ಬೀದರ್

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ಮೂಲಕ ಮನವಿ

ಬೀದರ: ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶ ಹಾಗೂ ಸಂವಿಧಾನದ 371 (ಜೆ) ಕಲಂ ವಿಶೆಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ 07 ಜಿಲ್ಲೆಗಳ ರಚನಾತ್ಮಕ ಪ್ರಗತಿಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಲು ಕೋರುತ್ತಾ, ಭಾರತ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿರುವಂತೆ ಅತ್ಯಂತ ಹಿಂದುಳಿದ ನಿರ್ಲಕ್ಷö್ಯಕೊಳ್ಳಗಾದ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯೂ ಸೇರಿದೆ ಎಂದು ತಮಗೆ ಗೊತ್ತಿರುವ ವಿಷಯವಾಗಿದೆ. ಗಡಿ ಜಿಲ್ಲೆಯಾದ ಬೀದರ 371 (ಜೆ) ಕಲಂ ತಿದ್ದುಪಡಿಯಿಂದ ವಿಶೇಷ ಸ್ಥಾನಮಾನ ಪಡೆದಂತಹ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಒಂದಾಗಿದ್ದು, ದಶಕಗಳಿಂದ ವಿವಿಧ ಸರ್ಕಾರಗಳು ನಿರ್ಲಕ್ಷಿಸಿದ್ದು, ಇಲ್ಲಿ ಅಭಿವ್ರಧ್ಧಿ ಒಂದು ಮರಿಚಿಕೆ ಆಗಿ ಉಳಿದಿದೆ.
ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಆದ್ಯತೆ ನೀಡಿ ಈ ಕೆಳಕಂಡ ಬೇಡಿಕೆಗಳಿಗೆ ಕಾಲ ಮಿತಿಯಲ್ಲಿ ಸ್ಪಂದಿಸಿ ಅನುಷ್ಠಾನಗೊಳಿಸಲು ಈ ಮೂಲಕ ಪಕ್ಷಾತಿತ ಮತ್ತು ಜಾತ್ಯಾತಿತ ಹಾಗೂ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಮ್ಮ ಅಸ್ಮಿತೆಯ ಪ್ರತೀಕವಾದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭನೆ ಮೂಲಕ ಮನವಿ ಸಲ್ಲಿಸಲಯಿತು.
ನಂಜುAಡಪ್ಪ ವರದಿಯ ಶಿಫಾರಸ್ಸಿನಂತೆ ರಾಯಚೂರಿಗೆ ಸಿಗಬೇಕಾದ ಐ.ಐ.ಟಿ. ಕಿತ್ತೂರು ಕರ್ನಾಟಕ, ಧಾರವಾಡಕ್ಕೆ ಸ್ಥಳಾಂತರ ಮಾಡಿ ನಮ್ಮ ಪ್ರದೇಶಕ್ಕೆ ಭರಿಸಲಾರದಷ್ಟು ಅನ್ಯಾಯ ಮಾಡಿರುವುದರಿಂದ ಕಳೆದ ಎರಡು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ನಡೆದಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಕರ್ನಾಟಕದ ಮುಖ್ಯಮಂತ್ರಿಗಳು ಅಧಿಕೃತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಮತ್ತು ಪ್ರಧಾನ ಮಂತ್ರಿಗಳಾದ ತಮಗೆ ಸಲ್ಲಿಸಿರುವಂತೆ, ತಕ್ಷಣ ರಾಯಚೂರಿಗೆ ಏಮ್ಸ್ ಘೋಷಣೆ ಮಾಡಿ ಅನುಷ್ಠಾನಗೊಳಿಸಲು ಆಗ್ರಹಿಸಲಾಗುತ್ತದೆ. “745” ದಿನಗಳಿಂದ ಬೀದರ ನಗರದಲ್ಲಿ ಕಾರಂಜ ಜಲಾಶಯದಲ್ಲಿ ಭೂಮಿ ಕಳೆದುಕೊಂಡ 28 ಹಳ್ಳಿಗಳ ರೈತ-ಸಂತ್ರಸ್ಥರು ಧರಣಿ ಸತ್ಯಾಗ್ರಹ ಮಾಡ್ತಾ ಇದ್ದು ಶ್ರೀ ಸಿದ್ರಾಮಯ್ಯಾ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಅನೇಕ ಸಲ ಎನಾದರೊಂದು ವ್ಯವಸ್ಥೆ ಮಾಡಿಕೊಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಕಳೆದ ವರ್ಷ ಅಧಿವೇಶನದ ಸಮಯದಲ್ಲಿ ಅಧಿಕೃತವಾಗಿ ಬೆಳಗಾವಿಗೆ ನಿಯೋಗ ಕರೆದು ಶ್ರೀ ಡಿ.ಕೆ. ಶಿವಕುಮಾರ ಮಾನ್ಯ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಅವರ ಜೊತೆ ಸಭೆಯಲ್ಲಿ ಚರ್ಚಿಸಲಾಗಿತ್ತು. ರಾಜ್ಯ ಸರ್ಕಾರ ಇಲ್ಲಿಯವರೆಗೆ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಇವರ ಕಡೆಯು ಗಮನ ಹರಿಸಿ ರೈತರಿಗೆ ಮಾನವೀಯತೆ ಮಾನದಂಡದಲ್ಲಿ ಪರಿಹಾರ ನೀಡಿ ನ್ಯಾಯ ಒದಗಿಸಬೇಕು. ಬೀದರ ಜಿಲ್ಲೆಯಿಲ್ಲಿ ಹಳ್ಳಿ ಹಳ್ಳಿಗಳಿಂದಲೂ ಬಹಳಷ್ಟು ಜನ ಯುವಕರು, ರೈತರು, ಮಹಿಳೆಯರು ದೊಡ್ಡ ನಗರಗಳಾದ ಹೈದ್ರಬಾದ, ಬೆಂಗಳೂರು, ಪುಣೆ, ಕಡೆಗೆ ಗುಳೆ ಹೊಗ್ತಾ ಇದ್ದು, ಇದನ್ನು ತಪ್ಪಿಸಲು ಬೀದರ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕಾ / ಕಾರ್ಖಾನೆಗಳು ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು. ಡಾ. ನಂಜುAಡಪ್ಪ ವರದಿಯ ಶಿಫಾರಸ್ಸಿನಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದು IIಖಿ ಮಂಜೂರು ಆಗಬೇಕೆದ್ದು, ಅದು ಬೀದರ ಜಿಲ್ಲೆಯಲ್ಲಿ ಸ್ಥಾಪನೆ ಆಗಬೇಕು. ಭೌಗೋಳಿಕವಾಗಿ 100-120 ಕಿ.ಮೀ. ಅಂತರದಲ್ಲಿ ಇರುವ ಗೋವಾ ಹಾಗೂ ಧಾರವಾಡ IIಖಿ, ದೆಹಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೂಡ ಅತ್ಯಂತ ಸಮೀಪದಲ್ಲಿ IIಖಿ ಗಳ ಸ್ಥಾಪನೆ ಆಗಿದ್ದು, IIಖಿ ಹೈದ್ರಬಾದ ಹತ್ತಿರದಲ್ಲಿದೆ ಅನ್ನುವ ಕಾರಣಕ್ಕೆ ಈ ಬೇಡಿಕೆಯನ್ನು ನಿರ್ಲಕ್ಷಿಸಬಾರದು. ನಾಮ ಮಾತ್ರಕ್ಕೆ ಭೂಮಿಪೂಜೆ ಮಾಡಿದ ಅIPಇಖಿ (Iಟಿsಣiಣuಣe) ಸಂಸ್ಥೆ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ, ಈ ಕಾಮಗಾರಿಯ ಕೆಲಸವನ್ನು ತ್ವರಿತ ಗತಿಯಲ್ಲಿ ಮುಕ್ತಾಯಗೊಳಿಸಿ, ತರಬೇತಿಯನ್ನು ಪ್ರಾರಂಭಗೊಳಿಸಬೇಕು. ಬೀದರ ಜಿಲ್ಲೆಗೆ 2012-13 ರಲ್ಲಿಯೇ ಓIಒZ ಸ್ಥಾಪನೆ ಮಾಡುವ ನಿರ್ಧಾರ ಮಾಡಲಾಗಿದ್ದು, ಅದರ ಸಮರ್ಪಕ ಅನುಷ್ಠಾನ ಇನ್ನು ವರೆಗೂ ಆಗಿರುವುದಿಲ್ಲ. ಇದರ ಪ್ರಸಕ್ತ ಸ್ಥಿತಿ-ಗತಿ ಬಗ್ಗೆ ತಿಳಿದುಕೊಂಡು ಆದಷ್ಟು ಬೇಗನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಬೀದರ ಜಿಲ್ಲೆಯ ರೈಲ್ವೆ ನಿಲ್ದಾಣದ ಸೌಂದರಿಕರಣದ ಕಾರ್ಯ ಚಾಲನೆಯಲ್ಲಿದ್ದು ಇದನ್ನು ಮೇಲ್ದರ್ಜೆಗೊಳಿಸಿ, ಕನಿಷ್ಠ 6 ರೈಲ್ವೆ ಲೈನ್ (ಐiಟಿe) ಇರುವ ಹಾಗೆ ನವೀಕರಿಸಬೇಕು ಹಾಗೂ ಬೀದರನಿಂದ ಮುಂಬೈ, ನವದೆಹಲಿ ಮತ್ತು ಉತ್ತರ ಭಾರತದ ತೀರ್ಥಸ್ಥಳಗಳಿಗೆ ಹೊಸ ರೈಲುಗಳು ಮಂಜೂರು ಮಾಡಬೇಕು. 2022-23ನೇ ಸಾಲಿನಲ್ಲಿ ಸ್ಥಾಪನೆ ಆಗಿರುವ ಬೀದರ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಅವಶ್ಯಕ ಅನುದಾನ ಬಿಡುಗಡೆ ಮಾಡಬೇಕು. ಆದಷ್ಟು ಬೇಗನೆ ಅಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಇಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Ghantepatrike kannada daily news Paper

Leave a Reply

error: Content is protected !!