ಬೀದರ್

ಕೃಷಿ ಸಮೃದ್ಧಿ ಕೇಂದ್ರಗಳ ಸಮರ್ಪಣೆ ವೀಕ್ಷಣೆ ಕಾರ್ಯಕ್ರಮ

ಬೀದರ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿ.ಎಂ. ಕೃಷಿ ಸಮೃದ್ಧಿ ಕೇಂದ್ರಗಳನ್ನು ಸಮರ್ಪಣೆಗೊಳಿಸಿದ ಕಾರ್ಯಕ್ರಮವನ್ನು ಇಲ್ಲಿಯ ಗಾಂಧಿಗಂಜ್‍ನ ಸಾಯಿ ಕೃಷಿ ಕೇಂದ್ರದಲ್ಲಿ ಅಧಿಕಾರಿಗಳು, ಮುಖಂಡರು, ವ್ಯಾಪಾರಿಗಳು ಹಾಗೂ ರೈತರು ವೀಕ್ಷಿಸಿದರು.
ಆರ್.ಸಿ.ಎಫ್. ವತಿಯಿಂದ ಕಾರ್ಯಕ್ರಮದ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು.
ಕೃಷಿ ಸಮೃದ್ಧಿ ಕೇಂದ್ರಗಳು ಗ್ರಾಮ ಹಾಗೂ ಬ್ಲಾಕ್ ಮಟ್ಟದಲ್ಲಿ ರೈತರಿಗೆ ನೇರವಾಗಿ ಅನೇಕ ಅನುಕೂಲಗಳನ್ನು ಕಲ್ಪಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಣ್ಣು ಪರೀಕ್ಷೆ ಹಾಗೂ ಮಣ್ಣಿನ ಗುಣ ಧರ್ಮಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಬಗ್ಗೆಯೂ ರೈತರಿಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ, ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕೃಷಿ ಅಧಿಕಾರಿ ಗಿರೀಶ್ ಸೂರ್ಯಾನ್, ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ ಮಂಗಲಗಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಮೊದಲಾದವರು ಇದ್ದರು.

Ghantepatrike kannada daily news Paper

Leave a Reply

error: Content is protected !!