ಬೀದರ್

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೀದರ ತಾಲೂಕು ಸಂಘದ  ಚುನಾವಣೆಯಲ್ಲಿ ಪದಾಧಿಕಾರಿಗಳು ಅವಿರೋಧ ಆಯ್ಕೆ

ಬೀದರ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೀದರ ಜಿಲ್ಲಾ ಮಟ್ಟದ ಅಧ್ಯಕ್ಷರಾದ ಸಂಗಶೇಟ್ಟಿ ಹಲಬರ್ಗೆ ಇವರ ಅಧ್ಯಕ್ಷತೆಯಲ್ಲಿ ಬೀದರ ತಾಲೂಕ ಮಟ್ಟದ ಚುನಾವಣೆ ಪ್ರಕ್ರೀಯೆ ನಡೆಯಿತು.
ಬೀದರ- ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಬೀದರ ತಾಲೂಕು ಮಟ್ಟದ ೨೦೨೪-೨೫ ರಿಂದ ೨೦೨೯-೩೦ರ ಐದು ವರ್ಷ ಅವಧಿಗಾಗಿ ಈ ಕೆಳಕಂಡ ನೂತನ ಪದಾಧಿಕಾರಿಗಳು ಅ ವಿರೋಧವಾಗಿ ಆಯ್ಕೆ ಗೊಂಡಿರುತ್ತಾರೆAದು ಬೀದರ ತಾಲೂಕ ಚುನಾವಣೆ ಅಧಿಕಾರಿಯಾದ  ಸುರೇಶ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕಾರಿ ಮಂಡಳಿಯ ಗೌರವ ಅಧ್ಯಕ್ಷರಾಗಿ ಓಂಕಾರ ಪಾಟೀಲ್, ಅಧ್ಯಕ್ಷರಾಗಿ  ಶ್ರೀನಿವಾಸ ಬರೂರಕರ, ಉಪಾಧ್ಯಕ್ಷಗಳಾಗಿ  ಧನರಾಜ ಕೊಡಗೆ ಮತ್ತು ಎಲ್ಲೇಶ ಭಾಸ್ಕರ, ಕಾರ್ಯದರ್ಶಿಯಾಗಿ ಮುಕ್ತಾರ ಮಿಯಾ, ಸಹ ಕಾರ್ಯದರ್ಶಿಯಾಗಿ ಯುಸುಫ್ ಖಾನ್,ಖಜಾಂಚಿಯಾಗಿ ಚನ್ನಬಸಪ್ಪಾ ಪಾಟೀಲ್, ಸಂಘಟನಾ ಕಾರ್ಯದರ್ಶಿಗಳಾಗಿ  ಅಶೋಕ ಹುಗಾರ, ವಿಜಯಕುಮಾರ ಶಿಂಧೆ ಮತ್ತು ಸೂರ್ಯಕಾಂತ ದರ್ಗಾ ಸದಸ್ಯರುಗಳಾಗಿ ರಾಮದಾಸ ಜಾಧವ, ಸಂಗ್ರಾಮ ಚಾಮಾ, ಸಂಗಶೇಟ್ಟಿ ಹಲಬರ್ಗೆ, ಸುಧೀರ ರಾಗ , ಅಶೋಕ ತೆಲಂಗೆ ,ಪವನಕುಮಾರ ಜೋಷಿ,ಮುಜಾಹಿದ ಅಕ್ತರ, ಗೋವಿಂದ ಪೂಜಾರಿ ಅವಿರೊಧ ಆಯ್ಕೆಯಾಗಿರುತ್ತಾರೆ.ಸುರೇಶ ಪಾಟೀಲ್ ಬೀದರ ತಾಲುಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ಅಧಿಕಾರಿ

Ghantepatrike kannada daily news Paper

Leave a Reply

error: Content is protected !!