ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಸನ್ಮಾನ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕವಾಗಿರುವ ವಿಧಾನ ಪರಿಷತ್ತು ಸದಸ್ಯರಾದ ಸನ್ಮಾನ್ಯ ಶ್ರೀ ಅರವಿಂದ ಕುಮಾರ ಅರಳಿ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ನಾಗಶೆಟ್ಟಿ ಧರಮಪೂರ್, ವಿಜಯಕುಮಾರ ಅಷ್ಟೂರೆ, ಸುನೀಲ ಭಾವಿಕಟ್ಟಿ, ಶರದ್ ಘಂಟೆ, ಸಂಜುಕುಮಾರ್ ಸಿರ್ಸೆ, ಜಾನಸನ್ ಸೇರಿದಂತೆ ಇತರರು ಉಪಸ್ಥತರಿದ್ದರು