ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸಿ -:ಸಚಿವ ಈಶ್ವರ ಬಿ. ಖಂಡ್ರೆ
ಬೀದರ. ಆಗಸ್ಟ್ 26 :- ಬೀದರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಯ ಕೆಲಸ ಮತ್ತು ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಮುಗಿಸುವದರ ಜೊತೆಗೆ ಅವುಗಳ ಕ್ವಾಲಿಟಿ ಮತ್ತು ಕ್ವಾಂಠಿಟಿ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 2024-25ನೇ ಸಾಲಿಗೆ ಮಂಜೂರಾತಿಯಾಗಿರುವ ಅನುದಾನಕ್ಕೆ ಕ್ರೀಯಾ ಯೋಜನೆ ತಯಾರಿಸಲು ಕರೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸ್ತೆ, ಬ್ರಿಡ್ಜ್, ವಸತಿ ನಿಲಯಗಳ ಕಟ್ಟಡ, ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳ ಪ್ರಪೋಸಲ್ ನೀಡಬೇಕು ಮತ್ತು ಕಳೆದ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿAದ ತಮ್ಮ- ತಮ್ಮ ಇಲಾಖೆಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಮತ್ತು ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡುವಂತೆ ಸಂಬAಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಫಲಿತಾಂಶ ಸುಧಾರಣೆಗಾಗಿ ವಿಶೇಷ ಕ್ರಮವಹಿಸಿ, ತಮ್ಮ ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಮಾಹಿತಿ ನೀಡಿ ಅದಕ್ಕೆ ಅನುದಾನ ನೀಡಲಾಗುವುದು. ಹಳೆ ಶಾಲಾ- ಕಟ್ಟಡಗಳನ್ನು ಡೆಮಾಲಿಶ್ ಮಾಡಿ ಅವಶ್ಯಕತೆ ಇರುವಲ್ಲಿ ಹೊಸ ಕೊಠಡಿಗಳು ಹಾಗೂ ಜಮೀನು ಬೇಕಾದಲ್ಲಿ ಪ್ರಪೋಸಲ್ ಸಲ್ಲಿಸಿ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಿಗೆ ಸೂಚನೆ ನೀಡಿದರು.
ಬ್ರಿಮ್ಸ್ ಆಸ್ಪತ್ರೆಯ ಸುತ್ತಲು ಸ್ವಚ್ಚತೆ ಇರುವಂತೆ ನೋಡಿಕೊಳ್ಳಿ ಮತ್ತು ಅಲ್ಲಿ ಒಂದು ದೊಡ್ಡ ಹೈಮಾಸ್ ಲೈಟ್ ಹಾಕಬೇಕು. ಆಸ್ಪತ್ತೆಗೆ ಬರುವ ರೋಗಿಗಳಿಗೆ ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಮಾಹಿತಿ ನೀಡುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವಶ್ಯಕತೆ ಇರುವಂತಹ ಕೆಲಸ ಮತ್ತು ಕಾಮಗಾರಿಗಳ ಪ್ರಪೋಸಲ್ ನೀಡಿ. ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಮಗಾರಿಗಳು ತುರ್ತಾಗಿ ಅಗಬೇಕೆಂದು ಹೇಳಿದರು. ಕೆ.ಆರ್.ಐ.ಡಿ.ಎಲ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಿಆರ್.ಇ.ಡಿ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯನ್ನು ಸಚಿವರು ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಂದ ಪಡೆದು ತಮ್ಮ ಇಲಾಖೆಗಳಿಗೆ ಬೇಕಾಗುವ ಅಗತ್ಯ ಅನುದಾನಗಳ ಪ್ರಪೋಸಲ್ ನೀಡುವಂತೆ ಸೂಚನೆ ನೀಡಿದರು.
2023-24ನೇ ಸಾಲಿಗೆ ಬೀದರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಮೈಕ್ರೋ ಯೋಜನೆ ಅಡಿಯಲ್ಲಿ ಔರಾದ(ಬಿ) ಕ್ಷೇತ್ರಕ್ಕೆ 73.58 ಕೋಟಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ 53.44 ಕೋಟಿ, ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ 54.66 ಕೋಟಿ, ಬೀದರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ 13.03 ಕೋಟಿ, ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 24.45 ಕೋಟಿ ಮತ್ತು ಹುಮನಾಬಾದ ವಿಧಾನಸಭಾ ಕ್ಷೇತ್ರಕ್ಕೆ 52.03 ಕೋಟಿ ರೂ.ಗಳ ಅನುದಾನ ಒಟ್ಟು 271.21 ಕೋಟಿ ರೂ. ಮೈಕ್ರೋ ಹಾಗೂ 116.23 ಮ್ಯಾಕ್ರೋ ಸಮಗ್ರ ಒಟ್ಟು 387.44 ಕೋಟಿ ರೂ. ಬೀದರ ಜಿಲ್ಲೆಗೆ ಅನುದಾನ ಮಂಜೂರಾಗಿರುತ್ತದೆ.
2024-25ನೇ ಸಾಲಿಗೆ ಬೀದರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ಮೈಕ್ರೋ ಯೋಜನೆ ಅಡಿಯಲ್ಲಿ ಔರಾದ(ಬಿ)ವಿಧಾನಸಭಾ ಕ್ಷೇತ್ರಕ್ಕೆ 84.83 ಕೋಟಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ 61.32 ಕೋಟಿ, ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ 62.71 ಕೋಟಿ, ಬೀದರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ 14.95 ಕೋಟಿ, ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 28.05 ಕೋಟಿ ಮತ್ತು ಹುಮನಾಬಾದ ವಿಧಾಸಭಾ ಕ್ಷೇತ್ರಕ್ಕೆ 59.70 ಕೋಟಿ ರೂ. ಅನುದಾನ ಒಟ್ಟು ರೂ. 311.18 ಕೋಟಿ ಮೈಕ್ರೋ ಹಾಗೂ 167.56 ಮ್ಯಾಕ್ರೋ ಸಮಗ್ರ ಒಟ್ಟು 478.74 ಕೋಟಿ ರೂ.ಗಳು ಬೀದರ ಜಿಲ್ಲೆಗೆ ಅನುದಾನ ಮಂಜೂರಾಗಿದ್ದು, ಮಂಜೂರಾದ ಅನುದಾನವು 2023-24ನೇ ಸಾಲಿಗಿಂತ 2024-25ನೇ ಸಾಲಿಗೆ 91.30 ಕೋಟಿಗಳು ಹೆಚ್ಚುವರಿಯಾಗಿದ್ದು ಕಳೆದ ವರ್ಷದ ಅನುದಾನಕ್ಕೆ 123.56 ಪ್ರತಿಶತ ಹೆಚ್ಚುವರಿಯಾಗಿರುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್, ಬೀದರ ನಗರಸಭೆ ಅಧ್ಯಕ್ಷರಾದ ಮೋಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರಡಿಯಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ