ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಹೋರಾಟಕ್ಕೆ ಈಶ್ವರಸಿಂಗ್ ಠಾಕೂರ್ ಬೆಂಬಲ
ಬೀದರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುದಾರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ ಮಾಡುತ್ತಿರುವ ಹೋರಾಟಕ್ಕೆ ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ಬೆಂಬಲ ಸೂಚಿಸಿದ್ದಾರೆ. ಖಾಸಗಿ ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ. ಸರ್ಕಾರ ಇಂಗ್ಲೀಷ ಶಾಲೆ ಆರಂಭಿಸಲಿ ಆದರೆ ಕನ್ನಡ ಶಾಲೆಗಳ ಕಡೆಗೂ ಗಮನ ಹರಿಸಲಿ. ಸೂಕ್ತ ಅನುದಾನ ಒದಗಿಸಿ ಸಹಕಾರ ನೀಡಬೇಕು. ಶಾಲಾ ನವೀಕರಣ ನಿಯಮ ಸರಳೀಕರಣಗೊಳ್ಳಬೇಕು. ಆರ್‌ಟಿಇ ಪುನರಾರಂಭವಾಗಬೇಕು ಎಂಬ ಸಂಘದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಜೊತೆಗೂಡಿ ಹೋರಾಟ ನಡೆಸಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.