ಬೀದರ್

ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ

ಬೀದರ, ಸೆಪ್ಟೆಂಬರ್.05 :- ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಘಟಕ ಬೀದರ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯನ್ನು ಶ್ರೀ.ಸಿದ್ರಾಮಯ್ಯ. ಎಸ್.ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಜರುಗಿತು.
ಅಧ್ಯಕ್ಷಕರು, ಕೃಷಿಕ ಸಮಾಜ ಬೀದರ ರವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿಯೇ ಔರಾದ(ಬಾ) ತಾಲ್ಲೂಕು ಹಿಂದುಳಿದ ಪ್ರದೇಶವಾಗಿದ್ದು, ಒಣಬೇಸಾಯ ಪದ್ದತಿ ಅನುಸರಿಸುತ್ತಿದ್ದು, ಕಾರಂಜಾ ಜಲಾಶಯ ಮಾದರಿಯ ಒಂದು ದೋಡ್ಡಮಟ್ಟದಲ್ಲಿ ಜಲಾಶಯ ನಿರ್ಮಾಣ ಮಾಡಲು ಔರಾದ ತಾಲ್ಲೂಕು ಜಿಲ್ಲೆಯಲ್ಲಿಯೇ ಸೂಕ್ತ ತಾಲ್ಲೂಕುವಾಗಿರುತ್ತದೆ. ಸಭೆಯಲ್ಲಿ ಪ್ರಸ್ತಾಪೀಸಿದರು ಸಭೆಯ ಎಲ್ಲಾ ಸದಸ್ಯರು ಒಪ್ಪಿಗೆ ಸುಚಿಸಿದರು. ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರಕಾರ ಹಾಗೂ ಸಂಬAಧಪಟ್ಟ ನೀರಾವರಿ ಇಲಾಖೆಯ ಕೇಂದ್ರ ಸಚಿವರುಗಳು ಮತ್ತು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಬAಧಪಟ್ಟ ನೀರಾವರಿ ಇಲಾಖೆಯ ರಾಜ್ಯ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೀದರ ಜಿಲ್ಲೆಯಲ್ಲಿ ಒಂದುವಾರದಿAದ ಸತತವಾಗಿ ಮಳೆ ಹೆಚ್ಚಾಗಿರುವುದರಿಂದ ಬೆಳೆಗಳು ಹಾನಿಯಾಗಿರುತ್ತವೆ. ಆದುದರಿಂದ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಬೀದರ ಜಿಲ್ಲೆಯ ಎಲ್ಲಾ ರೈತರಿಗೆ ಮುಂಗಾರು ಮಳೆ ಹೆಚ್ಚಾಗಿರುವುದ್ದರಿಂದ ಬೆಳೆ ಹಾನಿಗೊಂಡಿರುತ್ತವೆ ಉಳಿದ ಬೆಳೆಯನ್ನು ಸುರಕ್ಷಿತವಾಗಿ ರಾಶಿ ಮಾಡಿಕೊಳ್ಳಲು ತಾಡಪತ್ರಿಗಳ ಹೆಚ್ಚಿನ ಬೇಡಿಕೆಯಿರುತ್ತದೆ. ಜಿಲ್ಲೆಗೆ ವಾರ್ಷಿಕ ಕಾರ್ಯಕ್ರಮ ಕಿಂತ ಹೆಚ್ಚಿನ ತಾಡಪತ್ರಿಗಳನ್ನು ರೈತರಿಗೆ ಪೂರೈಸಲು ಸನ್ಮಾನ್ಯ ಕೃಷಿ ಸಚಿವರಿಗೆ ಮನವಿ ಸಲ್ಲಿಸಲು ತಿರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಯಾವುಲ್ಲಾ ಕೆ. ಜಂಟಿ ಕೃಷಿ ನಿರ್ದೇಶಕರು ಬೀದರ, ಸಿದ್ರಾಮಯ್ಯಾ ಸ್ವಾಮೀ ಅಧ್ಯಕ್ಷರು, ಜಿಲ್ಲಾ ಕೃಷಿಕ ಸಮಾಜ ಬೀದರ, ರಾಜ್ಯ ಪ್ರತಿನಿಧಿಯವರಾದ ವಿಶ್ವನಾಧ ಪಾಟಿಲ್ ಮಾಡಗೂಳ, ಜಿಲ್ಲಾ ಉಪಾದ್ಯಕ್ಷರಾದ ಬಾಬುರೆಡ್ಡಿ, ಶ್ರೀ ರಮೇಶ ಪಾಟೀಲ್ ಖಜಾಂಚಿಗಳು, ಸಂತೋಷ ಹಜಾರಿ, ದಯಾನಂದ ಸ್ವಾಮೀ, ಹಾಗೂ ಇಸ್ಮಾಯಿಲ್ ಪಟೇಲ್ ವಿಶ್ವಾಂಬರ ಚಿಕಲೆ ಸದಸ್ಯರು ಕೃಷಿಕ ಸಮಾಜ ಬೀದರ ಮತ್ತು ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!