ಬೀದರ್

ಎಸ್.ಬಿ. ಕುಚಬಾಳ ಅವರಿಗೆ ರಾಜ್ಯ ಮಟ್ಟದ ಬಸವ ಪುರಸ್ಕಾರ.

ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಎಸ್.ಬಿ. ಕುಚಬಾಳ ಅವರಿಗೆ ರಾಜ್ಯ ಮಟ್ಟದ ಬಸವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಅವರು ಇತ್ತೀಚೆಗೆ ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಎಂಬ ನಾಟಕ ಕೃತಿಗೆ ರಾಜ್ಯ ಮಟ್ಟದ ಬಸವ ಪುರಸ್ಕಾರ ಲಭಿಸಿದೆ. ದಿನಾಂಕ: 16-06-2024 ರಂದು ಕಲಬುರಗಿಯ ಶರಣಬಸಪ್ಪ ಅಪ್ಪ ಸಭಾ ಭವನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕೆ ಭಾಜನರಾದ ಕುಚಬಾಳ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರು ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ಡಾ. ರಾಜಕುಮರ ಹೆಬ್ಬಾಳೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಶ್ರೀಮತಿ ಡಾ. ಜಗದೇವಿ ಗಾಯಕವಾಡ, ಗವಿಸಿದ್ದಪ್ಪಾ ಪಾಟೀಲ, ಶೇಷರಾವ ಬೆಳಕುಣಿಕರ್, ಶ್ರೀಮತಿ ಗಂಗಮ್ಮ ಫುಲೆ, ಪವನ ನಾಟಿಕರ್ ಮುಂತಾದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Ghantepatrike kannada daily news Paper

Leave a Reply

error: Content is protected !!