ಬೀದರ್

ಐಟಿಬಿಟಿ ಮೇಗ್ಹಾ ಕೈಗಾರಿಕೆ ಸ್ಥಾಪನೆ ಮಾಡಿಸುವಂತೆ ಕೋರಿ ಸಚಿವರಿಗೆ ಪ್ರಥ್ವಿರಾಜ್ ಎಸ್. ಮನವಿ

ಬೀದರಃ-29, ಬೀದರ ಜಿಲ್ಲೆಯಲ್ಲಿರುವ ಪದವಿಧರ ನಿರುದ್ಯೋಗಿಗಳಿಗೆ ಕೆಲಸ ಕೊಡುವ ಐಟಿಬಿಟಿ ಮೇಗ್ಹಾ ಕೈಗಾರಿಕೆ ಸ್ಥಾಪನೆ ಮಾಡಿಸುವಂತೆ ಕೋರಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನÀ್ಯ ಶ್ರೀ ಈಶ್ವರ ಬಿ. ಖಂಡ್ರೆ ಅವರಿಗೆ ಬೀದರ ಜಿಲ್ಲಾ ಕೈಗಾರಿಕೆ ಸಣ್ಣ ಉದ್ಯಮಿದಾರರ (ಎಸ್.ಸಿ.ಎಸ್.ಟಿ.) ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಥಿರಾಜ್ ಎಸ್. ಅವರು ಮನವಿ ಪತ್ರ ಸಲ್ಲಿಸಿದ್ದಾರೆ.
ಐತಿಹಾಸಿಕವಾಗಿ ಸಾಂಸ್ಕøತಿಕವಾಗಿ ಅತ್ಯಂತ ಮಹತ್ವದ ಜಿಲ್ಲೆಯಾಗಿರುವ ಬೀದರ ಜಿಲ್ಲೆ ಆರ್ಥಿಕವಾಗಿ ಸುಭದ್ರಗೊಂಡು ಪ್ರಗತಿ ಸಾಧಿಸಲು ವಿಶೇಷ ಗಮನ ನೀಡುವುದರ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಸ್ವಾವಲಂಬನೆ ಬದುಕಿಗೆ ದಾರಿದೀಪ ಮಾಡಬೇಕಾಗಿದೆ. ಉದ್ಯೋಗಕ್ಕಾಗಿ ಬೀದರ ಜಿಲ್ಲೆಯ ಬಿಇ, ಡಿಪ್ಲೋಮಾ, ಸಿವಿಲ್ ಇಂಜಿನಿಯರ್, ಸೇರಿದಂತೆ ವಿವಿಧ ಪದವಿಧರ ನಿರುದ್ಯೋಗಿ ಯುವಕ-ಯುವತಿಯರು ನೆರೆ ರಾಜ್ಯಗಳಾದ ಮಹಾರಾಷ್ಟ್ರ ತೆಲಂಗಣ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಗೆ ಗುಳೆ ಹೋಗುತಿದ್ದಾರೆ.
ಬೀದರನಲ್ಲಿರುವ ಕೊಳಾರ ಮತ್ತು ನೌಬಾದ ಕೈಗಾರಿಕಾ ಪ್ರದೇಶದಲ್ಲಿ ಈ ಹಿಂದೆ ಅಂದರೆ 1986 ರಿಂದ ಇದುವರೆಗಿನ ನೂರಾರು ಕೈಗಾರಿಕೆಗಳು ಮುಚ್ಚಿಹೋಗಿದ್ದು, ಹಲವಾರು ಕೈಗಾರಿಕೆಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿರುತ್ತವೆ. ಹೀಗಾಗಿ ಇಲ್ಲಿ ನಿರುದ್ಯೋಗದ ಜ್ವಲಂತ ಸಮಸ್ಯೆಯಿದೆ.
ಅದಕ್ಕಾಗಿ ಬೀದರ ನಗರ ಪ್ರದೇಶದಲ್ಲಿ ಸುಮಾರು 20 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ಐಟಿಬಿಟಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸ್ಥಾಪನೆ ಮಾಡಿಸಿಕೊಡಬೇಕೆಂದು ಪತ್ರದಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಸದರಿ ಮನವಿಗೆ ಮಾನ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರು ಮುಕ್ತ ಮನಸ್ಸಿನಿಂದ ಸ್ಪಂದಿಸಿ, ಕೈಗಾರಿಕಾ ಪೆÇ್ರಜೆಕ್ಟ್‍ಗಳ ಅವಶ್ಯಕತೆ ಜಿಲ್ಲೆಗೆ ಇದೆ, ಉದ್ಯೋಗ ಅವಕಾಶಗಳನ್ನು ಸ್ಥಳೀಯರಿಗೆ ಕಲ್ಪಿಸಲು ಸಹಾಯವಾಗುತ್ತದೆ, ಈ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚಿಸಿ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಪ್ರಥ್ವಿರಾಜ್ ಎಸ್. ಅವರು ತಿಳಿಸಿ ಸಚಿವರಿಗೆ ಕೃತಜ್ಞತೆಗಳನ್ನು ಸಸಲ್ಲಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!