ಬೀದರ್

ಔರಾದ್ ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರಭು ಚವ್ಹಾಣ ಸನ್ಮಾನ

ಔರಾದ(ಬಿ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಯ್ಕೆಯಾದ ನೂತನ ಅಧ್ಯಕ್ಷ ದೊಂಡಿಬಾ ನರೋಟೆ ಹಾಗೂ ಉಪಾಧ್ಯಕ್ಷ ಸಂದೀಪ ಪಾಟೀಲ ಚಿಕ್ಲಿ(ಯು) ಅವರನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಬಿಜೆಪಿ ಕಛೇರಿಯಲ್ಲಿ ಗುರುವಾರ ಸನ್ಮಾನಿಸಿದರು.ಅನ್ನದಾತರಾದ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಇನ್ನಷ್ಟು ರೈತ ಸ್ನೇಹಿಯಾಗಿಸುವ ದಿಶೆಯಲ್ಲಿ ಪ್ರಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಸದಾ ರೈತರ ಪರವಾಗಿ ಕೆಲಸ ಮಾಡಬೇಕೆಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಲಹೆ ಮಾಡಿದರು.

 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ಶಿವಾಜಿ ಪಾಟೀಲ ಮುಂಗನಾಳ, ಸತೀಷ ಪಾಟೀಲ, ಶರಣಪ್ಪ ಪಂಚಾಕ್ಷರಿ, ರಮೇಶ ಬಿರಾದಾರ, ಶಿವಾನಂದ ವಡ್ಡೆ, ರಮೇಶ್ ಬಿರಾದಾರ, ಪ್ರಕಾಶ ಘೂಳೆ, ಸಚಿನ್ ರಾಠೋಡ್, ಬಲಭೀಮ ನಾಯಕ್, ಉಮೇಶ್ ನಾಯಕ್, ರಮೇಶ ಉಪಾಸೆ, ಪ್ರಕಾಶ ಅಲ್ಮಾಜೆ, ಸುಜಿತ್ ರಾಠೋಡ್, ಕೇರಬಾ ಪವಾರ, ಈರಾರೆಡ್ಡಿ, ಖಂಡೋಬಾ ಕಂಗಟೆ, ನಾಗೇಶ ಪತ್ರೆ, ಪ್ರದೀಪ ಪವಾರ, ವೆಂಕಟರಾವ ಡೊಂಬಾಳೆ, ರಂಗರಾವ ಜಾಧವ, ಬಾಲಾಜಿ ನರೋಟೆ, ನರಸಿಂಗ್ ಬುದ್ರೆ, ವೈಜಿನಾಥ ಹುಲಗೊಂಡಾ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕರ್ತರ ಸಂಭ್ರಮ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಎಪಿಎಂಸಿ ಕಛೇರಿ ಆವರಣದಿಂದ ಬಿಜೆಪಿ ಕಛೇರಿವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು.

Ghantepatrike kannada daily news Paper

Leave a Reply

error: Content is protected !!