ಕಾನೂನಿನ ಜ್ಞಾನದ ಕೊರತೆಯಿಂದ ಕಲಹಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ–ಪ್ರಕಾಶ್ ಅರ್ಜುನ್ ಬನಸೋಡೆ
ಬೀದರ: ಸಾಮಾನ್ಯ ತಿಳುವಳಿಕೆ ಮತ್ತು ಕಾನೂನಿನ ಜ್ಞಾನದ ಕೊರತೆಯಿಂದ ಕಲಹಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಉದ್ಭವಿಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾದ ಬೆಳವಣಿಗೆ ಎಂದು ಗೌರವಾನ್ವಿತ ಪ್ರಕಾಶ್ ಅರ್ಜುನ್ ಬನಸೋಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ್ ಅವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆರ್.ವಿ. ಬಿಡಪ್ ಕಾನೂನು ಮಹಾವಿದ್ಯಾಲಯ, ಬೀದರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ್, ಜಿಲ್ಲಾ ವಕೀಲರ ಸಂಘ, ಬೀದರ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 2023/2024 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ದಿನಾಂಕ 19- 7-2024 ರಂದು ಪಾಂಡುರAಗ ಮಂದಿರ, ಮಾಳೆಗಾವ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಆಧುನಿಕ ಯುಗದಲ್ಲಿ ಮನುಷ್ಯ ಆಕಾಶದಲ್ಲಿ ಹಾರಬಲ್ಲ, ಸಮುದ್ರದಲ್ಲಿ ಈಜಬಲ್ಲ, ಆದರೆ ಮಾನವೀಯತೆಯಿಂದ ಮಾತ್ರ ಬದುಕಲಾರ. ಏಕೆಂದರೆ ಪರಸ್ಪರ ಸಹ ಬಾಳ್ವೆಯ ಜೀವನ ಅತ್ಯಂತ ಅವಶ್ಯಕವಾಗಿದೆ. ಸಣ್ಣ ಪುಟ್ಟ ಕಲಹಗಳಿಗೆ ಪೊಲೀಸ್ ಠಾಣೆಗೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತಿ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಎನ್.ಎಸ್.ಎಸ್. ಶಿಬಿರಗಳು ಗ್ರಾಮಗಳಲ್ಲಿ ಉತ್ತಮ ರೀತಿಯಲ್ಲಿ ಸೇವಾ ಕಾರ್ಯದ ಜೊತೆಗೆ ಕಾನೂನು ಅರಿವು ಮೂಡಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೀದರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ಪಾಟೀಲರು, “ಅತ್ಯಂತ ಶ್ರೇಷ್ಠವಾದ ವಕೀಲ ವೃತ್ತಿಯನ್ನು ಆಯ್ದುಕೊಂಡಿರುವ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಯಕರಾಗಿ ಹೊರಹೊಮ್ಮಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತಾಗಲಿ. ಜೊತೆಗೆ ಎನ್.ಎಸ್.ಎಸ್. ಶಿಬಿರದಿಂದ ಗ್ರಾಮದ ಜನತೆಗೆ ಕಾನೂನಿನ ಅರಿವು ಮೂಡಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ. ಆರ್ . ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ.ಜಿ. ಶಟ್ಕರ್, “ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣದ ಜೊತೆಗೆ ಸಹಾಯ ಸಹಕಾರದ ಗುಣ ದೊರಕಿಸಿಕೊಡಬಲ್ಲ ಶಿಬಿರಗಳಾಗಿವೆ ಎಂದರು. ಎನ್.ಎಸ್.ಎಸ್. ಬಹಳ ಪ್ರಮುಖ ಧೇಯವೆಂದರೆ ಕಲಿಕೆಯ ಜೊತೆ ಸಮಾಜ ಸೇವೆಯ ಪರಿಕಲ್ಪನೆ ಜೊತೆ ವಿದ್ಯಾರ್ಥಿ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿದ ಸತೀಶ್ ಪಾಟೀಲ್, ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಬೀದರ್, “ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಕಾನೂನು ಅರಿವು, ಆರೋಗ್ಯ ತಪಾಸಣಾ ಶಿಬಿರ, ಸಸಿ ನೆಡುವ ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಲಿ” ಎಂದು ಹಾರೈಸುತ್ತಾ ನಮ್ಮ ಕಾನೂನು ಕಾಲೇಜಿನ ಎನ್.ಎಸ್.ಎಸ್. ಘಟಕದ ಕಾರ್ಯಗಳು ಕಾಲೇಜಿಗೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಅನಿಲ್ ಕುಮಾರ್, “ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್. ಚಟುವಟಿಕೆ ಭವಿಷ್ಯದ ಶಿಸ್ತಿನ ಜೀವನಕ್ಕಾಗಿ ಮುಖ್ಯವಾಗಿದೆ. ಹಳ್ಳಿ ಜೀವನ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಳೆಗಾವ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾರದಮ್ಮ ದಶರಥ್ ಸಂಬಾಳೆ, ಶ್ರೀ ಸಂಪತ್ ಗೇಣಿ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಶ್ರೀ ಮಹೇಶ್ ಕುಮಾರ್ ಬದ್ಬದೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುನಿಯಪ್ಪ, ಉಪ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಪಾಟೀಲ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಗಣಪತಿ, ಟಿ. ಹಿರಿಯ ಉಪನ್ಯಾಸಕರಾದ ಶ್ರೀ ಪ್ರಕಾಶ್ ಬೋರೆ, ಶ್ರೀಮತಿ ಕವಿತಾ ಮಾನ ಭಾಗವಹಿಸಿ ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು.
ವಾರ್ಷಿಕ ವಿಶೇಷ ಶಿಬಿರದ ಪ್ರಸ್ತಾವಿಕ ನುಡಿದ ಶ್ರೀ ಕೋರೆ ವಿವೇಕಾನಂದ , ಕಾರ್ಯಕ್ರಮದ ನಿರೂಪಣೆ ಕುಮಾರಿ ಭಾಗಿರತಿ, ಸ್ವಾಗತ ಗೀತೆ ಕುಮಾರಿ ಮೋನಿಕಾ, ಪ್ರಾರ್ಥನಾ ಗೀತೆ ಕುಮಾರಿ ಮಹೇಶ್ವರಿ ನಂದಿನಿ ಮತ್ತು ಸಂಗಡಿಗರು, ವಂದನಾರ್ಪಣೆ ಶ್ರೀ ಮಂಜುನಾಥ ಅವರು ನಡೆಸಿಕೊಟ್ಟರು. ದ್ವಿತೀಯ, ಪ್ರಥಮ ಮತ್ತು ತೃತೀಯ ವರ್ಷದ ಶಿಬಿರಾರ್ಥಿಗಳು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.