ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬೀದರ ರೈಲ್ವೆ ನಿಲ್ದಾಣ : ಸಚಿವ ಭಗವಂತ ಖೂಬಾ
ಬೀದರ ಜಿಲ್ಲೆಯ ರೈಲ್ವೆ ಇಲಾಖೆಯಲ್ಲಿ ಐತಿಹಾಸಿಕ ಸಾಧನೆಗಳು ಆಗಿವೆ, ಅವುಗಳ ಸಾಲಿನಲ್ಲಿ ದಿ. 06-08-2023 ರಂದು ರವಿವಾರ, ಬೀದರ ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಸೆರ್ಪಡೆಗೊಳ್ಳಲಿವೆ ಎಂದು ಕೇಂದ್ರ ಸಚಿವರು ಹಾಗೂ ಬೀದರ ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಈ ಅಭಿವೃದ್ದಿ ಕಾರ್ಯಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಬೆ. 9.30ಕ್ಕೆ ವರ್ಚುವಲ್ ಮೂಲಕ ನೇರವೆರಿಸಲಿದ್ದಾರೆ, ಜೊತೆಗೆ ಆನ್ ಲೈನ್ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ಜೊತೆಯೂ ಮಾತನಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿ ಬೀದರ ರೈಲ್ವೆ ನಿಲ್ದಾಣವು ಆಯ್ಕೆಯಾಗಿದ್ದು, ಇದರಡಿ ನಿಲ್ದಾಣದ ಅಭಿವೃದ್ಧಿ ಕಾರ್ಯಗಳು ರೂ. 25 ಕೋಟಿ ಅನುದಾನದಲ್ಲಿ ಆಗುತ್ತಿವೆ, ನಿಲ್ದಾಣದ ಬಿಲ್ಡಿಂಗ್ ಅಭಿವೃದ್ದಿ, ನಿಲ್ದಾಣದ ಮುಂಭಾಗದ ಸುಧಾರಣೆಗಳು, ಪ್ರವೇಶದ್ವಾರದ ಪೋರ್ಟಿಕೋವನ್ನು ಒದಗಿಸುವುದು, 12 ಮೀ ಅಗಲದ ಮೇಲ್ಸೇತುವೆ, ಪ್ಲಾಟ ಫಾರಂ ಸುಧಾರಣೆ, ಹೊಸ ಶೌಚಾಲಯಗಳ ನಿರ್ಮಾಣ ಹಾಗೂ ಅಸ್ತಿತ್ವದಲ್ಲಿರುವ ಶೌಚಾಲಯಗಳ ಅಭಿವೃದ್ದಿ, ವೇಟಿಂಗ್ ಹಾಲ್ ಸುಧಾರಣೆ, ಸುಗಮ ಸಂಚಾರಕ್ಕಾಗಿ ಸಂಚಾರ ಪ್ರದೇಶದ ಸುಧಾರಣೆ, 2 ಹೊಸ ಲಿಫ್ಟಗಳು, 3 ಎಸ್ಕುಲೇಟರಗಳು ಮುಂತಾದವುಗಳು ನಿರ್ಮಾಣಗೊಳ್ಳಲಿವೆ, ಅಗತ್ಯಕ್ಕೆ ತಕ್ಕಂತೆ ಇನ್ನು ಕೆಲವು ಅಭಿವೃದ್ದಿ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಆಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಈಗಾಗಲೆ ನಾನು ಸಂಸದರಾದ ಮೇಲೆ 13 ಹೊಸ ರೈಲುಗಳು ಪ್ರಾರಂಭವಾಗಿದ್ದು, ಬೀದರನಿಂದ ಕಲಬುರಗಿಗೆ 2 ಡೆಮೋ ರೈಲುಗಳು, ಯಶವಂತಪೂರ, ಬೆಂಗಳೂರು, ಮುಂಬೈಗೆ 2 ರೈಲುಗಳು, ತಿರುಪತಿಗೆ 2 ರೈಲುಗಳು, ಮಚ್ಛಲಿಪಟ್ನಂ, ಶಿರ್ಢಿ, ಕೊಲ್ಹಾಪೂರಕ್ಕೆ ರೈಲು, ಪ್ರತಿ ಏಕಾದಶಿಗೆ ಪಂಢರಾಪೂರಕ್ಕೆ ವಿಶೇಷ ರೈಲು, ದಸರಾ, ದಿಪಾವಳಿಗೆ, ಕ್ರೈಸ್ತರ ಧಾರೂರ ಜಾತ್ರೆಗೆ, ಸಿಖ್‍ರ ಜಯಂತಿಗೆ ನಾಂದೇಡ ಹಾಗೂ ಪಾಟ್ನಾ ಸಾಹೇಬ್‍ಗೆ, ಮುಸ್ಲಿಂರ ವಿಶೇಷ ಕಾರ್ಯಕ್ರಮಕ್ಕೆ ಬೀದರನಿಂದ ಕರ್ನೂಲ್‍ಗೆ ವಿಶೇಷ ರೈಲುಗಳು ಬೀದರನಿಂದ ಓಡಿಸಲಾಗಿದೆ. ಜಿಲ್ಲೆಯ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಲೈಟಿಂಗ, ಕುಡಿಯುವ ನೀರಿನ ವ್ಯವಸ್ಥೆ ಇತರೆ ಮೂಲಭೂತ ಸೌಕರ್ಯಗಳು ಸಹ ಆಗಿವೆ ಎಂದು ಸಚಿವರು ತಿಳಿಸಿದ್ದಾರೆ.
ನಮ್ಮ ಕೇಂದ್ರ ಸರ್ಕಾರದಿಂದ ವಿಕಾರಾಬಾದನಿಂದ ಪರಳಿಯವರಿಗೆ ರೈಲ್ವೆ ವಿದ್ಯುತ್ತಿಕರಣವು ರೂ. 262.12 ಕೋಟಿ ಅನುದಾನದಲ್ಲಿ 269 ಕಿಮೀ ರೈಲ್ವೆ ಲೈನ್ ವಿದ್ಯುದ್ಧಿಕರಣ, ವಿಕಾರಾಬಾದ ದಿಂದ ಪರಳಿ ವೈಜಿನಾಥವರೆಗೆ ಮಂಜೂರಿ ಮಾಡಿಸಿಕೊಂಡು, ಕಾಮಗಾರಿ ಪೂರ್ಣಗೊಳಿಸಿದ್ದೇನೆ.
ಸದ್ಯ ಬೀದರ-ಯಶವಂತಪೂರ, ಲಾತೂರ್ –ಯಶವಂತಪೂರ, ಬೀದರ-ಮುಂಬೈ, ಹೈದ್ರಾಬಾದ-ಹಡಪಸರ್ ವಾಯಾ ಬೀದರ, ಬೀದರ-ಮಚ್ಛಲಿಪಟ್ನಂ, ಬೀದರ- ಹೈದ್ರಾಬಾದ ಇಂಟರಸಿಟಿ ರೈಲುಗಳು ವಿದ್ಯುತ ಲೈನ್ ಮೇಲೆ ರೈಲುಗಳು ಚಲಿಸುತ್ತಿವೆ. ವಿದ್ಯುತ್ತಿಕರಣ ಮೂಲಕ ಹೊಗುತ್ತಿರುವ ಈ ರೈಲುಗಳು ಬೀದರ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಪ್ರಥಮ ಬಾರಿಗೆ ಬೀದರ ನಿಂದ 14-01-1934 ರಂದು ಬೀದರ ನಿಂದ ವಿಕಾರಬಾದವರೆಗೆ ಮೊದಲ ರೈಲು ಚಲಿಸಿತ್ತು, ಸುಮಾರು 88 ವರ್ಷಗಳ ನಂತರ ಬೀದರನಿಂದ ಪ್ರಥಮ ಬಾರಿಗೆ ವಿದ್ಯುತ್ತಿಕರಣದ ಲೈನ್ ಮೇಲೆ ನಮ್ಮ ಜಿಲ್ಲೆಯ ರೈಲು ಸಂಚರಿಸುತ್ತಿದೆ, ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿಯವರ ದೂರದೃಷ್ಟಿಯ ನಾಯಕತ್ವ ಹಾಗೂ ಅವರ ಮಾರ್ಗದರ್ಶನದಿಂದ ನನ್ನಿಂದ ಈ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ರೈಲುಗಳು ವಿದ್ಯತ್ತಿಕರಣಗೊಂಡ ಲೈನ್ ಮೂಲಕ ಚಲಿಸಲಿವೆ ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ ಜೊತೆಗೆ ರೈಲ್ವೆ ಇಲಾಖೆಗೆ ಆಗುತ್ತಿದ್ದ ಆರ್ಥಿಕ ನಷ್ಟ ಕೂಡ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಾಂಗ್ರೇಸ್ ಆಡಳಿತದಲ್ಲಿ ಬೀದರ ಮಾರ್ಗವಾಗಿ ಚಲಿಸುವ ಒಂದು ರೈಲಿನ ಸಮಯ ಬದಲಾಯಿಸಲು ಆಗಿರಲಿಲ್ಲಾ. ಇದರ ಜೊತೆಗೆ 2 ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬೀದರ-ಕಲಬುರಗಿ ರೈಲ್ವೆ ಲೈನ್ 1998-99 ರಲ್ಲಿ ಪ್ರಾರಂಭಗೊಂಡು 2013-14ರವರೆಗೆ (16 ವರ್ಷದಲ್ಲಿ) 150 ಕೋಟಿ ಅನುದಾನದಲ್ಲಿ ಕೇವಲ 37 ಕಿಮೀ. ಪೂರ್ಣಗೋಳಿಸಿದ್ದರು. 2014ಕ್ಕೆ ನಾನು ಸಂಸದನಾದ ಮೇಲೆ ಕೇವಲ 3 ವರ್ಷದಲ್ಲಿ, 1392 ಕೋಟಿ ಅನುದಾನದಲ್ಲಿ 73.193 ಕಿಮೀ ಕಾಮಗಾರಿ ಪೂರ್ಣಗೊಳಿಸಿ, ಅಕ್ಟೋಬರ್ 29, 2017ರಲ್ಲಿ ಪ್ರಧಾನಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳಿಸಿರುವೆ.
ವಾಯಾ ಕಲಬುರಗಿ ಮಾರ್ಗವಾಗಿ ಈಗಾಗಲೆ ಬೆಂಗಳೂರು, ತಿರುಪತಿ, ಹುಬ್ಬಳ್ಳಿ, ಮುಂಬೈಗೆ ಪ್ರಾಯೋಗಿಕವಾಗಿ ರೈಲುಗಳು ಚಲಿಸಿವೆ, ಜನತೆಯ ಆಶಯದಂತೆ ಬೀದರ ನಿಂದ ಯಶವಂತಪೂರ ವಾಯಾ ಕಲಬುರಗಿ ಮಾರ್ಗವಾಗಿ ಶಿಘ್ರದಲ್ಲಿ ಹೊಸ ರೈಲು ಪ್ರಾರಂಭವಾಗಲಿದೆ.
ರೂ. 2354 ಕೋಟಿ ಅನುದನದಲ್ಲಿ ಬೀದರ ನಾಂದೇಡ್ ಹೊಸ ರೈಲ್ವೆ ಲೈನ್ ಸಹ ಮಂಜೂರಾತಿಯಾಗಿದೆ ಮತ್ತು ಕಲಬುರಗಿ ಲಾತೂರ ವಾಯಾ ಆಳಂದ ಹೊಸ ರೈಲ್ವೆ ಲೈನ್ ಸರ್ವೆ ಸಹ ಮುಗಿದಿರುತ್ತದೆ ಇದು ಕೂಡ ಮಂಜೂರಾತಿ ಹಂತದಲಿರುತ್ತದೆ.
ನನ್ನ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಐತಿಹಾಸಿಕ ಸಾಧನೆಗಳು ಆಗಿವೆ, ಇವುಗಳ ಸಾಲಿಗೆ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿಗಳು ಸಹ ಸೆರ್ಪಡೆಗೊಳ್ಳುತ್ತಿವೆ, ಇವುಗಳೆಲ್ಲವೂ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರ ನಾಯಕತ್ವದಿಂದ ಸಾಧ್ಯವಾಗುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ದಿನಾಂಕ: 06-08-2023 ರವಿವಾರ, ಬೆಳಿಗ್ಗೆ 9.30ಕ್ಕೆ, ಬೀದರ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಆಯೋಜಿಸಲಾಗಿರುವ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ಹಿರಿಯರು, ವ್ಯಾಪರೋದ್ಯಮಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೆಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಎಲ್ಲರಲ್ಲಿ ವಿನಂತಿಸಿಕೊಂಡಿದ್ದಾರೆ.