ಎರಡು ಹೊಸ ಕೋರ್ಸ್ ಆರಂಭಕ್ಕೆ ಅನುಮತಿ
ಬೀದರ್: ರಾಜ್ಯ ಸರ್ಕಾರವು ಇಲ್ಲಿಯ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಪ್ರಸಕ್ತ ವರ್ಷದಿಂದ ಎರಡು ಹೊಸ ಕೋರ್ಸ್ಗಳನ್ನು ಆರಂಭಿಸಲು ಅನುಮತಿ ನೀಡಿದೆ.
ಕಾಲೇಜಿಗೆ ಬಿ.ವೊಕ್. ಫುಡ್ ಪ್ರೊಸೆಸಿಂಗ್ ಹಾಗೂ ಬಿ.ವೊಕ್ ರಿನಿವೆಬಲ್ ಎನರ್ಜಿ ಕೋರ್ಸ್ಗಳಿಗೆ ಅನುಮತಿ ನೀಡಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ-1)ಯ ಸರ್ಕಾರದ ಅಧೀನ ಕಾರ್ಯದರ್ಶಿ ಶೀಲತ್ ಎಂ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಎರಡೂ ಕೋರ್ಸ್ಗಳು ಕಲ್ಯಾಣ ಕರ್ನಾಟಕದಲ್ಲೇ ಮೊದಲ ಬಾರಿಗೆ ಕಾಲೇಜಿನಲ್ಲಿ ಶುರುವಾಗಲಿವೆ. ತಲಾ 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆ. ಪಿಯುಸಿ ದ್ವಿತೀಯ, ಡಿಪ್ಲೊಮಾ ಹಾಗೂ ಐಟಿಐ ಪಾಸಾದ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಲಿದ್ದಾರೆ. ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಕೋರ್ಸ್ಗಳ ಪ್ರಯೋಜನ ಪಡೆಯಬೇಕು ಎಂದು ಕೆಆರ್ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಮನವಿ ಮಾಡಿದ್ದಾರೆ.