ಬೀದರ್

ಆದಿವಾಸಿ ದಿನಾಚರಣೆ: ಡಾ. ಅಬ್ದುಲ್ ಖದೀರ್ ಹೇಳಿಕೆ ಆದಿವಾಸಿ ಸಮುದಾಯ ಪ್ರಗತಿ ಸಾಧಿಸಲಿ

ಬೀದರ್: ಆದಿವಾಸಿ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ನಗರದ ರಾಜಗೊಂಡ ಕಾಲೊನಿಯಲ್ಲಿ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದಿವಾಸಿ ಸಮುದಾಯದವರು ಬದಲಾವಣೆಗೆ ಹೊಂದಿಕೊಳ್ಳಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಲಹೆ ಮಾಡಿದರು.
ದುಶ್ಚಟಗಳಿಂದ ದೂರ ಇರುವ ಮೂಲಕ ಇತರರಿಗೆ ಮಾದರಿಯಾಗಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಟ್ಟು ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದು ತಿಳಿಸಿದರು.
ದೇಶದ ವಾರಸುದಾರರಾದ ಆದಿವಾಸಿಗಳು ತಮ್ಮ ಸಂಸ್ಕøತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಸಮಾಜಕ್ಕೂ  ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.
ಗಗನಚುಂಬಿ ಕಟ್ಟಡ, ಫ್ಲೈ ಓವರ್ ಮೊದಲಾದವುಗಳೇ ಯಾವುದೇ ದೇಶದ ಅಭಿವೃದ್ಧಿ ಅಲ್ಲ. ಜನಾಂಗದ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ ಎಂದು ಪ್ರತಿಪಾದಿಸಿದರು.
ರತನ್ ಮಹಾರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ್ ದಾಂಡೇಕರ್, ಅಂಚೆ ಇಲಾಖೆಯ ಅಧಿಕಾರಿ ಮಂಗಲಾ ಭಾಗವತ್, ರಾಜಗೊಂಡ ಸಮಾಜದ ಅಧ್ಯಕ್ಷ ಪಿ.ಟಿ. ಶ್ಯಾಮು ಮಾತನಾಡಿದರು.
ವಿಶಾಲ್ ಮಹಾರಾಜ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಸೋಮಶೇಖರ, ಪ್ರಮುಖರಾದ ವಿವೇಕರಾಯ್, ಯು.ಜಿ. ಠಾಕೂರ್, ಮುನ್ನಾಬಾಬು, ಹರೀಶ್ ಬಾಬು ಮೊದಲಾದವರು ಇದ್ದರು.

Ghantepatrike kannada daily news Paper

Leave a Reply

error: Content is protected !!