ಕಿತ್ತೂರ್ ಉತ್ಸವದಲ್ಲಿ ಸಂಗೀತ ಸುಧೆ ಹರಿಸಿದ ಗಡಿ ಪ್ರತಿಭೆ !
ಬೀದರ್ : ಇತ್ತೀಚೆಗೆ ನಡೆದ ಕಿತ್ತೂರ್ ಉತ್ಸವದಲ್ಲಿ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದ ಕಲಾವಿದರೊಬ್ಬರು ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ನಾವದಗಿ ಗ್ರಾಮದ ರೇವಪ್ಪಯ್ಯಾ ಶಿವಶರಣರ ವಂಶಸ್ಥರಾದ ಶಿವದೇವ ಸಂಸ್ಥಾನ ಮಠದ ಸಂಗೀತ ರತ್ನ ಶಿವದೇವ ಸ್ವಾಮಿ ಕಿತ್ತೂರ್ ಉತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ದಾಸವಾಣಿ ಶಾಸ್ತ್ರೀಯ ಸಂಗೀತ ನುಡಿಸಿದ್ದು ಸಭಿಕರು ತಲೆದೂಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗದುಗಿನ ಪುಟ್ಟರಾಜ ಗವಾಯಿಯವರ ವೀರಶೈವ ಪುಣ್ಯಾಶ್ರಮದಲ್ಲಿ, ಪಂಡಿತ್ ಪುಟ್ಟರಾಜ ಕವಿ ಗವಿಗಳ ಹತ್ತಿರ ಸತತ 15 ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿ ಸದ್ಯ ಮೈಸೂರ್ ಜಿಲ್ಲೆಯ ಹೊಸಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.