ಕೃಷಿ ಪಂಪಸೆಟ್ಗಳ ಆರ್.ಆರ್. ಸಂಖ್ಯೆಗೆ ಆಧಾರ್ ಜೋಡಣೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ
ಬೀದರ: ಕೃಷಿ ಪಂಪಸೆಟ್ಗಳ ಆರ್.ಆರ್. ಸಂಖ್ಯೆಗೆ ಆಧಾರ್ ಜೋಡಣೆ ಮಾಡುತ್ತಿರುವುದು ಇದು ರೈತ ವಿರೋಧಿ ಕೆಲಸ. ಮುಂದೆ ಮೀಟರ್ ಅಳವಡಿಸಿ, ಶುಲ್ಕ ವಿಧಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೀರಿ. ಈ ಮೊದಲು 2000 ಇಸವಿಯಲ್ಲಿ ಶ್ರೀ ಎಸ್.ಎಂ. ಕೃಷ್ಣ ರವರು ಮುಖ್ಯಮಂತ್ರಿ ಇರುವಾಗ ತಮ್ಮ ಸರ್ಕಾರ (ಕಾಂಗ್ರೇಸ್) ಕೆ.ಇ.ಬಿ.ಯನ್ನು ಖಾಸಗೀಕರಣಕ್ಕೆ ವರ್ಗಾಯಿಸಿತು. 2001 ರಲ್ಲಿ ರಾಜ್ಯವ್ಯಾಪಿ ಚಳುವಳಿ ನಡೆಯಿತು. ಅದರ ಪರಿಣಾಮ ಖಾಸಗಿ ವ್ಯಕ್ತಿ ಕೈಸೇರಬೇಕಾದ ವಿದ್ಯುತ್ ಕಂಪನಿ 5 ಭಾಗವಾಗಿ ಸರ್ಕಾರದಲ್ಲಿ ಉಳಿದಿದೆ. ಇದನ್ನು ಖಾಸಗಿ ವ್ಯಕ್ತಿಗಳಿಗೆ ಈ ಕಂಪನಿ ವರ್ಗಾವಣೆಗೆ ಮುಂದೆ ಆಧಾರ್ ಲಿಂಕ್ ಮಾಡಿ, ಆನ್ಲೈನ್ ಮೂಲಕ ವ್ಯವಹಾರ ನಡೆಸುವ ಸಂಚು ಮಾಡುತ್ತಿದ್ದೀರಿ. ಆದಕಾರಣ ಈ ಕೂಡಲೇ ರೈತ ವಿರೋಧಿ ಕೆಲಸ ಕೈಬಿಡಬೇಕು ನಗರ ಮತ್ತು ಹಳ್ಳಿಗಳಲ್ಲಿ ತಾರತಮ್ಯವಿಲ್ಲದೇ ವಿದ್ಯುತ್ ವಿತರಣೆಯಾಗಬೇಕು. ಗುಣಮಟ್ಟವಿಲ್ಲದ ವಿದ್ಯುತ್ ಇದರಿಂದ ರಾಜ್ಯದ 30 ಲಕ್ಷ ಕೃಷಿ ಪಂಪಸೆಟ್ಗಳು ಒಮ್ಮೆಲೇ ಭಸ್ಮವಾದರೆ ಅದರ ರಿವೈಂಡಿAಗ್, ಮೋಟರ್ ಎತ್ತಲು, ಇಳಿಸಲು ಒಂದಕ್ಕೆ ಅಂದಾಜು 8 ಸಾವಿರ ಹಣ ಖರ್ಚಾಗುತ್ತದೆ. ಇದರಿಂದ ರೈತರನು ಬಡವನಾಗಿ, ಮಾಡಲು ಪ್ರತಿ ವರ್ಷ 2400 ಕೋಟಿ ರೈತರಿಂದ ಖರ್ಚು ಮಾಡಿಸುತ್ತೀರಿ, ಇದು ಯಾವ ನ್ಯಾಯ. ವಿದ್ಯುತ್ ಇಲ್ಲದೇ ಫಸಲ್ ನಷ್ಟ ಅಂದಾಜಿಸಿ ರಾಜ್ಯ ಸರ್ಕಾರವೇ ನಷ್ಟ ಭರಿಸಬೇಕು.ಪದೇ ಪದೇ ಕರೆಂಟ್ ಹೋದರೆ ಓದುವ ನಮ್ಮ ಮಕ್ಕಳು, ನಿಮ್ಮ ಮಕ್ಕಳಿಗೆ ಗುಣಮಟ್ಟದ ಸ್ಪರ್ಧೆ ನೀಡುವುದು ಹೇಗೆ. ಗೃಹ ಬಳಕೆಗೆ ನಿಮ್ಮ ಹಾಗೆ ನಮಗೂ ಬೇಡವೇ? ಈ ಪ್ರಶ್ನೆಗಳಿಗೆ ನೀವು ಉತ್ತರಿಸಲು ಸಾಧ್ಯವೇ? ಮಾನ್ಯ ಮುಖ್ಯಮಂತ್ರಿಗಳೇ?
ಅತೀ ಶೀಘ್ರದಲ್ಲಿ ಈ ಮೇಲಿನ ಸಮಸ್ಯೆಗಳು ಬಗೆಹರಿಸಿ, ರೈತರ ಹಿತ ಕಾಪಾಡಬೇಕು, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಅನಾಹುತಕ್ಕೆ ತಾವೇ ಜವಾಬ್ದಾರರು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಜಿಲ್ಲಾ ಘಟಕದ ವತಿಯಿಂದ ಇಂದು ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಜೆಸ್ಕಾಂ ಕಚೇರಿವರೆಗೆ ಪ್ರತಿಭಟನೆ ಮಾಡುವ ಮೂಲಕ ಬೀದರ ಜೆಸ್ಕಾಂ ಸೂಪರಿಂಟೆAಡ್ ಆಫ್ ಇಂಜಿನೀಯರ್ ಇವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷರು ð ಶ್ರೀಮಂತ ಬಿರಾದಾರ, ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಶಂಕರೆಪ್ಪ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಪ್ರಕಾಶ ಬಾವಗೆ, ಬಾಬುರಾವ ಜೋಳದಾಬಕೆ, ಸಿದ್ದಣ್ಣ ಭೂಶೆಟ್ಟಿ, ಪ್ರವೀಣ ಕುಲಕರ್ಣಿ, ಸುಭಾಷ ರಗಟೆ, ನಾಗಯ್ಯ ಸ್ವಾಮಿ, ವಿಶ್ವನಾಥ ಧರಣೆ, ಸುಮಂತ ಗ್ರಾಮಲೆ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಪಾಟೀಲ,ವಿಠಲ ಪಾಟೀಲ, ರೇವಣಸಿದ್ದಪ್ಪ ಯರಬಾಗ ಸೇರಿದಂತೆ ಅನೇಕ ರೈತ ಬಾಂಧವರು ಉಪಸ್ಥಿತರಿದ್ದರು.