ಕಾಯಕದ ಮಹತ್ವ ತಿಳಿಸಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಗೈದ ಮಹಾನುಭಾವ ವಿಶ್ವಗುರು ಬಸವಣ್ಣನವರು -ವಿ. ಸಿದ್ಧರಾಮಣ್ಣ
ಬೀದರಃ-19, ಹನ್ನೆರಡನೆಯ ಶತಮಾನದಲ್ಲಿ ಕಾಯಕವೇ ಕೈಲಾಸವೆಂಬ ಕಾಯಕದ ಮಹತ್ವ ತಿಳಿಸಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ರಾಂತಿಗೈದು ಸಮಾನತೆಯ ಸಂದೇಶ ಸಾರಿ ವಿಶ್ವಕುಟುಂಬ ಮಾಡಿರುವ ಕರ್ನಾಟಕ ಮಾರ್ಥಿನ್ ಲೂಥರ್ ಎಂದೇ ಕರೆಯಲ್ಪಡುವ ಅಣ್ಣ ಬಸವಣ್ಣನವರು ಹನ್ನೆರಡನೆಯ ಶತಮಾದಲ್ಲಿ ಮಾಡಿರುವನುಭವ ಮಂಟಪದ ಮೂಲಕ ಕ್ರಾಂತಿ, ವಚನ ಚಳುವಳಿ, ಎಂದೆಂದಿಗೂ ಪ್ರಸ್ತುತವಾಗಿದೆ ಎಂದು ಶತಾಯುಷಿ ಪೂಜ್ಯ ಶ್ರೀ ವಿ. ಸಿದ್ಧರಾಮಣ್ಣ ನುಡಿದರು.
ಅವರು ಬೀದರ ಶಿವನಗರ ಉತ್ತರ ಭಾಗದಲ್ಲಿರುವ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಬಸವ ಗೆಳೆಯರ ಬಳಗ ಏರ್ಪಡಿಸಿದ ಶ್ರಾವಣ ಮಾಸದ ಪ್ರವಚನ ಉದ್ಘಟನಾ ಸಮಾರಂಭವನ್ನು ಉದ್ಘಾಟಿಸಿ ವಚನ ಗುಮ್ಮಟ ಗ್ರಂಥ ಲೋಕರ್ಪಾಣೆ, ಬಸವ ತತ್ವ ಜ್ಞಾನ, ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಅಣ್ಣ ಬಸವಣ್ಣನವರ ಅನುಭವ ಮಂಟಪದಲ್ಲಿ 770 ಅಮರಗಂಣಂಗಳು ಮತ್ತು ಒಂದು ಲಕ್ಷ ತೊಬಂತ್ತಾರು ಸಾವಿರ ಶಿವಶರಣರಿದ್ದರು. ಬಸವಣ್ಣ ಒಬ್ಬ ತತ್ವ ಜ್ಞಾನಿಯು ಆಗಿದ್ದರು. ವಚನ ಸಾಹಿತ್ಯದ ಮೂಲಕ ಅವರು ನೀಡಿದ ಕೊಡುಗೆ ಅಗಾಧವಾಗಿದೆ ಎಂದರು.
ಕೃತಿ ಬಿಡುಗಡೆ ಮಾಡಿದ ಶರಣ ಡಾ. ಅಮರನಾಥ ಸೋಲಪುರೆ ಅವರು ಮಾತನಾಡಿ, ಅನುಭವ ಮಂಟಪದ ಮೂಲಕ ಶರಣರಿಗೆ ವಚನಗಳ ರಚನೆಗೆ ಕಾರಣಿಕೃತರಾಗಿರುವ ಬಸವಣ್ಣನವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದವರು ಆಯ್ದಕ್ಕಿ ಲಕ್ಕಮನ್ಮ, ಮಾರಯ್ಯ, ಸೇರಿದಂತೆ ಅನೇಕ ವಚನಕಾರರ ವಚನಗಳ ಅರ್ಥಗಳನ್ನು ಸರಳವಾಗಿ ತಿಳಿಯುವಂತೆ ಹೇಳಿದರು.
ಷಟಸ್ಥಳ ಧ್ವಜಾರೋಹಣ ಮಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಉಪಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಅವರು ಮಾತನಾಡಿ, 12ನೇ ಶತಮಾನದಲ್ಲಿ ಆಗಿಹೋದ ಶಿವಶರಣ ದೇವರ ದಾಸಿಮಯ್ಯ ಮತ್ತು ಇತರರು ವಚನ ಸಾಹಿತ್ಯ ಮೂಲಕ ಜಾತಿ, ಧರ್ಮ, ವರ್ಣಾಶ್ರಮದ ವಿರುದ್ಧ ಬಂಡೆದ್ದು, ಮಾನವ ಜಾತಿ ಒಂದೇ ಧರ್ಮ ಎಂದು ಸಾರಿದರು. ಅವುಗಳನ್ನು ತಮ್ಮ ನಿಜ ಜೀವನದಲ್ಲಿ ಆಚರಣೆಗೆ ತಂದಂಥವರು. ಆತ್ಮಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೆ ತಿಳಿಸಿದ ಬಸವಾದಿ ಶಿವಶರಣರು ಸಮಾಜದಲ್ಲಿರುವ ಜನಸಾಮಾನ್ಯರ ಜೀವನಲ್ಲಿ ಹಾಸುಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳÀ ಎಳೆ ಎಳೆಗಳನ್ನು ಮಾರ್ಮಿಕವಾಗಿ ತಿಳಿಸಿದ್ದರು ಎಂದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಅಣ್ಣೆಪ್ಪಾ ಪಾಟೀಲ ಗಾದಗಿ ಅವರು ಮಾತನಾಡಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ, ಹೆಂಡದ ಮಾರಯ್ಯಾ, ಅಂಗ ಸೊಂಕಿನ ಲಿಂಗತಂದೆ, ಅಕ್ಕಮ್ಮ ಅಖಂಢ ಮಂಡಲೇಶ್ವರ ಸೇರಿದಂತೆ ಅನೇಕ ಸುಪ್ರಸಿದ್ಧ ವಚನÀಕಾರರು ಸಮಾಜಕ್ಕೆ ದಿವ್ಯ ಸಂದೇಶ ನೀಡಿದರು. ಶರಣ ಶಾಂತಲಿಂಗ ಸಾವಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಶಾಲ ಪಾಟೀಲ ಖಾಜಾಪುರ, ಡಾ. ವಿಜಯಶ್ರೀ ಬಶೆಟ್ಟಿ, ಪ್ರೊ. ಮಂಗಲಾ ಸೋ. ಪಾಟೀಲ, ಸಿದ್ದಯ್ಯ ಕಾವಡಿಮಠ, ಬಸವರಾಜ ಕಲ್ಯಾಣ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ, ಅವರುಗಳು ಉಪಸ್ಥಿತರಿದ್ದರು.
ಬಸವಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಡಾ. ಗಂಗಾಂಬಿಕೆ ಅಕ್ಕರವರು ಬಸವತತ್ವ ಜ್ಞಾನ, ಅಧ್ಯಾತ್ಮಿಕ ಪ್ರವಚನ ಮಾಡಿದರು. ಅಪ್ಪಾರಾವ ನವಡೆ ದಂಪತಿಗಳು ಗುರುಪೂಜೆ ಮಾಡಿದರು. ಶಿವಕುಮÁರ ಪಾಂಚಾಳ ವಚನ ಸಂಗೀತ ಮಾಡಿದರೆ ರಾಜಕುಮಾರ ಮಿಟಕಾರಿ ವಂದಿಸಿದರು.
ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ಸಂಜೆ 6-30 ಗಂಟೆಗೆ ಅಕ್ಕ ಗಂಗಾಬಿಕಾರವರವಿಂದ ಪ್ರವಚನ ನಡೆಯಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಲಿಸಿಬೇಕೆಂದು ಕೋರಲಾಗಿದೆ.