ಆ. 25 ರಂದು ಟೋಕರೆ ಕೋಳಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬೀದರ: ಆಗಸ್ಟ್ 25 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವಸೇನೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಪಾಸಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕಾ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶಾಂತಿಬಾಬಾ ಮಾತಾ ಮಾಣಿಕೇಶ್ವರಿ ಆಶ್ರಮ ಲಿಂಗೋಳ್ ಹಾಗೂ ಪೂಜ್ಯ ದತ್ತಾತ್ರೇಯ ಗುರೂಜಿ ಮಹರ್ಷಿ ವಾಲ್ಮಿಕಿ ಆಶ್ರಮ ಹಳ್ಳಿಖೇಡ ಕೆ ವಾಡಿ ವಹಿಸಲಿದ್ದಾರೆ. ಅಂದು ಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಅರಣ್ಯ ಜೀವಿಶಾಸ್ತ್ರ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪೂಜೆ ಸಲ್ಲಿಸಲಿದ್ದಾರೆ. ಉದ್ಘಾಟನೆಯನ್ನು ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪೌರಾಡಳಿತ ಹಾಗೂ ಹಜ್ ಸಚಿವ ರಹಿಂಖಾನ್, ಸಂಸದ ಸಾಗರ ಖಂಡ್ರೆ, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ, ಟೋಕರಿ ಕೋಳಿ ಸಮಾಜದ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ಬಾಬುರಾವ ಚಿಂಚನಸೂರ್, ಪ್ರಮೋದ್ ಮಧ್ವರಾಜ್, ಬಂಡೆಪ್ಪ ಖಾಶೆಂಪೂರ, ಶಾಸಕರಾದ ಪ್ರಭು ಚವ್ಹಾಣ, ಡಾ.ಶೈಲೇಂದ್ರ ಬೆಲ್ದಾಳೆ, ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ್, ಬೆಳಗಾವಿ ಶಾಸಕ ಸಾಬಣ್ಣಾ ತಳವಾರ್, ಎಂಎಲ್‍ಸಿ ಚಂದ್ರಶೇಖರ ಪಾಟೀಲ, ಎಂ.ಜಿ.ಮೂಳೆ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ್, ಸಮಾಜ ಸೇವಕ ರಾಹುಲ್ ಮಿಶ್ರಾ, ಗ್ಯಾರಂಟಿ ಯೋಜನೆ ಸಮಿತಿ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ ಚಿಮಕೋಡೆ, ಕಾಂಗ್ರೇಸ್ ಮುಖಂಡ ಚಂದ್ರಾಸಿಂಗ್, ಭಾಜಪಾ ಕಲಬುರಗಿ ವಿಭಾಗೀಯ ಪ್ರಭಾರಿ ಈಶ್ವರಸಿಂಗ್ ಠಾಕೂರ್, ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಕಲಬುರಗಿ ಸಹಾಯಕ ಅಯುಕ್ತ ಕಾಶಿನಾಥ ಪಲ್ಲೇರಿ, ಪ್ರಮುಖರಾದ ಸಂತೋಷ ಮೊಟ್ಟಿ, ರವಿಕುಮಾರ ಹಣ್ಣೂರ್, ವಿಜಯಕುಮಾರ ಸೋನಾರೆ, ಶಾಂತಪ್ಪ ಜಿ.ಪಾಟೀಲ, ಚಂದ್ರಶೇಖರ ನಿರ್ಣೆ, ರಾಜಕುಮಾರ ಕರಣೆ, ವಿಜಯಕುಮಾರ ಅಷ್ಟೂರೆ, ಮಚೇಂದ್ರ ಜಮಾದಾರ್, ಅರುಣಕುಮಾರ ಬಾವಗಿ, ನಾರಾಯಣರಾವ ಭಂಗಿ, ಪಾಂಡುರಂಗ ಗುರೂಜಿ, ಸುನೀಲ ಖಾಶೆಂಪೂರ್, ಮಾಣಿಕ ನೇಳಗಿ, ನಂದಕುಮಾರ ಜಮಗಿಕರ್, ವೈಜಿನಾಥ ಹೆಡೆಗಾಪೂರ, ಸರಸ್ವತಿ ಜಮಾದಾರ್ ಭಾಗವಹಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಕಥೆಗಾರ್ತಿ ಪಾರ್ವತಿ ಸೋನಾರೆ ನೀಡಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ನುಡಿಯಲಿದ್ದಾರೆ. ಆದ್ದರಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಾಂಧವರು ಪಾಲ್ಗೊಳ್ಳಬೇಕೆಂದು ಜಮಾದಾರ ತಿಳಿಸಿದರು.
ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿ ಜಿಲ್ಲಾ ಟೋಕರಿ ಕೋಳಿ ಸಮಾಜದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸುಮಾರು ನೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಯುವಸೇನೆಯ ತಾಲೂಕಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ನೌಕರರ ಸಂಘದ ತಾಲೂಕಾಧ್ಯಕ್ಷರು ಹಾಗೂ ವಿದ್ಯಾರ್ಥಿಗಳ ಪಾಲಕರು, ವಿವಿಧ ಸಮಾಜದ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾವ ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಅವರಿಗೆ ನಮ್ಮ ಕುಲಕಸುಬು ಮೀನುಗಾರಿಕೆ ಕುರಿತು ಹಲವು ಬೇಡಿಕೆಗಳನ್ನು ಅಂದು ಅವರ ಮುಂದೆ ಇಡಲಿದ್ದೇವೆ ಎಂದು ತಿಳಿಸಿದರು.
ಟೋಕರಿ ಕೋಳಿ ಸಮಾಜ ಸಂಘದ ಜಿಲ್ಲಾ ಉಪಾಧ್ಯಕ್ಷ ಸುನೀಲ ಖಾಶೆಂಪೂರ ಮಾತನಾಡಿ ಈ ಕಾರ್ಯಕ್ರಮದ ವೇದಿಕೆಯ ಹೆಸರು ದಿ. ಬಿ.ನಾರಾಯಣರಾವ ಅವರ ಹೆಸರಿನಲ್ಲಿ ಇಡಲಾಗಿದೆ. ಅಂದು ವಿದ್ಯಾರ್ಥಿಗಳ ಸನ್ಮಾನದ ಜೊತೆಗೆ ಸಮಾಜದ ಆಗುಹೋಗುಗಳ ಕುರಿತು, ಸಂಘಟನೆ ಹಾಗೂ ಅಭಿವೃದ್ಧಿ ಕುರಿತು ಜನಜಾಗೃತಿ ಸಮಾವೇಶದಲ್ಲಿ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಪಾಂಡುರಂಗ ಗುರೂಜಿ, ಮಾರುತಿ ಮಾಸ್ಟರ್, ಗೋವಿಂದ ಜಾಲಿ, ಬಸವಕಲ್ಯಾಣ ಟಿಎಂಸಿ ಮಾಜಿ ಸದಸ್ಯೆ ರೇಖಾ ಹೊಸಮನಿ, ಸನ್ಮುಕಪ್ಪ ಶೇಕಾಪುರ, ಷಣ್ಮುಖಪ್ಪ ವಾಲಿಕರ್ ಶೇಕಾಪುರ, ಪ್ರಕಾಶ ಮರಕಲ್, ದಯಾನಂದ ಮೇತ್ರೆ, ರಾಜಕುಮಾರ ಹೊಸಮನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.