ಬೀದರ್

ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಂಗಮ ‘ಹೆಬ್ಬಾಳೆ ಟ್ರೇಡರ್ಸ್(ರಿ)’ ಲೋಕಾರ್ಪಣೆ

ಬೀದರ: ಕಾಯಕದ ಜೊತೆಗೆ ಧರ್ಮಾರ್ಥ ದಾಸೋಹ ಕಾರ್ಯ ಮಾಡುತ್ತಿರುವ ಹೆಬ್ಬಾಳೆ ಪರಿವಾರದ ಕಾರ್ಯ ಇತರರಿಗೆ ಮಾದರಿ. ಒಂದು ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ಮೃದು ಮಾತು ಮತ್ತು ವಿನಯಶೀಲತೆ ಬಹಳ ಮುಖ್ಯ. ಅದುವೇ ನಿಜವಾದ ವ್ಯಾಪಾರದ ಜೀವಾಳ ಎಂದು ಅನುಭವ ಮಂಟಪ ಬಸವಕಲ್ಯಾಣದ ಅಧ್ಯಕ್ಷ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.
ಚಂದ್ರಶೇಖರ ಹೆಬ್ಬಾಳೆಯವರ ವತಿಯಿಂದ ಜನವಾಡಾ ರಸ್ತೆ, ಚಿಕ್ಕಪೇಟ್‍ನಲ್ಲಿ ನೂತನವಾಗಿ ಆರಂಭ ಮಾಡಲಾದ ಹೆಬ್ಬಾಳೆ ಟ್ರೇಡರ್ಸ್ (ರಿ) ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಡೆಯುವ ದಾರಿ, ಸ್ವಚ್ಛಮನಸ್ಸು ಮತ್ತು ಒಳ್ಳೆಯ ಉದ್ದೇಶ ಇದ್ದರೆ ವ್ಯಕ್ತಿಯ ಜೀವನದಲ್ಲಿ ಯಶಸ್ಸು ಸಾಧ್ಯ. ಸತತ ಪರಿಶ್ರಮದ ಜೊತೆಗೆ ಛಲದಿಂದ ಕಾರ್ಯ ಮಾಡಿದರೆ ಉದ್ಯಮದಲ್ಲಿ ಯಶಸ್ಸು ಕಾಣಬಹುದು ಎಂದು ಪೂಜ್ಯರು ತಿಳಿಸಿದರಲ್ಲದೆ, ಹೆಬ್ಬಾಳೆ ಕುಟುಂಬ ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆ ಶ್ಲಾಘನೀಯ. ಪ್ರತಿಯೊಬ್ಬರೂ ಗೃಹನಿರ್ಮಾಣ ಸಾಮಗ್ರಿಗಳನ್ನು ಇವರ ಅಂಗಡಿಯಿಂದ ಖರೀದಿ ಮಾಡಬೇಕು. ಭಗವಂತ ಅವರಿಗೆ ಶುಭ, ಲಾಭ ಮತ್ತು ಆಶೀರ್ವಾದ ನೀಡಲಿ ಎಂದು ಹಾರೈಸಿದರು.
ನೇತೃತ್ವ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ ಹೆಬ್ಬಾಳೆ ಪರಿವಾರ ಕಾಯಕ, ದಾಸೋಹ ಮತ್ತು ಸರ್ವಜನಾಂಗದವರಿಗೆ ಲೇಸನ್ನೇ ಬಯಸುವ ಸೇವೆ ಮಾಡಿಕೊಂಡು ಬರುತ್ತಿರುವುದು ಆದರ್ಶ ಕಾರ್ಯ. ಇದೀಗ ಬೀದರ ನಗರದಲ್ಲಿ ಬೃಹತ್ ಮಟ್ಟದ ಟ್ರೇಡರ್ಸ್ ಆರಂಭ ಮಾಡುವುದರ ಮುಖಾಂತರ ಒಂದು ಮನೆ ನಿರ್ಮಾಣದ ಸಮಸ್ತ ಸಾಮಗ್ರಿಗಳನ್ನು ಒಂದೇ ಸೂರಿನಡಿ ಒದಗಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಹತ್ತಾರು ಯುವಕರಿಗೆ ಉದ್ಯೋಗ ನೀಡುವುದರ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಕಾರ್ಯ ಚಂದ್ರಶೇಖರ ಹೆಬ್ಬಾಳೆ ಮಾಡಿದ್ದಾರೆ. ಆದ್ದರಿಂದ ಇವರ ಅಂಗಡಿಯಲ್ಲಿ ಖರೀದಿ ಮಾಡಿದ ಗೃಹನಿರ್ಮಾಣದ ಸಾಮಗ್ರಿಗಳಿಂದ ಮನೆ ಕಟ್ಟುವುದರ ಜೊತೆಗೆ ಮನಸ್ಸು ಕಟ್ಟುವ ಕಾರ್ಯವೂ ನಡೆಯಲಿ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ ಇಂದು ಹಲವು ಕಡೆಗಳಲ್ಲಿ ನಕಲಿ ಸಾಮಗ್ರಿಗಳನ್ನು ನೀಡಿ ತಾವು ಹಾಳಾಗುವುದಲ್ಲದೆ ಇತರರ ಮನೆಯನ್ನೂ ಹಾಳು ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಹೆಬ್ಬಾಳೆ ಟ್ರೇಡರ್ಸ್‍ನವರು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ನೀಡುವ ಸದುದ್ದೇಶದಿಂದ ನೂತನವಾಗಿ ಹೆಬ್ಬಾಳೆ ಟ್ರೇಡರ್ಸ್ ಆರಂಭ ಮಾಡಿದ್ದಾರೆ. ಕಾಯಕವೇ ಕೈಲಾಸವೆಂಬ ಬಸವೇಶ್ವರರ ಮಾತಿನಂತೆ ಸತ್ಯಶುದ್ಧ ಕಾಯಕ, ಕಾಯಕದಿಂದ ಬಂದ ಧನದಲ್ಲಿ ಧರ್ಮಕಾರ್ಯಗಳಿಗೆ ದಾಸೋಹ ಮಾಡುತ್ತ ನಿಷ್ಠೆಯಿಂದ ಸೇವೆ ಮಾಡುತ್ತಿರುವುದು ಅಭಿನಂದನೀಯ. ದೇವರು ಅವರಿಗೆ ಇನ್ನಷ್ಟು ಆಯುಷ್ಯ ಆರೋಗ್ಯ ನೀಡಿ, ವ್ಯಾಪಾರದಲ್ಲಿ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಎಸಿಇ ಅಧ್ಯಕ್ಷ ಅಶೋಕ ಉಪ್ಪೆ, ಪಾಟೀಲ ಕನ್ಸ್‍ಟ್ರಕ್ಷನ್ಸ್ ಮಾಲಿಕರಾದ ಹಾವಶೆಟ್ಟಿ ಪಾಟೀಲ ಹಾಗೂ ಸ್ವರ್ಣ ಕನ್ಸ್‍ಟ್ರಕ್ಷನ್ಸ್ ಮಾಲಿಕ ವೀರಶೆಟ್ಟಿ ಮಣಗೆ ಮಾತನಾಡಿದರು. ವೇದಿಕೆ ಮೇಲೆ ಇಂಜಿನಿಯರ್ ಅನೀಲಕುಮಾರ ಔರಾದೆ, ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ, ದಿಲಿಪಕುಮಾರ ನಿಟ್ಟೂರೆ, ಚಂದ್ರಶೇಖರ ಹೆಬ್ಬಾಳೆ, ಶಿವಕುಮಾರ ಹೆಬ್ಬಾಳೆ, ದಿಲಿಪಕುಮಾರ ಹೆಬ್ಬಾಳೆ, ಡಾ. ಜಗನ್ನಾಥ ಹೆಬ್ಬಾಳೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಯುವ ಉದ್ಯಮಿ ಅಶೋಕ ಹೆಬ್ಬಾಳೆ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಅಭಿಯಂತರರು ಹಾಗೂ ಗುತ್ತಿಗೆದಾರರಾದ ಓಂಕಾರ ಪಾಟೀಲ, ಬಿ.ಜಿ.ಶೆಟಕಾರ, ಮಹೇಶ ಬೋರಂಡೆ, ಸಂದೀಪ ಕಾಡವಾದೆ, ಸಂತೋಷ ಸುಂಕದ್, ರಾಜಶೇಖರ ಕರ್ಪೂರ, ರವಿಂದ್ರ ಮೂಲಗೆ, ವೀರಶೆಟ್ಟಿ ಪಾಟೀಲ, ಶ್ರೀನಿವಾಸ ಸಾಳೆ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

Ghantepatrike kannada daily news Paper

Leave a Reply

error: Content is protected !!