ಬೀದರ್

ಕಲಬುರಗಿಗೆ ಒಲಿದ ಕ್ಯಾಪ್ಟನ್ | ಬೀದರ್‌ನಿಂದ ಏಕೈಕ ಆಟಗಾರ ಸೇರ್ಪಡೆ ರಾಯಚೂರು ವಲಯ ತಂಡಕ್ಕೆ ಆಯ್ಕೆ

ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ರಾಯಚೂರ ವಲಯದ 16 ವರ್ಷದೊಳಗಿನ ಯುವ ಕ್ರಿಕೆಟಿಗರ ತಂಡ ರಚನೆ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಂದ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯಮಟ್ಟಕ್ಕೆ ರಾಯಚೂರು ವಲಯದ ತಂಡ ರಚನೆ ಸಂಬAಧ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆ ಕ್ರೀಡಾಪಟುಗಳು ಒಳಗೊಂಡ ರೋಜರ್ ಬಿನ್ನಿ, ಜಿ.ಆರ್. ವಿಶ್ವನಾಥ, ಬಿಜ್ರೇಶ್ ಪಟೇಲ್, ಬಿ.ಎಸ್. ಚಂದ್ರಶೇಖರ ಮತ್ತು ಎರಪಲ್ಲಿ ಪ್ರಸನ್ನ ಹೆಸರಿನ ಐದು ತಂಡಗಳ ಪಂದ್ಯ ಇತ್ತೀಚೆಗೆ ನಗರದ ನೆಹರು ಕ್ರೀಡಾಂಗಣ ಹಾಗೂ ಮಾಣಿಕನಗರ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ತಂಡಗಳಲ್ಲಿ ಅತ್ಯುತ್ತಮವಾಗಿ ಆಟವಾಡಿದವರನ್ನು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲು ವಲಯ ತಂಡವನ್ನು ರಚನೆ ಮಾಡಲಾಗಿದೆ.
ಅಂಕಿತರಡ್ಡಿ ರಾಯಚೂರು (ನಾಯಕ), ಅರ್ಪಿತ ಬಾಗಲಕೋಟ, ಬಸವಚೇತನ ರಾಯಚೂರು, ಸಮರ್ಥ ವಿಜಯಪುರ, ಆದಿತ್ಯ ಕಲಬುರಗಿ, ಆದರ್ಶ ರಾಠೋಡ್ ವಿಜಯಪುರ, ದತ್ತಾತ್ರೇಯ ಜಾಧವ್ ಕಲಬುರಗಿ, ಸಮರ್ಥ ವಿಜಯಪುರ, ಝಕವಾನ್ ಹಬೀಬ್ ಕಲಬುರಗಿ, ಶ್ರೀನಿವಾಸ ಕಲಬುರಗಿ, ಶ್ರೇಯಸ್ ಪಾಟೀಲ್ ವಿಜಯಪುರ, ರೋಹಿತ್ ಬಾಗಲಕೋಟ, ಕಾರ್ತೀಕ ಕಲಬುರಗಿ, ಕೃಷ್ಣ ಬೀದರ್, ಯಸ್ ವಿಜಯಪುರ ಅವರು ತಂಡದಲ್ಲಿದ್ದಾರೆ.
ತAಡಕ್ಕೆ ಪ್ರಶಾಂತ ಹಜಾರಿ ಕೋಚ್ ಹಾಗೂ ಸೈಯದ್ ಫಾರುಖ್ ಅಹ್ಮದ್ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ರಾಯಚೂರು, ಶಿವಮೊಗ್ಗ, ತುಮಕೂರು, ಧಾರವಾಡ, ಮಂಗಳೂರು, ಮೈಸೂರು ವಲಯ ತಂಡಗಳ ಮಧ್ಯೆ ಸೆಪ್ಟೆಂಬರ್ ತಿಂಗಳಲ್ಲಿ ಪಂದ್ಯ ನಡೆಯುವ ಸಾಧ್ಯತೆ ಎಂದು ಕೆಎಸ್‌ಸಿಎ ರಾಯಚೂರು ವಲಯದ ಅಧ್ಯಕ್ಷ ಸುಧೇಂದ್ರ ಸಿಂಧೆ ತಿಳಿಸಿದ್ದಾರೆ.
ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕನ್ವೇನರ್ ಸುಜೀತ್ ಬೋರಾ, ವೀಕ್ಷಕ ಅರ್ಷದ್ ಹುಸೇನ್, ರಾಯಚೂರು ವಲಯದ ಬೀದರ್ ಜಿಲ್ಲಾ ಸಂಚಾಲಕ ಕುಶಾಲ ಪಾಟೀಲ್ ಇತರರಿದ್ದರು.

Ghantepatrike kannada daily news Paper

Leave a Reply

error: Content is protected !!