ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ರೈತ ಸಂಘದಿAದ ಮನವಿ
ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಳ್ಳಲು ಹೋದಾಗ ಅಥವಾ ಇ.ಸಿ. ತೆಗೆದುಕೊಳ್ಳಲು ಹೋದಾಗ ಲಂಚ ಕೇಳುತ್ತಾರೆ. ಪ್ರತಿಯೊಂದು ಇಲಾಖೆಗಳಲ್ಲಿ ಅಧಿಕಾರಿಗಳು ಒಬ್ಬ ದಲ್ಲಾಳಿಯನ್ನು ನೇಮಿಸಿಕೊಂಡಿರುತ್ತಾರೆ. ಅವರಿಂದ ಹೋದಾಗ ಮಾತ್ರ ರೈತರ ಕೆಲಸ ಆಗುತ್ತದೆ. ಕಂದಾಯ ಇಲಾಖೆಯಲ್ಲಿಯೂ ಕೂಡ ಒಬ್ಬ ರೈತನ ಮುಟೇಶನ್ ಕೆಲಸ ಇರಬಹುದು, ಯಾವುದೇ ಒಂದು ಸಂಬAಧಪಟ್ಟ ಕಾಗದ ಪತ್ರಗಳು ಬೇಕಾದಾಗ ಲಂಚ ಕೊಟ್ಟಾಗ ಮಾತ್ರ ಜಮೀನಿಗೆ ಸಂಬAಧಪಟ್ಟ ದಾಖಲೆಗಳು ಕೊಡುತ್ತಾರೆ. ಸಹಾಯಕ ನಿರ್ದೇಶಕರು, ಭೂದಾಖಲೆಗಳ ಇಲಾಖೆಯಲ್ಲಿಯೂ ಕೂಡ ರೈತರು ತಮ್ಮ ಹೊಲಗಳು ಸರ್ವೆ ಮಾಡಲು ಅರ್ಜಿ ಹಾಕಿದಾಗ ಅಲ್ಲಿನ ಸರ್ವೆಯರ್ ಒಂದು ಎಕರೆಗೆ ಇಷ್ಟು ಹಣ ಕೊಡಬೇಕು, ಇಲ್ಲದಿದ್ದರೆ ಸರ್ವೆ ಕಾರ್ಯ ಮಾಡಲು ಬರುವುದೇ ಇಲ್ಲ. ಬೀದರ ಜಿಲ್ಲಾ ಹಾಪ್ಸ್ಕಮ್ನಲ್ಲಿ 2015 ರಿಂದ ಇಲ್ಲಿಯವರೆಗೆ ಹಾಪ್ಸ್ಕಮ್ ಆಡಳಿತ ಮಂಡಳಿಯು ಸುಮಾರು 30-35 ಲಕ್ಷ ರೂಪಾಯಿ ಅವ್ಯವಹಾರ ಮಾಡಿರುತ್ತಾರೆ. ಇದರ ಬಗ್ಗೆ ಸಹಕಾರ ಸಂಘಗಳ ಜಂಟಿ ನಿರ್ದೇಶಕರು, ರಾಯಚೂರು ಇವರಿಗೂ ಕೂಡ ಇದರ ಬಗ್ಗೆ ಪತ್ರದ ಮೂಲಕ ತಿಳಿಸಿರುತ್ತೇವೆ ಮತ್ತು ಕರ್ನಾಟಕ ತೋಟಗಾರಿಕೆ ಫೆಡರೇಶನ್ ಬೆಂಗಳೂರು ಇವರಿಗೂ ಕೂಡ ಪತ್ರದ ಮೂಲಕ ತಿಳಿಸಿದರೂ ಕೂಡ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಅವರ ವಿರುದ್ಧ ಕ್ರಮ ಕೈಗೊಂಡು, ವಿಚಾರಣೆಗೆ ಒಳಪಡಿಸಿ, ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು.
ಕಾರಣ ಈ ಮೇಲಿನ ಎಲ್ಲಾ ವಿಷಯಳ ಬಗ್ಗೆ ಗಂಭೀರವಾಗಿ ಪರಿಶೀಲಿಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ರೈತರಿಗೆ ನ್ಯಾಯ ಒದಗಿಸಿಕೊಡುತ್ತೀರೆಂದು ಇಂದು ಡಾ ಚೆನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ಹಮ್ಮಿಕೊಂಡ ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ರೈತ ಸಂಘದಿAದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ, ಕಾರ್ಯಾಧ್ಯಕ್ಷರಾದ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿಗಲಾದ ದಯಾನಂದ ಸ್ವಾಮಿ, ಶಮಕರೆಪ್ಪಾ ಪಾರಾ, ಚಂದ್ರಶೇಖರ ಜಮಖಂಡಿ, ಶೇಷರಾವ ಕಣಜಿ ಇದ್ದರು.