ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿಗೆ ಆಹ್ವಾನ
ಬೀದರಃ ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ತವಾಗಿ 76 ವರ್ಷಗಳ ಪಾದಾರ್ಪಣೆಯ ಶುಭವರ್ಷದಲ್ಲಿ, ವಿವಿಧ ಕ್ಷೇತ್ರದಲ್ಲಿ ಸೇವೆ ಮತ್ತು ಸಾಧನೆಯನ್ನು ಮಾಡಿದ 75 ಜನರಿಗೆ ರಾಜ್ಯ ಮಟ್ಟದ ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ 75 ಜನರ ಭಾವಚಿತ್ರ ಹಾಗೂ ಸೇವಾ ಕ್ಷೇತ್ರದೊಂದಿಗೆ ನಮ್ಮ ಕರ್ನಾಟಕ 50 ವರ್ಷ ಕೃತಿಯಲ್ಲಿ ಪ್ರಕಟಿಸಲಾಗುವುದೇಂದು ಪತ್ರಿಕಾ ಪ್ರಕಟಣೆಯಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.
ಬೀದರ ಕಲಬುರ್ಗಿ ಯಾದಗಿರಿ ರಾಯಚೂರು ಬಳ್ಳಾರಿ ವಿಜಯನಗರ ಕೊಪ್ಪಳ ಜಿಲ್ಲೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಪ್ರಗತಿ ಸಮಸ್ಯೆ ಸವಾಲುಗಳು, 1948ರಲ್ಲಿ ಹೈದರಾಬಾದ ರಾಜ್ಯ ಅಧಿಕೃತವಾಗಿ ವಿಲಿನಗೊಳಿಸಿದ ದೇಶದ ಪ್ರಥಮ ಗೃಹ ಮಂತ್ರಿ ಸರ್ದಾರ ವಲ್ಲಬಾಯಿ ಪಟೇಲ್ ಕಾನೂನಾತ್ಮಕ ಸಲಹೆ ನೀಡಿದ ದೇಶದ ಪ್ರಥಮ ಕಾನೂನು ಮಂತ್ರಿ ಡಾ. ಬಿ ಆರ್ ಅಂಬೇಡ್ಕರ ಹೈದರಾಬಾದ ಕರ್ನಾಟಕದ ಪ್ರಗತಿಗಾಗಿ 371 (ಜೆ) ಅನುಷ್ಠಾನಗೊಂಡು 10 ವರ್ಷಗಳ ವರ್ತಮಾನದ ಇತಿಹಾಸ, 2019 ರಲ್ಲಿ ಕಲ್ಯಾಣ ಕರ್ನಾಟಕ ನಾಮಕರಣ 2009 ರಿಂದ 2014 ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮರು ನಾಮಕರಣಗೊಂಡ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕುತಾಗಿ ನಮ್ಮ ಕರ್ನಾಟಕ 50 ವರ್ಷ ಕೃತಿಯನ್ನು ಪ್ರಕಟಣೆಯನ್ನು ಮಾಡಲಾಗುವುದು.
ಹೋರಾಟ, ರಾಜಕೀಯ, ಸಾಹಿತ್ಯ ಸಾಂಸ್ಕೃತಿಕ, ಕೃಷಿ ಕೈಗಾರಿಕಗೆ, ಸಂಘ ಸಂಸ್ಥೆಗಳ ಮೂಲಕ ಮಾಡಿರುವ ಸೇವೆ ಮಹಿಳಾ ಮತ್ತು ಮಕ್ಕಳ ವಿಕಲಚೇತನರ ಸೇವೆ, ಆಡಳಿತ ಸೇವೆ, ಕಾರ್ಮಿಕ ಸೇವೆ, ಮಾಧ್ಯಮ ಸೇವೆ, ಕಲೆ ಚಿತ್ರ ಕಲೆ, ಉನ್ನತ ಶಿಕ್ಷಣ ಉನ್ನತ ಸೇವೆ, ಅರಣ್ಯ ತೋಟಗಾರಿಕೆ, ಸಾರ್ವಜನಿಕ ಗ್ರಂಥಲಾಯ ಇಲಾಖೆ, ಗ್ರಾಮೀಣ ಮತ್ತು ಪಂಚಾಯತ ಇಲಾಖೆ ಮೂಲಕ ಮಾಡಿರುವ ಪ್ರಗತಿ ಸೇವೆ ಪರಿಗಣಿಸಿ, ರಾಜ್ಯ ಮಟ್ಟದ ಕಲ್ಯಾಣ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು 16-09-2023 ಕೊನೆಯ ದಿನಾಂಕವಾಗಿರುತ್ತದೆ. ಎರಡು ಭಾವಚಿತ್ರ ಸಂಕ್ಷಿಪ್ತ ಸೇವಾಸಾಧನೆ 10 ಪುಟಗಳ ಮಾಹಿತಿಯೊಂದಿಗೆ, ಅಧ್ಯಕ್ಷರು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ 17-4-318/2 ಸಿ ಎಂ ಸಿ ಕಾಲೋನಿ ಮೈಲೂರು ಬೀದರ 585403 ದೂ ಸಂಖ್ಯೆಃ 9901612139,vಞseಟಿbiಜಚಿಡಿ@gmಚಿ