃದ್ದಿ ಪಡಿಸಲಾಗಿದೆ. ಇದಕ್ಕಾಗಿ ನಮ್ಮ ರಾಜ್ಯದಲ್ಲಿ 2516 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾಮಾನ್ಯ ವೇದಿಕೆಗೆ ತರಲು ಮತ್ತು ಅವರ ದಿನನಿತ್ಯದ ವ್ಯವಹಾರದ ಸಾಮಾನ್ಯ ಲೆಕ್ಕಪತ್ರಗಳ ಏಕರೂಪದ ವ್ಯವಸ್ಥೆಯನ್ನು ಹೊಂದಲು ಇದು ಸಹಕಾರಿಯಾಗಲಿದೆ. ಸೆಪ್ಟೆಂಬರ ಕೊನೆಯ ಒಳಗೆ ಬೀದರ ಜಿಲ್ಲೆಯ ಎಲ್ಲಾ ಪ್ಯಾಕ್ಸಗಳನ್ನು ಗಣಕೀಕರಣಗೊಳಿಸಿ ಅನ್‍ಲೈನ್ ವ್ಯವಹಾರಕ್ಕೆ ತೆರೆಯಲು ಉದ್ದೇಶಿಸಲಾಗಿದೆ. ಪ್ಯಾಕ್ಸಗಳ ಸಿಬಂದಿಗಳು ತರಬೇತಿಯನ್ನು ಪಡೆದು ಆದಷ್ಟು ಶೀಘ್ರವಾಗಿ ಸಂಘಗಳನ್ನು ಕಂಪ್ಯೂಟರೀಕರಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಬೇಕು ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಮಂಜುಳಾ ಆರ್‍ರವರು ನುಡಿದರು.

ಸಹಾರ್ದ ತರಬೇತಿ ಕೇಂದ್ರ ನೌಬಾದ, ಡಿ.ಸಿ.ಸಿ ಬ್ಯಾಂಕ್ ಬೀದರ, ನಬಾರ್ಡ ಬೆಂಗಳೂರು ಮತ್ತು ಸಹಕಾರ ಇಲಾಖೆ ಬೀದರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಎರಡು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಂಘಗಳಲ್ಲಿ ಆರ್ಥಿಕ ಅವ್ಯವಾಹಾರಗಳು ಕಂಡುಬಂದಲ್ಲಿ ಸಿಬಂದಿಗಳನ್ನೇ ಜವಾಬ್ದಾರಿ ಮಾಡಿ ಕ್ರಮ ಜರುಗಿಸಲಾಗುವುದು. ಹಿಂದಿನ ಸಿಬಂದಿ ಇದ್ದರೂ ಅವರ ಮೇಲೆ ಮೊಕದ್ದಮ್ಮೆ ಹೂಡಲಾಗುವುದು. ಸಂಘದ ಎಲ್ಲಾ ಲೆಕ್ಕ ಪತ್ರಗಳನ್ನು ಕಂಪ್ಯೂಟರಿಕರಣಗೊಳಿಸುವ ಈ ಪ್ರಕ್ರಿಯೆಯಲ್ಲಿ ಸಂಘದ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಇರಬೇಕಾಗುತ್ತದೆ. ಇದಕ್ಕಾಗಿ ಎಲ್ಲರೂ ಮನಪೂರ್ವಕವಾಗಿ ಕೆಲಸ ನಿರ್ವಹಿಸಬೇಕು ಎಂಉ ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ನಬಾರ್ಡ ವ್ಯವಸ್ಥಾಪಕರಾದ ವಿಷ್ಣುವರ್ಧನ ರಾಂಪುರ ಅವರು ಮಾತನಾಡಿ ಸಹಕಾರ ಸಂಘಗಳು ಇರುವುದರಿಂದ ಗ್ರಾಮೀಣ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯಗಳು ಮತ್ತು ಕೃಷಿ ಆಧಾರಿತ ಸೇವೆಗಳು ದೊರಕುತ್ತಿವೆ. ಇಂತಹ ಉತ್ತಮ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸುವಲ್ಲಿ ಮತ್ತು ಜನರಿಗೆ ವಿಶ್ವಾಸಾರ್ಹ ಸೇವೆ ನೀಡುವಲ್ಲಿ ಗಣಕೀಕರಣ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಶಯ ಇಟ್ಟುಕೊಳ್ಳದೇ ಸಂಸ್ಥೆಯನ್ನು ಬೆಳೆಸುವ ಚಿಂತನೆ ಮಾಡಬೇಕು. ಸಂಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ತರಬೇತಿ ಪಡೆದುಕೊಳ್ಳಬೇಕಾಗುತ್ತದೆ. ಈ ತರಬೇತಿಯ ಸದುಪಯೋಗ ಪಡೆದುಕೊಂಡು ಮುಂದೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಾರ್ದ ತರಬೇತಿ ಕೇಂದ್ರ, ನಿರ್ದೇಶಕರಾದ ಸುಬ್ರಮಣ್ಯ ಪ್ರಭು, ಸ್ವಾಗತಿಸಿದರು. ಸಹಾರ್ದ ತರಬೇತಿ ಕೇಂದ್ರ ಡಿ.ಸಿ.ಸಿ ಬ್ಯಾಂಕ್ ನೌಬಾದ ಉಪನ್ಯಾಸಕರಾದ ಎಸ್ ಜಿ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಂಜು ಸ್ವಾಮಿಯವರು ಉಪನ್ಯಾಸ ನೀಡಿದರು. ಅನಿಲ್ ಪರೇಶ್ಯಾನೆ ಮತ್ತು ಮಹಾಲಿಂಗ ಕಟಗೀ ಕಾರ್ಯಕ್ರಮ ನಿರ್ವಹಿಸಿದರು.

Ghantepatrike kannada daily news Paper

Leave a Reply

error: Content is protected !!