ಬೀದರ್

 ಇಂದಿನ ವಿದ್ಯಾರ್ಥಿಗಳಿಗೆ ಕಲೆ ತುಂಬ ಪೂರಕವಾಗಿದೆ – ಶ್ರೀಮತಿ ವಿದ್ಯಾ ಪಾಟೀಲ್

ಜನ ಜನಿತ ಕಲಾ ಪ್ರದರ್ಶನ ಸಂಘ ಬೀದರ ವತಿಯಿಂದ  ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಅಧ್ಯಯನ ಕೇಂದ್ರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಪರಿಚಯ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಶ್ರೀಮತಿ ವಿದ್ಯಾ ಪಾಟೀಲ್ ಅವರು ಇಂದಿನ ವಿದ್ಯಾರ್ಥಿಗಳಿಗೆ ಕಲೆ ತುಂಬ ಪೂರಕವಾಗಿದೆ.ಬೀದರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ನಾಟಕಗಳು ಮಾಡುವುದರ ಮೂಲಕ ರಂಗಭೂಮಿಯ ಕೆಲಸ ನಡೆಯಬೇಕು. ಅದರಲ್ಲಿ ರಂಗಭೂಮಿ ಪರಿಚಯ ಅತಿ ಅವಶ್ಯಕವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಗ್ಲೋಬಲ್ ಸೈನಿಕ ಅಕಾಡೆಮಿ ಕನ್ನಡ ಶಿಕ್ಷಕ ಶ್ರೀ ಸಂತೋಷ್ ಕಂಗನಕೊಟ್ ಅವರು ಮಾತನಾಡುತ್ತಾ ರಂಗ ಇದು ತಂದೆ ಭೂಮಿ ಇದು ತಾಯಿ ಎಂದು ತಿಳಿಸುತ್ತಾ ಈ ಕಲೆಯು ಶೈಕ್ಷಣಿಕ ಅಂಗವಾಗಿದೆ ಎಂದು ಹೇಳಿದಳು. ತದನಂತರ ಜನಜನಿತ ಕಲಾ ಪ್ರದರ್ಶನ ಸಂಘದ ಅಧ್ಯಕ್ಷ ಶ್ರೀ ಯಶವಂತ ಕುಚುಬಾಳವರು ಮಾತನಾಡುತ್ತಾ ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿಕೊಟ್ಟರು. ಜೊತೆಗೆ ಅದರ ಪ್ರಾಮುಖ್ಯತೆಯನ್ನು ತಿಳಿಸಿದರು. ಬೆಂಗಳೂರಿನಿAದ ಆಗಮಿಸಿದ ಅತಿಥಿ ಶ್ರೀ ಅರುಣ್ ಕುಮಾರ್ ಮಾನ್ವಿ ಅವರು ಅಭಿನಯ ಹಾಗೂ ಸಂವಾದ ನಡೆಸಿಕೊಟ್ಟರು.ಆಟದ ಮೂಲಕ ರಂಗಭೂಮಿಯ ನಂಟು ಹೇಗೆ ಎಂದು ತಿಳಿಸುತ್ತಾ ಕೆಲವು ಹೊತ್ತು ವಿದ್ಯಾರ್ಥಿಗಳೊಂದಿಗೆ ಇದ್ದರು.ಪ್ರಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗೀತ ಸಂಪ್ರದಾಯದ ವಿದ್ಯಾರ್ಥಿನಿಯರು ಜನಪದ ಗೀತೆ ಹಾಡಿದರು. ಕಾಲೇಜಿನ ಸಹಾಯಕರು ಶ್ರೀಧರ್ ಜಾದವ್ ಅವರು ಸರ್ವರಿಗೂ ಸ್ವಾಗತ ಕೋರಿದರು.ಜನಪದ ನೃತ್ಯದ ಅತಿಥಿ ಉಪನ್ಯಾಸಕರಾದ ಪವನ್ ನಾಟಿಕರ್ ಅವರು ಕಾರ್ಯಕ್ರಮದ ಆಯೋಜನೆ ನಡೆಸಿಕೊಟ್ಟರು. ಸಂಘದ ಬಗ್ಗೆ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಸ್ ಬಿ ಕುಚುಬಾಳವರು ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಕಂಗನ ಕೊಟ್ ಹಾಗೂ ಚಲನಚಿತ್ರ ನಟ ಯಶವಂತ ಕುಚುಬಾಳ ಹಾಡು ಹಾಡುವುದರ ಮೂಲಕ ಎಲ್ಲರನ್ನೂ ರಂಜಿಸಿದರು. ಕೊನೆಯದಾಗಿ ಶ್ರೀ ಪ್ರಕಾಶ್ ಕುಚಬಾಳರವರು ವಂದನೆಗಳೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Ghantepatrike kannada daily news Paper

Leave a Reply

error: Content is protected !!