ಕರ್ನಾಟಕ ಕ್ರೆöÊಸ್ತರ ರಕ್ಷಣಾ ವೇದಿಕೆಯಿಂದ ರಾಜ್ಯಪಾಲರ ನಡೆಯನ್ನು ಖಂಡಿಸಿ ಪ್ರತಿಭಟನೆ
ಬೀದರ: ಕರ್ನಾಟಕ ಕ್ರೆöÊಸ್ತರ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕದಲ್ಲಿ ಮಾನ್ಯ ಘನವೆತ್ತ ರಾಜ್ಯಪಾಲರು ಥಾವರ್‌ಚಂದ್ ಗೆಹ್ಲೋಟ್ ರವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಮಾನ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಆತುರದ ಹಾಗೂ ಅವೈಜ್ಞಾನಿಕವಾಗಿರುತ್ತದೆ. ಏಕೆಂದರೆ, ಮೂಡಾ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪಾತ್ರವೇನು ಇರುವುದಿಲ್ಲ ಮತ್ತು ಕರ್ನಾಟಕದ 6.82 ಕೋಟಿ ಕನ್ನಡಿಗರು ಆರಿಸಿರುವಂತ ಸರ್ಕಾರದ ಮುಖ್ಯಮಂತ್ರಿಗಳ ವಿರುದ್ಧ ತರಾತುರಿಯಲ್ಲಿ ಯಾವುದೋ ಖಾಸಗಿ ದೂರಿನನ್ವಯ 24 ಗಂಟೆಗಳ ಒಳಗಾಗಿ ಶೋಕಾಸ್ ನೋಟಿಸನ್ನು ನೀಡಿ, ಎಲ್ಲಾ ಕಾನೂನಿನ ಹಾಗೂ ರಾಜಭವನದ ಘನತೆಗೆ ಕುಂದನ್ನುAಟು ಮಾಡಿದ್ದಾರೆ.
ಏಕೆಂದರೆ, ಮೂಡಾ ಪ್ರಕರಣದ ಮುಂಚೆಯೂ ಪ್ರಾಸಿಕ್ಯೂಶನ್ ಅನುಮತಿಗಾಗಿ ಸುಮಾರು ವರ್ಷಗಳಿಂದ ಬಾಕಿಯಿರುವ ದೂರುಗಳನ್ನು ಪರಿಗಣಿಸದೇ, ಕೇವಲ ಖಾಸಗಿ ದೂರಿನ ಮೇಲೆ 24 ಗಂಟೆಯ ಒಳಗೆ ಶೋಕಾಸ್ ನೋಟಿಸ್ ನೀಡಿರುವುದು ಏಕೆ? ದೂರುದಾರರ ಮೇಲೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು 250,00,000/- (ಇಪ್ಪತ್ತೆöÊದು ಲಕ್ಷ) ಜುಲ್ಮಾನೆಯನ್ನು ಹಾಕಿರುತ್ತದೆ. ಶ್ರೀ ಟಿ.ಜೆ. ಅಬ್ರಾಹಂ ಇವರ ಮೇಲೆ ಈಗಾಗಲೇ ಬ್ಲಾö್ಯಕ್‌ಮೇಲೆ ಮಾಡಿರುವ ಕೇಸು ಸಹ ಇರುತ್ತವೆ. ಇಂಥ ವ್ಯಕ್ತಿ ಖಾಸಗಿ ದೂರಿನ ಮೇಲೆ ಆತುರದ ಕ್ರಮವನ್ನು ತೆಗೆದುಕೊಂಡಿರುವ ಮಾನ್ಯ ಘನವೆತ್ತ ರಾಜ್ಯಪಾಲರು ಏಕಪಕ್ಷೀಯ ಹಾಗೂ ದ್ವೇಷದ ರಾಜಕಾರಣ ಎನ್ನುವಂತಿದೆ. ಈ ಕ್ರಮದಿಂದ ಕರ್ನಾಟಕದ 6.82 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ.
ಅಲ್ಲದೇ ಮಾನ್ಯ ಘನವೆತ್ತ ರಾಜ್ಯಪಾಲರ ಅನುಮತಿಗಾಗಿ ಈಗಾಗಲೇ ಮಾನ್ಯ ಮುರುಗೇಷ ನಿರಾಣಿ, ಶಶಿಕಲಾ ಜೊಲ್ಲೆ, ಶ್ರೀ ಜನಾರ್ಧನ್ ರೆಡ್ಡಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿಯವರ ಮೇಲೆ ಮಾನ್ಯ ಲೋಕಾಯುಕ್ತ, ಎಸ್.ಆಯ್.ಟಿ. ಸಹ ಚಾರ್ಜ್ಶಿಟಿಗಾಗಿ ಗಣಿಗಾರಿಕೆ ವಿಷಯದಲ್ಲಿ ಮೋಸ ಮಾಡಿರುವ ವಿಷಯದಲ್ಲಿ ಸುಮಾರು 9 ತಿಂಗಳಿAದ ಅನುಮತಿಗಾಗಿ ಅರ್ಜಿ ಸಲ್ಲಿಸಿದರೂ ಇಲ್ಲಿಯವರೆಗೆ ಏಕೆ ಅನುಮತಿ ನೀಡಿಲ್ಲ, ಮಾನ್ಯ ಕರ್ನಾಟಕ ಲೋಕಾಯುಕ್ತರ ಅರ್ಜಿಗೆ ಇಲ್ಲದ ಮಾನ್ಯತೆ ಖಾಸಗಿ ದೂರಿಗೆ ಏಕೆ?
ಇದಲ್ಲದೇ ಮಾನ್ಯ ಸಂವಿಧಾನಿಕ ಹುದ್ದೆಯಲ್ಲಿರುವ ಘನವೆತ್ತ ರಾಜ್ಯಪಾಲರು ಸಂವಿಧಾನ ಹಾಗೂ ಕಾನೂನಿನ ಅರಿವು ಹೊಂದಿರಬೇಕು, ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲು ಗ್ರಾಮ ಪಂಚಾಯತಿಯ ಅಧಿಕಾರಿಗಳು ಸುಮಾರು 7 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಾರೆ, ಆದರೆ ರಾಜಭವನವು 24 ಗಂಟೆ ಒಳಗಾಗಿ ಒಬ್ಬ ಭ್ರಷ್ಟ ಬ್ಲಾö್ಯಕ್‌ಮೇಲ್ ವ್ಯಕ್ತಿಯ ದೂರಿನ ಮೇಲೆ ಜನಪ್ರತಿನಿಧಿ 6.82 ಕೋಟಿ ಜನರ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿ, ಒಂದು ವಾರದೊಳಗಾಗಿ ಕೇಂದ್ರ ಸರ್ಕಾರದ ಅಣತಿಯಂತೆ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಪ್ರಶ್ನಾತೀತವಾಗಿದೆ. ಮತ್ತು ರಾಜ್ಯಪಾಲರನ್ನು ತಕ್ಷಣವೇ ಅಮಾನತ್ತು ಮಾಡಿ, ಅವೈಜ್ಞಾನಿಕವಾದ ಆದೇಶವನ್ನು ಹಿಂಪಡೆಯಲು ಆದೇಶ ಹೊರಡಿಸಬೇಕಾಗಿ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಅಲ್ಲದೇ ಮುಂದೆ ಯಾವುದೇ ರಾಜಪಾಲರನ್ನು ನೇಮಿಸಬೇಕಾದರೆ ಸ್ವಲ್ಪವಾದರೂ ಕಾನೂನು ಬಲ್ಲವರೂ ವಿದ್ಯಾವಂತರು, ಸಾಮಾಜಿಕ ಪ್ರಜ್ಞೆವುಳ್ಳವರು, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವಂತಹವರನ್ನು ನೇಮಕ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಥಾವರಚಂದ್ ಗೆಹ್ಲೋಟ್ ಇವರನ್ನು ವಜಾ ಮಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ರಾಷ್ಟçಪ್ರೇಮ ದೇಶಭಕ್ತಿ, ಕಾನೂನು ಅರಿತವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಬೇಕೆಂದು ಇಂದು ಕರ್ನಾಟಕ ಕ್ರೆöÊಸ್ತರ ರಕ್ಷಣಾ ವೇದಿಕೆ ವತಿಯಿಂದ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಅಚೇರಿವರೆಗೆ ಪ್ರತಿಭಟನೆ ಮಡುವ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟçಪತಿ ಅವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಜೇಶ ಜೋತಿ, ಸಂಸ್ಥಾಪಕರಾದ ಭಾಸ್ಕರ್ ಬಾಬು ಎಂ. ಪಾತರಪಳ್ಳಿ , ಜಿಲ್ಲಾ ಕಾರ್ಯಾಧ್ಯಕ್ಷರಾದ ಸಾಮಸನ್ ಹಿಪ್ಪಳಗಾಂವ, ಜಿಲ್ಲಾ ಉಪಾಧ್ಯಕ್ಷರಾದ ನರಸಿಂಗ ಮಿರ್ಜಾಪೂರ, ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ ಕೋಟೆ, ಜಿಲ್ಲಾ ಪ್ರ.ಕಾರ್ಯದರ್ಶಿ ಸುನೀಲ ಹಿರೆಮನಿ ಹಾಗೂ ಸಾಲೊಮೊನ್ ಡಾಕುಳಗಿಕರ್, ಮಹಿಳಾ ಅಧ್ಯಕ್ಷರಾದ ಸುಕಿರ್ತಾ ವಗ್ಗೆ, ಸಂತೋಷಿ ಎಸ್. ರಾಜಕುಮಾರ ಸಿ, ಕೆ.ಎಸ್. ಶಾಂತಕುಮಾರ, ದಶರಥ ಮೀಸೆ, ಶಿವಕುಮಾರ ಪಾತರಪಳ್ಳಿ, ಅರ್ಜುನ ಅಲ್ಲಾಪೂರ, ಮಾರುತಿ ಜ್ಯೋತಿ, ಇಮಾನುವೇಲ್ ಮಂದಕನಳ್ಳಿ, ಅಶೊಕ ರುದನೂರ, ಶಿವರಾಜ ಕರುಣೆ, ಸಚೀನ್, ಅಬ್ರಹಂ, ಸ್ಯಮಸನ್, ದೇವಿಂದ್ರ ಜೋತಿ, ರೋಷನ್ ರಾಯ ಮಳಚಾಪೂರ, ಜಗನ್ನಾಥ ಕೌಠಾ, ಬಸವರಾಜ, ಸುಭಾಷ, ಜೈವಂತ ಉಪಸ್ಥಿತರಿದ್ದರು.