ಎನ್ಸಿಪಿ ರಾಜ್ಯ ಸಚಿವ ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿಯಾಗಿ ನಾಮದೇವ್ ಜಾನಾಪುರ್ಕರ್ ಆಯ್ಕೆ
ಬೀದರ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ( ಶರದ್ ಚಂದ್ರ ಪವಾರ್ ) ದಿನಾಂಕ 30/08/2024 ರಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪಕ್ಷದ ಕಾರ್ಯಕ್ರಮ ಮಾಡಲಾಯಿತು. ರಾಜ್ಯಾಧ್ಯಕ್ಷರಾದ ಸಿ ಎಸ್ ಇನಾಮ್ದಾರ್ ಅವರ ನೇತೃತ್ವದಲ್ಲಿ ನಾಮದೇವ್ ಜಾನಾಪುರ್ಕರ್ ಇವರನ್ನು ನೂತನವಾಗಿ ಎನ್ ಸಿ ಪಿ ಕರ್ನಾಟಕ ರಾಜ್ಯ ಸಚಿವ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಉಸ್ತುವಾರಿ ಆಯ್ಕೆ ಮಾಡಲಾತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಪ್ರಕಾಶ್ ಕೆ ಮೊರೆ, ಅಬ್ಬಾಸ್ ಖಾನ್, ಮುನೀರ್ ಲತೀಫ್, ಅಮುಲ್ ಕಿರಣ್ ದೇಸಾಯಿ ಪಕ್ಷದ ಜಿಲ್ಲೆ ಅಧ್ಯಕ್ಷರು ಹಾಗೂ ತಾಲೂಕದ ಕಾರ್ಯಕರ್ತರು ಭಾಗವಹಿಸಿದ್ದರು.