ಬೀದರ್

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲು ಪೂಜಾರಿ ಮನವಿ.

ಬೆಂಗಳೂರು : ಕರ್ನಾಟಕದ ಗಡಿ ಪ್ರದೇಶದ ಅಭಿವೃದ್ಧಿ ಹೊಂದುವ ಮೂಲ ಉದ್ದೇಶದಿಂದ ಉದಯಿಸಿರುವ ಈ ಇಲಾಖೆಗೆ ಹೊರನಾಡಿನಲ್ಲಿ ಕನ್ನಡ ಸೇವೆ ಮಾಡುತ್ತಿರುವ ಕನ್ನಡಿಗರಿಗೆ ಮೂಲ ಸಮಸ್ಯೆಗಳನ್ನು ಗಮನ ಇರುತ್ತದೆ ಕಾರಣ ತಾವು ತೆಲಂಗಾಣ ಪ್ರದೇಶದಲ್ಲಿ ಕನ್ನಡ ಸೇವೆ ಮಾಡುತ್ತಿರುವ ನನಗೆ ಅಂದರೆ ಧರ್ಮೇಂದ್ರ ಪೂಜಾರಿ ಅಧ್ಯಕ್ಷ ರಾಗಿ ನೇಮಕ ಮಾಡಿ ಕನ್ನಡ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಸಚಿವರಿಗೆ  ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದರಾಬಾದ್ ಅಧ್ಯಕ್ಷ ಧರ್ಮೇಂದ್ರ ಪೂಜಾರಿ  ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಅವರು ಇಂದು ಮಾಧ್ಯಮ ದೊಂದಿಗೆ ಮಾತನಾಡಿದ ಧರ್ಮೇಂದ್ರ ಪೂಜಾರಿ ಬಗ್ದೂರಿ ಅವರು ನಾನು ಸುಮಾರು 20 ವರ್ಷ ಗಳಿಂದ ಕನ್ನಡ ಸೇವೆ ಮಾಡುತ್ತಿದ್ದೇನೆ ತಾವು ನನಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಹೊಸ ಇತಿಹಾಸ ನಿರ್ಮಾಣ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು..
ಅವರು ಇಂದು ವಿಧಾನಸೌಧದಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿಯಾಗಿ ಮನವಿ ಮಾಡಿದರು.. ಕರ್ನಾಟಕದ ವ್ಯಕ್ತಿಗಳಿಗೆ ಕರ್ನಾಟಕ ಗಡಿ ಪ್ರದೇಶದ ಬಗ್ಗೆ ಮಾಹಿತಿಯನ್ನು ಇರುವುದಿಲ್ಲ. ಹೊರರಾಜ್ಯದಲ್ಲಿ ಇರುವ ಹಾಗೂ ಕನ್ನಡ ಹೊರಾಟಗಾರರಿಗೆ ಮಾತ್ರ ಹೊರನಾಡಿನಲ್ಲಿ ಜೀವಿಸುತ್ತಿರುವ ಕನ್ನಡಿಗರ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ ಹೀಗಾಗಿ ನಮಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂದು  ಧರ್ಮೇಂದ್ರ ಪೂಜಾರಿ ಬಗ್ದೂರಿ ಮನವಿ ಮಾಡಿದರು.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳಾದ ತೆಲಂಗಾಣ. ಮಹಾರಾಷ್ಟ್ರ. ಆಂಧ್ರಪ್ರದೇಶದ. ಕೇರಳ. ತಮಿಳುನಾಡಿನಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡುವುದರ ಮೂಲಕ ಅಲ್ಲಿನ ಕನ್ನಡಿಗರಿಗೆ ಸ್ಫೂರ್ತಿ ಯಾಗುವ ಕೆಲಸದ ಜೊತೆಗೆ ಗಡಿ ಭಾಗದಲ್ಲಿ ಮುಚ್ಚಿ ಹೋಗಿರುವ ಕನ್ನಡ ಶಾಲೆಗಳನ್ನು ಪುನರುಜ್ಜೀವನ ಮಾಡುವ ಕೆಲಸ ಆಗಬೇಕಾಗಿದೆ.  ಈ ನಿಟ್ಟಿನಲ್ಲಿ ನನಗೆ ಅವಕಾಶವನ್ನು ನೀಡಬೇಕಾಗಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು..
Ghantepatrike kannada daily news Paper

Leave a Reply

error: Content is protected !!