ಬೀದರ್

ಕೃಷಿ ಡಿಪ್ಲೋಮಾ ಕೋರ್ಸ್ ರದ್ಧು ಎಬಿವಿಪಿ ಹೋರಾಟ.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಬೀದರ ತಾಲೂಕಿನ ಜನವಾಡಾ ಸಮೀಪವಿರುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ನಡೆಸಲಾಗುತ್ತಿದ್ದ ಈ ಭಾಗದ ರೈತರ ಮಕ್ಕಳ ಅನುಕೂಲಕ್ಕಾಗಿ 2012 ರಲ್ಲಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಎರಡು ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭವಾಗಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷ 2023-24ನೇ ಸಾಲಿನ ವಿಶ್ವವಿದ್ಯಾಲಯಕ್ಕೆ ಸ್ಥಗಿತಗೊಳಿಸಲು ಸರ್ಕಾರ ಆದೇಶ ಮಾಡಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಕೇವಲ 5000 ಶುಲ್ಕದಲ್ಲಿ ರಾಜ್ಯದ ಬಡ ರೈತ ಮಕ್ಕಳು ಈ ಕೋರ್ಸಿಗೆ ಪ್ರವೇಶ ಪಡೆಯಬಹುದಿತ್ತು. ಆದರೆ ಕಳೆದ 10 ವರ್ಷಗಳಿಂದ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಕೃಷಿ ಡಿಪ್ಲೋಮಾ ಕೋರ್ಸನ್ನು ಪಡೆದ ಅನೇಕ ವಿದ್ಯಾರ್ಥಿಗಳು ಅನೇಕ ಕ್ಷೇತ್ರಗಳಲ್ಲಿ “ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಕ್ಷೇತ್ರ ಸಹಾಯಕ್ಕೆ, ಖಾಸಗಿ ರಸಗೊಬ್ಬರ, ಬೀಜ ಔಷಧಿ ಕಂಪನಿಗಳಲ್ಲಿ ಉದ್ಯೋಗಗಳು ಬೇಗ ಲಭಿಸುತ್ತಿದ್ದವು. ಕೃಷಿ ಇಲಾಖೆ ಬೀಜ ವಿತರಣಾ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೂ ಅವಕಾಶಗಳಿದ್ದವು. ರಸಗೊಬ್ಬರ, ಔಷಧಿ ಅಂಗಡಿಗಳಿಗೆ ಪರವಾನಿಗೆ ಅವಕಾಶ ದೊರಕುತ್ತಿತ್ತು” ಹಾಗೂ ಅನೇಕ ಕೃಷಿ ಸಂಬAಧಿತ ಖಾಸಗಿ ಕಂಪನಿಗಳಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಪೂರೈಸಿದವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು. ಎಸ್.ಎಸ್.ಎಲ್.ಸಿ. ಪಾಸಾಗಿ ಕೃಷಿ ಡಿಪ್ಲೋಮಾ ಕೋರ್ಸ್ ಮುಗಿಸಿದವರಿಗೆ ಬಿ.ಎಸ್.ಸಿ. ಪದವಿ ಪಡೆಯಲು ಶೇ. 5% ರಷ್ಟು ಮೀಸಲಾತಿ ಇತ್ತು. ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಈ ಕೃಷಿ ಡಿಪ್ಲೋಮಾ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ದಿಢೀರನೆ ರಾಜ್ಯ ಸರ್ಕಾರವು ಪ್ರಸ್ತುತ ವರ್ಷದಿಂದ ಕೃಷಿ ಡಿಪ್ಲೋಮಾ ಕೊರ್ಸನ್ನು ಸ್ಥಗಿತಗೊಳಿಸಿದ್ದರಿಂದ ಕೃಷಿಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬಹುದೊಡ್ಡ ನಷ್ಟವಾಗಿದೆ. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ವತಿಯಿಂದ ಬೀದರ ಜಿಲ್ಲೆಯಲ್ಲಿ ಕೃಷಿ ಶಿಕ್ಷಣಕ್ಕೆ ಒಳ್ಳೆಯ ಹವಾಗುಣ ಹೊಂದಿದೆ. ಅದರ ಜೊತೆಗೆ ಬೇಕಾದ ಸುಸಜ್ಜಿತವಾದ ವಿದ್ಯಾಲಯ ಕಟ್ಟಡ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕೃಷಿ ಡಿಪ್ಲೋಮಾ ಕೋರ್ಸನ್ನು ಮುಂದುವರೆಸುವುದರ ಜೊತೆಗೆ ಕೃಷಿ ಮಹಾವಿದ್ಯಾಲಯ ಕೂಡ ಪ್ರಾರಂಭ ಮಾಡಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ಈ ಮೇಲಿನ ನಿಜ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಕೋರಿಕೆ ಮಾಡಿಕೊಳ್ಳುವುದೇನೆಂದರೆ, ಬೀದರ ಜಿಲ್ಲೆಯ ಕೃಷಿ ಡಿಪ್ಲೋಮಾ ಕೋರ್ಸನ್ನು ಯಥಾಪ್ರಕಾರ ಮುಂದುವರೆಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ಒಂದು ವೇಳೆ ಈ ಕೋರ್ಸನ್ನು ಮುಂದುವರೆಸದಿದ್ದರೆ ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯ ಸಂಬAಧಪಟ್ಟ ಕಾಲೇಜುಗಳನ್ನು ಬಂದ್ ಮಾಡಿ, ಮುಂದಿನ ಹೋರಾಟಕ್ಕೆ ಕರೆಯನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಶಶಿಕಾಂತ ರಾಕ್ಲೆ, ಸಿದ್ಧಾರ್ಥ ಭಾವಿದೊಡ್ಡಿ, ನಿತಿಶ ಸಿಂಧೆ, ಅಮರ, ಅರುಣ, ಅಭಿಷೇಕ ಹಾಗೂ ಕೃಷಿ ವಿದ್ಯಾರ್ಥಿಗಳಾದ ಸಂಜನಾ, ಬಸವೇಶ್ವರಿ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!