ಕಲಬುರಗಿ

ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ : ಎಸ್.ಡಿ.ಶರಣಪ್ಪ

ಕಲಬುರಗಿ,ಆ.22-ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ ಹುದ್ದೆಗೆ 2009ನೇ ವೃಂದದ ಐಪಿಎಸ್ ಅಧಿಕಾರಿ ಎಸ್.ಡಿ.ಶರಣಪ್ಪ ಅವರು ನಿಯೋಜನೆಗೊಂಡಿದ್ದಾರೆ.
ಪೊಲೀಸ್ ಕಮಿಷನರ್ ಆಗಿದ್ದ ಚೇತನ್ ಆರ್.ಅವರು ತಿಂಗಳ ಹಿಂದೆಯೇ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು. ಈಗ, ರೈಲ್ವೆ ಪೊಲೀಸ್ ಡಿಐಜಿ ಆಗಿದ್ದ ಎಸ್.ಡಿ.ಶರಣಪ್ಪ ಅವರನ್ನು ನಗರ ಪೊಲೀಸ್ ಕಮಿಷನರ್ ಹುದ್ದೆಗೆ ನಿಯೋಜನೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಎಸ್.ಡಿ.ಶರಣಪ್ಪ ಅವರು ಮೂಲತ: ಆಳಂದ ತಾಲ್ಲೂಕಿನ ಖಜೂರಿ ಗ್ರಾಮದವರು. ಇದೇ ಮೊದಲ ಬಾರಿಗೆ ತವರು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!