ಬೀದರ್

ಕರಡು ಮತದಾರ ಪಟ್ಟಿ ಪ್ರಕಟಿಸುವಲ್ಲಿ ಗಂದಗೆಯವರ ವಿಳಂಬ ಧೋರಣೆ ಖಂಡನೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2024-25ನೇ ಸಾಲಿನ ಚುನಾವಣೆಗಳು ಶೀಘ್ರದಲ್ಲಿಯೇ ನಡೆಯಲಿದ್ದು, ತನ್ನಿಮಿತ್ತವಾಗಿ ಸಂಘದ ಬೈಲಾ 47ರ ರಿತ್ಯಾ ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಿ ದಿನಾಂಕ 01/07/2024 ರಂದು ಪ್ರಕಟಿಸಬೇಕಾಗಿತ್ತು. ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 02/07/2024 ರಿಂದ 10/07/2024ರ ಅವಧಿ ನಿಗದಿ ಪಡಿಸಿ, ಕೇಂದ್ರ ಸಂಘದಿAದ ನೋಟಿಸ್ ಸಂಖ್ಯೆ: ಜಿಇವಿ/ಸಾ.ಚು/ರಾ/2024-25 ದಿನಾಂಕ: 03/06/2024ರ ಮೂಲಕ ಎಲ್ಲಾ ಶಾಖೆಗಳಿಗೆ ಸೂಚಿಸಲಾಗಿತ್ತು. ಆದರೆ ಬೀದರ ಶಾಖೆಯ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮತ್ತು ಕಾರ್ಯದರ್ಶಿ ರಾಜಶೇಖರ ಮಂಗಲಗಿಯವರು ಇವತ್ತಿನವರೆಗೂ ಕರಡು ಮತದಾರರ ಪಟ್ಟಿ ಪ್ರಕಟಿಸಿರುವುದಿಲ್ಲ ಮತ್ತು ಜಿಲ್ಲೆಯ ನೌಕರರಿಂದ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅವುಗಳನ್ನು ಸ್ವೀಕರಿಸಲು ಪ್ರಚಾರ ನೀಡಿಲ್ಲ.
ಇದು ಪ್ರಜಾಸತಾತ್ಮಕ ವ್ಯವಸ್ಥೆಗೆ ಬಗೆದ ಅಪಚಾರ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಮನ ಬಂದAತೆ ಸಂಘ ನಡೆಸುತ್ತಾ, ಸರ್ವಾಧಿಕಾರಿ ಮನೋಭಾವ ತೋರುತ್ತಾ, ಹಿಂಬಾಗಿಲಿನಿAದ 2024-25ನೇ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಲು ವಾಮಮಾರ್ಗ ಹಿಡಿದಿದ್ದಾರೆ. ಕರಡು ಮತದಾರರ ಪಟ್ಟಿ ನೀಡುವಂತೆ ದಿನಾಂಕ 18/07/2024 ರಂದು ದೂರವಾಣಿ ಮೂಲಕ ನಂತರ 27/07/2024 ರಂದು ಲಿಖಿತವಾಗಿ ಕೇಳಿಕೊಂಡರೂ ಉಡಾಫೆಯಿಂದ ಮಾತನಾಡುತ್ತಿರುವರು. ಇಂದಿನವರೆಗೂ ಕರಡು ಮತದಾರ ಪಟ್ಟಿ ಪ್ರಕಟಿಸಿರುವುದಿಲ್ಲ, ಪ್ರತಿಯನ್ನೂ ನೀಡಿರುವುದಿಲ್ಲ.

ಸರಕಾರಿ ನೌಕರರ ಸಂಘದ ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರ/ಅಧಿಕಾರಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು. ಮತದಾನ ಹಕ್ಕಿನಿಂದ ಯಾವ ನೌಕರರು ವಂಚಿತರಾಗಬಾರದು. ಈ ಹಿಂದೆ ಮಾಡಿದಂತೆ, ತನಗೆ ಬೇಡಾದ ನೌಕರರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟರೆ ಸಹಿಸಲಾಗುವುದಿಲ್ಲ.
ಜಿಲ್ಲೆಯ ಸರ್ಕಾರಿ ನೌಕರರು ಸಹ ಈ ದಿಶೆಯಲ್ಲಿ ಜಾಗ್ರತರಾಗಬೇಕು. ಜಿಲ್ಲಾ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮತ್ತು ಕಾರ್ಯದರ್ಶಿ ರಾಜಶೇಖರ ಮಂಗಲಗಿಯವರು ಈ ದಿಶೆಯಲ್ಲಿ ಕೂಡಲೇ ಕ್ರಮವಹಿಸಿ ಮತದಾರರ ಕರಡು ಪಟ್ಟಿಯನ್ನು ಜಿಲ್ಲೆಯ ನೌಕರರ ಗಮನಕ್ಕೆ ಬರುವಂತೆ ಪ್ರಕಟಿಸಬೇಕು. ತಪ್ಪಿದ್ದಲ್ಲಿ ತಮ್ಮ ವಿರುದ್ಧ ಕಾನೂನಿನ ಹೋರಾಟ ಮಾಡಲಾಗುವುದು.

Ghantepatrike kannada daily news Paper

Leave a Reply

error: Content is protected !!