ಆಧುನಿಕವಾಗಿ ಬೆಳೆಯುತ್ತಿರುವ ಯಾತ್ರಿಂಕ ಸಮಾಜದಲ್ಲಿ ಹಳ್ಳಿಯ ಜೀವನ, ಸಾಮರಸ್ಯದ ಬದುಕು ಮರೆಯಾಗುತ್ತಿದೆ–ಪ್ರೊ. ಬಿ.ಎಸ್. ಬಿರಾದಾರ
ಬೀದರ: ಬೀದರ ವಿಶ್ವವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗಗಳ ಸಹಯೋಗದಲ್ಲಿ ಮಾಳೆಗಾಂವ ಗ್ರಾಮದಲ್ಲಿ “ಸಮಾಜಕಾರ್ಯ ಶಿಬಿರವನ್ನು” ಹಮ್ಮಿಕೊಂಡಿದ್ದು, ಈ ಶಿಬಿರದ ಉದ್ಛಾಟನೆಯನ್ನು ಬೀದರ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಬಿ.ಎಸ್. ಬಿರಾದಾರ ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಛಾಟಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಆಧುನಿಕವಾಗಿ ಬೆಳೆಯುತ್ತಿರುವ ಯಾತ್ರಿಂಕ ಸಮಾಜದಲ್ಲಿ ಹಳ್ಳಿಯ ಜೀವನ, ಸಾಮರಸ್ಯದ ಬದುಕು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸಮಾಜಕಾರ್ಯ ಶಿಬಿರದ ಶಿಬಿರಾರ್ಥಿಗಳು ಹಳ್ಳಿಯ ಸಮಾಜಿಕ ಜೀವನದ ಜೊತೆಗೆ ಕಲಿಕಾರ್ಥಿಗಳಾಗಿ ಸಮಾಜದ ಭದ್ರ ಬೆಳವಣಿಗೆಗೆ ಯಾವತ್ತು ಮುಂಚೂಣಿಯಲ್ಲಿರುವ ಸಮಾಜಕಾರ್ಯ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರಕ್ಕೆ ಸಲ್ಲುವ ವಿದ್ಯಾರ್ಥಿಗಳಾಗಿ ತಮ್ಮ ಛಾಪನ್ನು ಮೂಡಿಸಲಿ ಎಂದು ಶುಭ ಹಾರೈಸಿದರು. ಅರುಣಕುಮಾರ ಬೇಂದ್ರೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರವೀಂದ್ರನಾಥ ವಿ. ಗಬಾಡಿ, ವಿಶೇಷ ಅಧಿಕಾರಿಗಳು ಬೀದರ ವಿಶ್ವವಿದ್ಯಾಲಯ ಬೀದರ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಚಂದ್ರಕಾAತ ಎಮ್.ಯಾತನೂರ್, ಸಂಯೋಜಕರು ಸಮಾಜಕಾರ್ಯ ಅಧ್ಯಯನ ವಿಭಾಗ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ವಹಿಸಿದ್ದರು. ಅತಿಥಿಗಳಾಗಿ ಶ್ರೀ ಅನೀಲಕುಮಾರ ಚಿಟ್ಟಾ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಮಾಳೆಗಾಂವ, ಶ್ರೀಮತಿ ಶಾರಲೀಲಾ ಗೆಣೆ, ಅಧ್ಯಕ್ಷರು ಗ್ರಾಮ ಪಂಚಾಯತ ಮಾಳೆಗಾಂವ ವಹಿಸಿದ್ದರು. ಅಲ್ಲದೇ ಡಾ|| ಶಾಂತಕುಮಾರ ಎಸ್. ಚಿದ್ರಿ, ಶ್ರೀ ಅರುಣಕುಮಾರ ಕೆ. ಬೇಂದ್ರೆ, ನಿರ್ದೇಶಕರು ಸಮಾಜಕಾರ್ಯ ಶಿಬಿರ, ಡಾ|| ರಾಜಶೇಖರ ಎಲ್. ಕಟ್ಟಿಮನಿ, ನಿರ್ದೇಶಕರು ಸಮಾಜಕಾರ್ಯ ಶಿಬಿರ, ಡಾ|| ಶ್ರೀಕೃಷ್ಣ ಚಕ್ರವರ್ತಿ, ಸಹ ನಿರ್ದೇಶಕರು ಸಮಾಜಕಾರ್ಯ ಶಿಬಿರ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಶ್ರೀಶೈಲ ವ್ಹಿ. ಬಿಂಜಗೀರ ಮಾಡಿದರೆ, ನಿರೂಪಣೆ ಕುಮಾರ ಅಭಿಷೇಕ ನೆರವೆರಿಸಿಕೊಟ್ಟರು ಹಾಗೂ ವಂದನಾರ್ಪಣೆ ಕು. ಪೂಜಾ ನಡೆಸಿಕೊಟ್ಟರು.