ಬೀದರ್

ಆ.19 ರಂದು ಜನ ಸಂಪರ್ಕ ಸಭೆ

ಬೀದರ. ಆಗಸ್ಟ್.17 – ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿರುತ್ತದೆ.
ಜನಸಂಪರ್ಕ ಸಭೆಗಳ ವಿವರ: ಆ.19 ರಂದು ಬೆಳಿಗ್ಗೆ 11 ಗಂಟೆಗೆ ಔರಾದ ಉಪ ವಿಭಾಗ, ಮಧ್ಯಾಹ್ನ 3 ಗಂಟೆಗೆ ಭಾಲ್ಕಿ ಉಪ ವಿಭಾಗದಲ್ಲಿ, ಆ.19 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ಉಪ ವಿಭಾಗದಲ್ಲಿ, ಮಧ್ಯಾಹ್ನ 3 ಗಂಟೆಗೆ ಕಮಠಾಣ ಉಪ ವಿಭಾಗದಲ್ಲಿ ಜನಸಂಪರ್ಕ ಸಭೆಗಳು ನಡೆಯಲಿವೆ.
ಪ್ರಯುಕ್ತ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಲು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!