ಬೀದರ್

ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ

ಕರಾಶಿ ಸಂಸ್ಥೆಯ ಕರ್ನಾಟಕ ಪದವಿಪೂರ್ವ ಕಾಲೇಜು, ಬೀದರ ಹಾಗೂ ವಿಭಾಗೀಯ ಪತ್ರಾಗಾರ ಕಛೇರಿ, ಕಲಬುರಗಿ ಇವರ ಸಹಯೋಗದಲ್ಲಿ “ಇತಿಹಾಸ ರಚನೆಯಲ್ಲಿ ಮೂಲಾಧಾರಗಳ ಪಾತ್ರ” ಎಂಬ ವಿಷಯದ ಮೇಲೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ದಿನಾಂಕ: 22.08.2023 ರಂದು ಬೆಳಗ್ಗೆ 11. 00ಕ್ಕೆ ನಗರದ ಮನ್ನಳ್ಳಿ ರಸ್ತೆಯ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಬಂಧ ಎರಡರಿಂದ ಮೂರು ಪುಟ ಮೀರದಂತೆ ಕನ್ನಡದಲ್ಲಿ ಮಾತ್ರ 30 ನಿಮಿಷಗಳಲ್ಲಿ ಬರೆಯಬೇಕು. ದಿನಾಂಕ 24.08.2023ರಂದು ನಡೆಯುವ ಪತ್ರಾಗಾರ ಕೂಟ –2023: ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಸಮಾರಂಭದಲ್ಲಿ ಪುಸ್ತಕ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನೀಲೇಶ ರತ್ನಾಕರ್ 9739334789 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವವರಾಜ ಬಲ್ಲೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!