ಬೀದರ್

ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಶಿಬಿರ

ಬೀದರ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಬೀದರ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ , ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಬೀದರ ಮತ್ತು ಸಹಕಾರ ಇಲಾಖೆ, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ಜಿಲ್ಲೆಯಲ್ಲಿ ಬರುವ ಕುರಿ ಮತ್ತು ಉಣ್ಣೆ ಉತ್ಪಾದಕರ , ನೇಕಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಶಿಬಿರವನ್ನು ರೈತ ತರಬೇತಿ ಕೇಂದ್ರ, ಉಪನಿರ್ದೇಶಕರ ಕಛೇರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜನವಾಡ ರಸ್ತೆ, ಬೀದರನಲ್ಲಿ ಏರ್ಪಡಿಸಲಾಯಿತು.

ಡಾ. ನರಸಪ್ಪ ಎ. ಡಿ. ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಬೀದರ ಇವರು ಉದ್ಘಾಟಿಸಿ ಮಾತನಾಡುತ್ತಾ ಯಾವುದೇ ಕಾರ್ಯಕ್ರಮ ಪ್ರಾರಂಭ ಮಾಡಬೇಕಾದರೆ ಜ್ಯೋತಿ ಬೆಳಗಿಸುವುದರ ಮೂಲಕ ಮಾಡುತ್ತೇವೆ. ಜ್ಯೋತಿ ಎಂದರೆ ಬೆಳಕು, ಕತ್ತಲೆಯನ್ನು ಓಡಿಸಿ ಜ್ಞಾನವನ್ನು ನೀಡುವುದಾಗಿದೆ. ಇವತ್ತಿನ ದಿನ ವಿಜ್ಞಾನ ಬಹಳ ಮುಂದುವರೆದಿದೆ. ಅಂದರೆ ಕುರಿಗಳಿಗೆ, ಮೇಕೆಗಳಿಗೆ ಬರುವಂತಹ ರೋಗಗಳನ್ನು ಕಂಡುಹಿಡಿದು ಅವುಗಳಿಗೆ ಲಸಿಕೆಗಳನ್ನು ನೀಡುವಷ್ಟು ವಿಜ್ಞಾನ ಮುಂದುವರೆದಿದೆ ಎಂದರು. ಹೀಗೆ ತಿಳಿದುಕೊಳ್ಳುವುದರಿಂದ ಜಾನುವಾರುಗಳಿಗೆ ಬರುವಂಹತ ರೋಗಗಳನ್ನು ಮುಂಚಿತವಾಗಿಯೇ ತಡೆಗಟ್ಟಬಹುದು ಎಂದು ತಿಳಿಸಿದರು.ಬೀದರ ಜಿಲ್ಲೆಯಲ್ಲಿ ಸುಮಾರು 85 ಸಾವಿರಕ್ಕಿಂತ ಹೆಚ್ಚು ಜಾನುವಾರುಗಳಿವೆ. “ಕುರಿ ಸಾಕಾಣಿಕೆ ಮಾಡಿ, ಕುಬೇರರರಾಗಿ” ಎಂಬ ನಾಣ್ಣುಡಿಯಂತೆ ತಾವುಗಳು ಕೂಡ ಕುರಿಗಳನ್ನು ಸಾಕಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಬಹುದು ಎಂದು ತಿಳಿಸಿದರು. ಶ್ರಮವಹಿಸಿ ಯಾರು ಕೆಲಸ ಮಾಡುತ್ತಾರೋ, ಅವರು ಹಣ ಸಂಪಾದನೆ ಮಾಡಿ ಲಾಭವನ್ನು ಪಡೆಯುತ್ತಾರೆ. ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ದೊರೆಯುವಂತಹ ಸವಲತ್ತುಗಳನ್ನು ಪಡೆದುಕೊಂಡು ಸಹಕಾರ ಸಂಘಗಳಿಗೆ ಹೆಚ್ಚಿನ ಲಾಭ ಪಡೆಯುವಂತೆ ಇನ್ನಷ್ಟು ಅಭಿವೃದ್ದಿಯತ್ತ ಕೊಂಡಯ್ಯಿರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಪವನ ರಾಠೋಡ, ಸಹಾಯಕ ನಿಬಂಧಕರು, ಸಹಕಾರ ಸಂಘಗಳು, ಬೀದರ ಇವರು ಮಾತನಾಡುತ್ತಾ ಸಹಕಾರ ಸಂಘಗಳ ಮೂಲಕ ಪ್ರತಿಯೊಬ್ಬ ಸದಸ್ಯರು ಲಾಭ ಪಡೆಯಬಹುದು ಎಂದು ತಿಳಿಸಿದರು. ಉಣ್ಣೆ ಉತ್ಪಾದಕರ, ನೇಕಾರರ ನಿಗಮದ ವತಿಯಿಂದ ದೊರೆಯುವಂತಹ ಸೌಲಭ್ಯಗಳ ಕುರಿತು ಈ ತರಬೇತಿಯಲ್ಲಿ ಉಪನ್ಯಾಸ ನೀಡುತ್ತಾರೆ. ಅದರ ಬಗ್ಗೆ ತಿಳಿದುಕೊಂಡು ತಮ್ಮ ತಮ್ಮ ಸಂಘಗಳಲ್ಲಿ ಅಳವಡಿಸಿಕೊಂಡು ಹೋಗಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯ ಅಧಿಕಾರಿಗಳು ಡಾ. ವಿಕ್ರಂ ಚಾಕೋತೆ, ಡಾ. ಜಗದೀಶ ಸಹಾಯಕ ನಿರ್ದೇಶಕರು ನೇಕಾರರ ಸೇವಾ ಕೇಂದ್ರ, ಬೆಂಗಳೂರು, ಶ್ರೀ ಸುಬ್ರಮಣ್ಯ ಪ್ರಭು ನಿರ್ದೇಶಕರು ಸಹಾರ್ದ ಡಿ.ಸಿ.ಸಿ ಬ್ಯಾಂಕ್ ತರಬೇತಿ ಕೇಂದ್ರ , ನೌಬಾದ , ಡಾ. ಯೋಗೇಂದ್ರ ಕುಲಕರ್ಣಿ, ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಉತ್ಪಾದಕರ ನಿಗಮ, ಬೀದರ, ಡಾ. ರವೀಂದ್ರ ಭೂರೆ, ಉಪನಿರ್ದೇಶಕರು, ಠಿoಟಥಿ ಛಿಟiಟಿiಛಿ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೀದರ , ಶ್ರೀ ಶಿವರಾಜ ಮಲ್ಲೇಶಿ ಕರ್ನಾಟಕ ರಾಜ್ಯ ಸಹಕಾರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳ ಬೆಂಗಳೂರು, ಡಾ. ಸುಜಾತ , ಪಶುವೈದ್ಯಾಧಿಕಾರಿಗಳು ಮತ್ತು ಯೂನಿಯನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಜಗದೀಶ ಸಹಾಯಕ ನಿರ್ದೇಶಕರು, ಉಣ್ಣೆ ಮತ್ತು ಕೈಮಗ್ಗ ನೇಕಾರರ ಇಲಾಖೆ, ಬೀದರ “ ಜವಳಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಕುರಿತು ” ಡಾ. ಯೋಗೇಂದ್ರ ಕುಲಕರ್ಣಿ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಉತ್ಪಾದಕರ ನಿಗಮ, ಬೀದರ “ ಕುರಿ ಮತ್ತು ಮೇಕೆಗಳಿಗೆ ಬರುವ ರೋಗಗಳ ನಿರ್ವಹಣೆ ಹಾಗೂ ಇಲಾಖೆಯಿಂದ ದೊರೆಯುವಂತಹ ಸೌಲಭ್ಯಗಳ ಕುರಿತು ” ಮತ್ತು ಶ್ರೀ ಸುಬ್ರಮಣ್ಯ ಪ್ರಭು, ನಿರ್ದೇಶಕರು, ಸಹಾರ್ದ ಡಿ.ಸಿ.ಸಿ ಬ್ಯಾಂಕ್ ತರಬೇತಿ ಕೇಂದ್ರ, ನೌಬಾದ “ ಅಧ್ಯಕ್ಷರು, ಕಾರ್ಯದರ್ಶಿಗಳ ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿ ಹಾಗೂ ಸಭೆಗಳು ಜರುಗಿಸುವ ಕುರಿತು ” ಶ್ರೀ ನರೇಶ ಜಂಬೂಲಕರ್ ಸಹಾಯಕ ನಿರ್ದೇಶಕರು, ನೇಕಾರರ ಸೇವಾ ಕೇಂದ್ರ , ಬೆಂಗಳೂರು ಇವರು “ ಕೇಂದ್ರ ಸರ್ಕಾರದಿಂದ ದೊರೆಯುವಂತಹ ನೇಕಾರರಿಗೆ ಸಿಗುವ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಶ್ರೀಮತಿ ರೇಣುಕಾ ಪಾಟೀಲ ದ್ವಿತಿಯ ದರ್ಜೆ ಸಹಾಯಕರು, ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ , ನಿರೂಪಣೆ ಮತ್ತು ಸ್ವಾಗತ ಶ್ರೀ ಮಾರುತಿ ಕೆ. ಜಿಲ್ಲಾ ಸಹಕಾರ ಶಿಕ್ಷಕರು ಇವರು ನಡೆಸಿಕೊಟ್ಟರೆ, ಶ್ರೀಮತಿ ಹೆಚ್. ಆರ್. ಮಲ್ಲಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ವಂದನಾರ್ಪಣೆ ನಡೆಸಿಕೊಟ್ಟರು.

Ghantepatrike kannada daily news Paper

Leave a Reply

error: Content is protected !!