ಬೀದರ್

ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಜಯಗಳಿಸುವಂತಾಗಬೇಕು : ರೋಹಿದಾಸ ರಾಠೋಡ

ಭಾಲ್ಕಿ: ಆ.12:ವಲಯ ಮಟ್ಟದಲ್ಲಿ ವಿಜಯ ಸಾಧಿಸಿದ ಕ್ರೀಡಾ ಪಟುಗಳು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಜಯಗಳಿಸುವಂತಾಗಬೇಕು ಎಂದು ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ ಹೇಳಿದರು.ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಖಟಕ ಚಿಂಚೋಳಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದ ಸಮಾರೋಪದಲ್ಲಿ, ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿಯೂ ಇನ್ನೂ ಹೆಚ್ಚಿನ ಶ್ರಮ ವಹಿಸಬೇಕು. ಗೆಲ್ಲುವ ಆತ್ಮ ವಿಸ್ವಾಸ ಇರಬೇಕು. ಅಂದಾಗ ಮಾತ್ರ ಗೆಲುವು ನಿಶ್ಚಿತ ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶಕುಮಾರ ಸಂಗನ್ನ ಕ್ರೀಡಾ ಪಟುಗಳಿಗೆ ಮಾರ್ಗದರ್ಶನ ಮಾಡಿದರು. ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ದೈಹಿಕ ಶಿಕ್ಷಕರಾದ ಹಣಮಂತ ಕಾರಾಮುಂಗೆ, ದೇವಿದಾಸ ಮೇತ್ರೆ, ಸುಭಾಷ ಇಟಗೆ, ಸೂರ್ಯಕಾಂತ ಮಾಳಗೆ, ಮಧುಮತಿ ಪಾಟೀಲ, ಮುಖ್ಯ ಶಿಕ್ಷಕ ರಾಜಕುಮಾರ ಜೊಳದಾಪಕೆ, ಕುಪೇಂದ್ರ ಜಗಶೆಟ್ಟಿ, ಅನುಸೂಯ ಜಯಲಕ್ಷ್ಮಿ, ಶಿಲ್ಪಾ ಗೌಡರ, ಅವಿನಾಶ, ಚಾಂದ ಪಾಷಾ, ಮೊಯಿಜ್ಜಾಗು, ವಿಜಯಕುಮಾರ ಬಾಜೊಳಗಾ, ಶಿವಕುಮಾರ ವಾಡಿಕರ, ನಾಗನಾಥ ದುಬಲಗುಂಡೆ, ವಿಯಕುಮಾರ ಚಹ್ವಾನ, ಚನ್ನಪ್ಪ ತಳವಾಡ, ಸುಭಾಷ ಇಟಗೆ, ಪ್ರವೀಣ ಸಿಂಧೆ, ಓಂ.ಝೆಡ್.ಬಿರಾದಾರ ಉಪಸ್ಥಿತರಿದ್ದರುಸಿಆರ್‍ಪಿ ಸಂತೋಷ ಧಬಾಲೆ ಸ್ವಾಗತಿಸಿದರು. ಅಶೋಕ ಕಲ್ಯಾಣೆ ನಿರೂಪಿಸಿದರು. ಶಿವಶರಣಪ್ಪ ಸೊನಾಳೆ ವಂದಿಸಿದರು.ಕ್ರೀಡಾ ಕೂಟದ ಫಲಿತಾಂಶ ಪಟ್ಟಿ: ಹುಡುಗಿಯರ ಖೋ ಖೋ: ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿ ವಿದ್ಯಾರ್ಥಿನಿಯರು ಪ್ರಥಮ, ಸ.ಪ್ರೌ.ಶಾಲೆ ಖಟಕಚಿಂಚೋಳಿ ವಿದ್ಯಾರ್ಥಿನಿಯರು ದ್ವಿತೀಯ. ಹುಡುಗರ ಖೋ ಖೋ, ಸ.ಪ್ರೌ.ಶಾ. ಖಟಕಚಿಂಚೋಳಿ ಪ್ರಥಮ, ಮ.ಗಾ.ಪ್ರೌ.ಶಾ ಕಲವಾಡಿ ದ್ವಿತೀಯ, ಹುಡುಗಿಯರ ಕಬ್ಬಡ್ಡಿ: ಪ್ರಿಯದರ್ಶಿನಿ ಅಶೋಕ ಪ್ರೌಢಶಾಲೆ ಕುರುಬಖೆಳಗಿ ಪ್ರಥಮ, ಮ.ಗಾ.ಪ್ರೌ.ಶಾ. ಕಲವಾಡಿ ದ್ವಿತೀಯ, ಬಾಲಕಿಯರ ಥ್ರೋಬಾಲ್: ಸ.ಪ್ರೌ.ಶಾ. ಮದಕಟ್ಟಿ ಪ್ರಥಮ, ಎನ್.ವಿ.ಪಿ ಪ್ರೌ.ಶಾ ಖಟಕಚಿಂಚೋಳಿ ದ್ವಿತೀಯ, ಬಾಲಕರ ಥ್ರೋಬಾಲ್: ಸ.ಪ್ರೌ.ಶಾ.ಮದಕಟ್ಟಿ ಪ್ರಥಮ, ಎನ್.ವಿ.ಪಿ ಪ್ರೌ.ಶಾ ಖಟಕಚಿಂಚೋಳಿ ದ್ವಿತೀಯ, ಬಾಲಕಿಯರ ವಾಲಿಬಾಲ್ ಸ.ಪ್ರೌ.ಶಾ.ಖಟಕಚಿಂಚೋಳಿ ಪ್ರಥಮ, ಸ.ಪ್ರೌ.ಶಾ. ದಾಡಗಿ ದ್ವಿತೀಯ. ಬಾಲಕರ ವಾಲಿಬಾಲ್: ಎನ್.ವಿ.ಪಿ ಪ್ರೌ.ಶಾ ಖಟಕಚಿಂಚೋಳಿ ಪ್ರಥಮ, ಸ.ಪ್ರೌ.ಶಾ ಖಟಕಚಿಂಚೋಳಿ ದ್ವಿತೀಯ, ಬಾಲಕ ಮತ್ತು ಬಾಲಕಿಯರ ಟೆಬಲ್ ಟೆನ್ನಿಸ್ ಮತ್ತು ಬಾಲ್ ಬ್ಯಾಟಮಿಟನ್: ಸ.ಪ್ರೌ.ಶಾ ಖಟಕಚಿಂಚೋಳಿ ವಿದ್ಯಾರ್ಥಿಗಳು, ಬಾಲಕರ ಕಬ್ಬಡ್ಡಿ: ಶ್ರೀ ಸಿದ್ಧಾರೂಢ ಪ್ರೌ.ಶಾ. ಚಳಕಾಪೂರ ಪ್ರಥಮ, ಪಿ.ಡಿ.ಎ.ಪ್ರೌ.ಶಾ ಕುರುಬಖೆಳಗಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

Ghantepatrike kannada daily news Paper

Leave a Reply

error: Content is protected !!