ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಸಾಮಾನ್ಯ ಸಭೆ ಸಿಂಧನೂರಿನಲ್ಲಿ
ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಕೇಂದ್ರ ಸಮಿತಿ ಹಾಗೂ ವಿಭಾಗದ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳ ಸಾಮಾನ್ಯ ಸಭೆಯನ್ನು ಒಕ್ಕೂಟದ ಗೌರವಾಧ್ಯಕ್ಷರಾದ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರ ಅಧ್ಯಕ್ಷತೆಯಲ್ಲಿ ಸಿಂಧನೂರಿನ ಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ಆಶ್ರಮದ ಸಭಾಂಗಣದಲ್ಲಿ ಸೋಮವಾರ 07-08-2023 ರ ಬೆಳಿಗ್ಗೆ 10:30 ಗಂಟೆಗೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಬೀದರನಲ್ಲಿ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಅದ್ದುರಿಯಾಗಿ ಆಯೋಜಿಸಲಾಗಿತ್ತು ಇಂದು 2ನೇ ವಾರ್ಷೀಕೋತ್ಸವ ಆಯೋಜನೆಯ ರೂಪರೇಶ, ಸ್ಥಳ ಮತ್ತು ದಿನಾಂಕ ನಿಗದಿ ಚರ್ಚಿಸುವ ಜೊತೆಗೆ ಬರುವ ಸೆಪ್ಟೆಂಬರ್ 17 ಕ್ಕೆ ಹೈದರಾಬಾದ್ ಕರ್ನಾಟಕ ವಿಮೋಚನೆಗೊಂಡು 75 ವರ್ಷ ಪೂರೈಸುವ ನಿಮಿತ್ಯ 7 ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲು ಅಮೃತ ಮಹೋತ್ಸವದ ಸಂಭ್ರಾಮಾಚರಣೆಯನ್ನು ಆಚರಿಸುವ ಕುರಿತು ಚರ್ಚಿಸಲಾಗುವುದು ಹಾಗೂ ಒಕ್ಕೂಟದ ನಿಯೋಗ ಶಿಘ್ರದಲ್ಲೆ ಶ್ರೀ. ಮಾತಾ ಮಂಜಮ್ಮ ಜೊಗತಿಯವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳಿಗೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಚಿವರಿಗೆ ಹಾಗೂ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ, ಒಕ್ಕೂಟದ ಬೇಡಿಕೆಗಳ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಗುವುದು ಜೊತೆಗೆ ಅಕಾಡೆಮಿ ಪ್ರಾಧಿಕಾರಗಳಲ್ಲಿ ನಮ್ಮ ಭಾಗಕ್ಕೆ ಅವಕಾಶ ನೀಡುವುದು, ಮಾಶಾಸನದ ಮೊತ್ತ ಹೆಚ್ಚಳ ವಯೋಮಾನ ಸಡಲಿಕೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಗುವುದು, ಸಭೆಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಕೇಂದ್ರಸಮಿತಿಯ ಎಲ್ಲಾ ಪಧಾಧಿಕಾರಿಗಳು, ಎಲ್ಲಾ ಜಿಲ್ಲಾ ಮತ್ತು ತಾಲೂಕ ಅಧ್ಯಕ್ಷರು ಪಾಲ್ಗೊಳ್ಳಲಿದ್ದು, ಹಿರಿಯ ಕಲಾವಿಧರು ಕೂಡ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನಿಡುವಂತೆ ಒಕ್ಕೂಟದ ಮೂಲಕ ವಿಜಯಕುಮಾರ ಸೋನಾರೆ ಹಾಗೂ ಪ್ರಕಾಶ ಅಂಗಡಿ ಕನ್ನೆಳ್ಳಿ ಕೋರಿದ್ದಾರೆ.