ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಂದಿನಗರ ಆವರಣಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 15ನೇ ಅಗಸ್ಟ್, 2023ರಂದು ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ನಂದಿನಗರ ಆವರಣದಲ್ಲಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ|| ಕೆ.ಸಿ. ವೀರಣ್ಣರವರು ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು, ವಿಶ್ವವಿದ್ಯಾಲಯದ ಎಲ್ಲಾ ಅಧಿಕಾರಿಗಳು, ಶಿಕ್ಷಕ ಮತ್ತು ಶಿಕ್ಷಕೇತÀರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ|| ಕೆ.ಸಿ. ವೀರಣ್ಣನವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ ಭಾರತ 76 ವಸಂತಗಳನ್ನು ಪೂರೈಸಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ರಾಜಕೀಯದಲ್ಲಿ ತನ್ನದೇ ಆದ ಹೆಜ್ಜೆಗುರುತನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿದೆ ಎಂದು ತಿಳಿಸುತ್ತ, ಇಂದಿನ ಈ ಸ್ವತಂತ್ರ್ಯ ರಾಷ್ಟ್ರದ ಹಿಂದೆ ಹಲವರ ಹೋರಾಟ, ಬಲಿದಾನ ಹಾಗೂ ಅವಿರತ ಪರಿಶ್ರಮವಿದೆ ಎಂದು ಉಲ್ಲೇಖಿಸಿದರು. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪಶುವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಾಧಿಸಿದ ಶ್ರಮದ ಫಲವಾಗಿ ಭಾರತ ಇಂದು ಜಗತಿನಲ್ಲಿ ಹಾಲು, ಮೊಟ್ಟೆ ಹಾಗೂ ಮಾಂಸದ ಉತ್ಪಾದನೆಯಲ್ಲಿ ಪ್ರಥಮ 10 ಸ್ಥಾನಗಳಲ್ಲಿ ಇದೆ. ಬೀದರ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಲವಾರು ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಹೊಂದಿದ್ದು, ಸಾರ್ವಜನಿಕ ಕ್ಷೇತ್ರಕ್ಕೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ಖಾಸಗಿ ಹೈನೋದ್ಯಮ, ಕುಕ್ಕುಟ ಉದ್ಯಮ, ಕುರಿ-ಮೇಕೆ ಸಾಕಾಣಿಕೆ, ತಳಿ ಸಂವರ್ಧನೆ ಹಾಗೂ ಪಶು ಉತ್ಪನ್ನಗಳ ಸಂಸ್ಕರಣೆ ಕ್ಷೇತ್ರಗಳಲ್ಲಿ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸಲು ಅವಶ್ಯವಿರುವ ನಿಟ್ಟಿನಲ್ಲಿ ನಮ್ಮ ಶಿಕ್ಷಣವನ್ನ ಸಜ್ಜುಗೊಳಿಸಬೇಕಾಗಿದೆ. ಇಂದಿನ ಶಿಕ್ಷಣದಲ್ಲಿ ಕೇವಲ ಜ್ಞಾನದ ವರ್ಗಾವಣೆಯಾದರೆ ಸಾಲದು ಅದರೊಂದಿಗಿನ ಅವಶ್ಯ ಕೌಶಲ್ಯವನ್ನು ನೀಡಬೇಕಾಗಿರುವುದು ನಮ್ಮಜವಾಬ್ದಾರಿ. ಆದ್ದರಿಂದ ನಮ್ಮ ಶಿಕ್ಷಣವನ್ನು ಕೌಶಲ್ಯಭರಿತವಾಗಿಸಿ ಪದವೀಧರರನ್ನು ನೌಕರರನ್ನಾಗಿಸದೇ ಉದ್ಯಮಿಗಳನ್ನಾಗಿಸುವತ್ತ ಚಿಂತಿಸಬೇಕಾದ ಅವಶ್ಯಕತೆ ಇದೆ ಎಂದು ಕುಲಪತಿಗಳು ತಿಳಿಸಿದರು. ವಿಶ್ವವಿದ್ಯಾಲಯದ ಪ್ರಮುಖ ಅಂಗಗಳಾದ ವಿಸ್ತರಣೆ ಹಾಗೂ ಸಂಶೋಧನೆ ವಿಭಾಗಗಳಲ್ಲಿ ಲಭ್ಯ ಸಂಪನ್ಮೂಲಗಳನ್ನು ಬಳಸಿ ವಿನೂತನ ಚಟುವಟಿಕೆಗಳನ್ನು ಕೈಗೊಳ್ಳುವುದು ಆದ್ಯತೆಯಾಗಿದೆ ಎಂದರಲ್ಲದೆ, ಸಂಘಟಿತ ಪ್ರಯತ್ನದಿಂದ ಪಶುಪಾಲನಾ ಹಾಗೂ ಮೀನುಗಾರಿಕೆ ಅಭಿವೃದ್ಧಿಗೆ ಶ್ರಮಿಸಲು ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದÀ ವತಿಯಿಂದ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿತ್ತು ಹಾಗೂ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ವಿಶ್ವವಿದ್ಯಾಲಯದ ನಂದಿನಗರ ಆವರಣದಲ್ಲಿ 77ನೇ ಸ್ವತಂತ್ರ್ಯ ದಿನಾಚರಣೆ