ಇಲಾಖೆಯಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿ, ಸಿಬ್ಬಂದಿಯವರ ಬೀಳ್ಕೊಡುಗೆ ಸಮಾರಂಭ ”
ಬೀದರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ವಯೋ ನಿವೃತಿ ಹೊಂದಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀದರ ಜಿಲ್ಲಾ ಪೊಲೀಸ್ ಘಟಕದಿಂದ ಇಲಾಖೆಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪೂರ್ಣಾವಧಿ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ, ಭರತ್, ಎ.ಎಸ್.ಐ ಬೇಮಳಖೇಡಾ ಪೊಲೀಸ್ ಠಾಣೆ, ಶ್ರೀ, ಬಾಬು, ಎ.ಎಸ್.ಐ, ಭಾಲ್ಕಿ ನಗರ ಠಾಣೆ, ಶ್ರೀ, ಹಣಮಂತ, ಎ.ಎಸ್.ಐ, ಮೇಹಕರ ಠಾಣೆ, ಶ್ರೀ, ಸೂರ್ಯಕಾಂತ, ಎ.ಆರ್.ಎಸ್.ಐ, ಡಿ.ಎ.ಆರ್. ಬೀದರ, ಶ್ರೀ, ರಾಜಕುಮಾರ, ಎ.ಆರ್.ಎಸ್.ಐ ಡಿ.ಎ.ಆರ್ ಬೀದರ, ಶ್ರೀ, ಮಲ್ಲಪ್ಪಾ ಭಾಗ್ಯವಾಡಿ, ಮತ್ತು ತುಳಸಿರಾಮ ಹಾರಗೆ. ತಮ್ಮೆಲ್ಲರ ನಿವೃತ್ತಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುವಂತಾಗಲಿ ಹಾಗು ನಿಮ್ಮ ಅನುಭವವು ಸಮಾಜಕ್ಕೆ ಏನಾದರೊಂದು ಕೊಡುಗೆ ದೊರೆಯುವಂತಾಗಲಿ ಅಂತ ಹಾರೈಸುತ್ತಾ ಶ್ರೀಯುತರನ್ನು ಸನ್ಮಾನಿಸಿ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣೆಕೆ ನೀಡುವ ಮೂಲಕ ಶುಭ ಕೊರಲಾಯಿತು.