ಇಂದಿರಾಗಾಂಧಿಯವರು ಪ್ರಜಾಪ್ರಭುತ್ವವನ್ನು ಕೊಂದಿದ್ದರು: ಭಗವಂತ ಖೂಬಾ
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು, ಡಾ. ಬಿ.ಆರ್.ಅಂಬೇಡ್ಕರರವರು ನೀಡಿರುವ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ, ನ್ಯಾಯಾಲಯದ ಆದೇಶಕ್ಕೆ ಗೌರವಿಸದೆ, ಅಧಿಕಾರದ ಆಸೆಗಾಗಿ ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನಕ್ಕೆ ಅವಮಾನಿಸುವ ಕೆಲಸ ಮಾಡಿ, ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ನಿರ್ಧಾರ ಅತ್ಯಂತ ಕಿಳು ಮಟ್ಟದ್ದಾಗಿತ್ತು ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಬೀದರ ನಗರದ ದೇವಿ ಕಾಲೋನಿಯ ದೇವಿ ಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಭಾರತವು ಪರಕೀಯರಿಂದ ಸ್ವಾತಂತ್ರ್ಯ ಪಡೆದ ಮೇಲೆ, ದೇಶದಲಿರುವ ಎಲ್ಲಾ ಭಾμÉ, ಪರಂಪರೆ, ಸಂಸ್ಕøತಿ, ಪ್ರಾಂತ ಪಂಗಡಗಳನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಸಂವಿಧಾನದ ಮೂಲಕ ನೀಡಿದ್ದ ಜಾವಬ್ದಾರಿಯನ್ನು ಕಾರಣವಿಲ್ಲದೆ, ತುರ್ತು ಪರಿಸ್ಥಿತಿ ತಂದು ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳು ಕಸಿದುಕೊಂಡಿದ್ದರು ಇಂದಿರಾಗಾಂಧಿಯವರು.
ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದ ಇಂದಿರಾಗಾಂಧಿಯವರು ಹಾಕಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದರು ರಾಜೀವಗಾಂಧಿ, ಸದಾ ಸುಳ್ಳು ಹೇಳಿ ಅಧಿಕಾರಕ್ಕೆ ಬರುವ ಕಾಂಗ್ರೇಸ್‍ನವರಿಂದ ಎಂದು ದೇಶಕ್ಕೆ ಒಳ್ಳೆಯದಾಗುವುದಿಲ್ಲ. ಎಲ್ಲಿಯವರೆಗೆ ಅಸತ್ಯ ಮತ್ತು ಅಧರ್ಮವನ್ನು ನಾವೇಲ್ಲರೂ ವಿರೋಧಿಸುವದಿಲ್ಲವೋ, ಅವುಗಳನ್ನು ಸೋಲಿಸಲು ಮುಂದಾಗುವದಿಲ್ಲವೋ ಅಲ್ಲಿಯವರೆಗೆ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕಾಗಿದೆ, ದೇಶದಲ್ಲಿ ಕಾಂಗ್ರೆಸಿನಿಂದ ಕೇವಲ ಸಂವಿಧಾನದ ಬಗ್ಗೆ ಅಪಾಪ್ರಚಾರ ನಡೆಯಿತ್ತಿದೆ, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಇನ್ನೊರ್ವ ಹಿರಿಯರಾದ ಶಿವಶಂಕರ ತರನಳ್ಳಿ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ನಾವು ಬದುಕಿದ್ದೆ ನಮ್ಮ ಪುಣ್ಯ, ಕೇವಲ ಅಂಧಾ ಕಾನೂನು ನಡೆಯುತ್ತಿತ್ತು, ಹೋರಾಟ ಮಾಡಿದವರಿಗೆ ಜೈಲಿಗೆ ಹಾಕುವುದೇ ಕೆಲಸವಾಗಿತ್ತು, ತಪ್ಪಿಸಿಕೊಳ್ಳಲು ಎμÉ್ಟೂೀ ಕಷ್ಟ ಪಡುತಿದ್ದೆವು ಎಂದು ಅಂದಿನ ಕರಾಳ ದಿನಗಳು ನೆನಪಿಸಿಕೊಂಡರು. ಇಂದಿರಾಗಾಂಧಿಯವರು ಚುನಾವಣೆಯಲ್ಲಿ ಮಾಡಿರುವ ಅಕ್ರಮಗಳು, ಭ್ರμÁ್ಟಚಾರದ ವಿರುದ್ಧ ರಾಜ್ ನಾರಾಯಣರು ಅಲಹಾಬಾದ್ ಹೈಕೋರ್ಟ್ ಮೊರೆ ಹೋದಾಗ ಹೈಕೋರ್ಟ್ ಇಂದಿರಾಗಾಂಧಿ ಅವರ ವಿರುದ್ಧ ತೀರ್ಪು ನೀಡಿ, ಅವರು ಸಂಸದರಾಗಿ ಆಯ್ಕೆಯಾದ ಸ್ಥಾನವನ್ನು ಅಸಿಂಧುಗೊಳಿಸಿತು. ಅಧಿಕಾರ ಕಳೆದುಕೊಂಡ ಮೇಲೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಜಾರಿಗೆ ತಂದರು, ನಂತರ ತುರ್ತು ಪರಿಸ್ಥಿತಿಯ ನಿರ್ಧಾರ ವಿರುದ್ಧ ಜೈಪ್ರಕಾಶ ನಾರಾಯಣರವರು ಕೊರ್ಟ ಮೊರೆ ಹೊಗಿದ್ದಲ್ಲದೆ ಜನಜಾಗೃತಿ ಮೂಡಿಸಿದ್ದರು, ಇದು ದೇಶಕ್ಕೆ ಅಲ್ಲ ವಿಶ್ವದಲ್ಲೇ ಅತ್ಯಂತ ಕರಾಳ ದಿನವಾಗಿತ್ತು ಎಂದು ತಿಳಿಸಿದರು. ಇಂದಿರಾಗಾಂಧಿಯವರ ಈ ನಿರ್ಣಯದ ವಿರುದ್ಧ ದೇಶಡೆಲ್ಲೆಡೆ ಚಳುವಳಿಗೆ ದಾರಿ ಮಾಡಿಕೊಟ್ಟಿತ್ತು ಎಂದು ತಿಳಿಸಿ ಅಂದಿನ ಕರಾಳ ದಿನಗಳ ಕುರಿತು ಸಭೆಯಲ್ಲಿ ನೆರೆದಿದ್ದ ಎಲ್ಲರಿಗೂ ತಿಳಿಸಿದರು.
ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ್ ಮಾತನಾಡಿ, ಕಾಂಗ್ರೇಸ್ ಕೇವಲ ಸಂವಿಧಾನ, ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಕೇವಲ ಮತ ಬ್ಯಾಂಕ್‍ಗಾಗಿ ಬಳಸಿಕೊಂಡಿತ್ತು, ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರ 5 ಕ್ಷೇತ್ರಗಳನ್ನು ಪಂಚ ಪೀಠಗಳಾಗಿ ಅಭಿವೃದ್ಧಿ ಪಡಿಸಿದ್ದು ನಮ್ಮ ಬಿಜೆಪಿ ಸರ್ಕಾರ ಎಂದರು. ಇಂದಿರಾಗಾಂಧಿ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದರು ಆದರೆ ಇಂದು ಜನ ಅವರನ್ನು ದೇಶದ ಅಧಿಕಾರದಿಂದ ದೂರವಿಟ್ಟಿದ್ದಾರೆ, ಸಂವಿಧಾನದ ಆಶಯದಂತೆ ನಡೆಯುವ ನಮ್ಮ ಪಕ್ಷಕ್ಕೆ ಅಧಿಕಾರಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ನಂತರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಔತಣಕೂಟ
ದಿನಾಂಕ: 28 ರಂದು ಬೆಳಿಗ್ಗೆ 10.00 ಗಂಟೆಗೆ ರಾಜ್ಯ ಸರ್ಕಾರದ ಭ್ರμÁ್ಟಚಾರದ ವಿರುದ್ಧ ಹಾಗೂ ವಾಲ್ಮಿಕಿ ನಿಗಮದ ಹಗರಣದ ವಿರುದ್ಧ ಬೀದರ ನಗರದ ಡಾ. ಬಿ. ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸತ್ಯಾಗ್ರಹದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲು ಜಿಲ್ಲಾಧ್ಯಕ್ಷ ಸೊಮನಾಥ ಪಾಟೀಲ್ ಕರೆಕೊಟ್ಟರು.
ಪ್ರತಿಭಟನೆ ಮುಗಿದ ನಂತರ ಮಧ್ಯಾಹ್ನ, ಈ ಲೋಕಸಭಾ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿರುವ ಮತದಾರರಿಗೆ, ಕಾರ್ಯಕರ್ತರಿಗೆ, ಪಕ್ಷದ ಮುಖಂಡರುಗಳಿಗೆ ಹಾಗೂ ಶಾಸಕರುಗಳಿಗೆ ಧನ್ಯವಾದಗಳು ತಿಳಿಸುವ ಉದ್ದೇಶದಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಔತಣಕೂಟ ಏರ್ಪಡಿಸಲಾಗಿದೆ ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಾಜಿ ಸಚಿವ ಭಗವಂತ ಖೂಬಾ ಮತ್ತು ಜಿಲ್ಲಾಧ್ಯಕ್ಷರಾದ ಸೊಮನಾಥ ಪಾಟೀಲ್ ಎಲ್ಲರಿಗೂ ಆಮಂತ್ರಿಸಿದರು.
ಅಂದಿನ ತುರ್ತು ಪರಿಸ್ಥಿತಿಯಲ್ಲಿ ಹೊರಾಡಿದ ಶಿವಶಂಕರ ತರನಳ್ಳಿ, ಮೋಹನರಾವ ಪಾಟೀಲ್, ಸುಭಾಷ ವಾಘಮಾರೆ, ಉದಯ ಪ್ರತಾಪಸಿಂಗ್, ಭೀಮಸಿಂಗ್ ಮಲ್ಕಾಪೂರೆ ಮತ್ತು ಕಮಲ ಕಿಶೋರ್ ಅಟ್ಟಲ್‍ರವರಿಗೆ ಪಕ್ಷದ ವತಿಯಿಂದ ಸನ್ಮಾನಿಸಿ, ಮಾಜಿ ಸಂಸದ ರಾಮಚಂದ್ರ ವಿರಪ್ಪನವರ ಪುಸ್ತಕಗಳು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್, ಮುಖಂಡರಾದ ಬಸವರಾಜ ಆರ್ಯ, ಈಶ್ವರಸಿಂಗ್ ಠಾಕೂರ್, ರಾಜಶೇಖರ ನಾಗಮೂರ್ತಿ, ಪಿರಪ್ಪ ಔರಾದೆ, ಕಿರಣ ಪಾಟೀಲ್, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ವೀರಣ್ಣ ಕಾರಬಾರಿ, ಅರವಿಂದ ಮುತ್ಯಾ, ಲುಂಬಿಣೀ ಗೌತಮ, ಗಣೇಶ ಭೋಸ್ಲೆ, ಸುಭಾಷ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.