ಬೀದರ್

ಅಣ್ಣಾಭಾವು ಸಾಠೆ ರವರ 103 ಜಯಂತಿ ಸಾಧಕರಿಗೆ ಸನ್ಮಾನ

ಬಿದರ ಅ 6: ನಮ್ಮ ಭಾರತ ಸಂವಿಧಾನದ ಬದಲಾವಣೆಗೆ ಯಾರಿಂದಲೂ ಸಾದ್ಯವಿಲ್ಲ ಸಂವಿಧಾನದ ಆಸೆಗಳನ್ನು ನೆರೆವೆರಿಸಲು ಪ್ರತಿಯೊಬ್ಬ ಭಾರತೀಯ ತನ್ನ ವೈಯಕ್ತಿಕತೆಗಾಗಿ ಎಷ್ಟು ಕಾಳಜಿ ಹೊಂದಿರುತ್ತಾರೋ, ದೇಶದ ಪ್ರಗತಿಗಾಗಿಯು ಏಳಿಗಾಗಿ, ಸುರಕ್ಷತೆಗಾಗಿ, ನಿಷ್ಠೆ ಪ್ರಮಾಣಿಕತೆ ಹೊಂದಿರಬೇಕು ಅಂದಾಗ ಮಾತ್ರ ಪ್ರಗತಿ ಮತ್ತು ಸಮಾಜದ ಸಮಾನತೆ ಉಂಟಾಗುವುದು ಎಂದು ಕೇಂದ್ರ ನವಿಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರು ಹೇಳಿದರು.
ಅವರು ಇಂದು 06/08/2023 ಮದ್ಯಾಹ್ನ ಬೀದರ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕøತಿಕ ಮತ್ತು ಸಾಹಿತಿ ಲೋಕಮಂಚ್ ಟ್ರಸ್ಟ್(ರಿ) ಬೀದರ ಹಾಗೂ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಘಟಕ ಬೀದರ, ಸಂಯುಕ್ತವಾಗಿ ಏರ್ಪಡಿಸಿದ ಅಣ್ಣಾಭಾವು ಸಾಠೆ ರವರ 103 ಜಯಂತಿ ನಿಮಿತ್ಯ ಸಂವಿಧಾನ ಜಾಗೃತಿ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು, ಪ್ರಮಾಣಿಕತೆಯಿಂದ ನೈತಿಕತೆಯಿಂದ ನಡೆದುಕೊಂಡು ಸಮಾನತೆಯ ಸಮಾಜ ಜಾತ್ಯಾತಿತ ಸಮಾಜ ನಿರ್ಮಾಣ ಮಾಡಲು ಸಾದ್ಯ ಶಾಲಾ ಮಕ್ಕಳಿಗೆ ಇದನ್ನು ಕಲಿಸಬೇಕಾಗಿದೆ. ಮಹಾತ್ಮರ ಜಯಂತಿ ಜೊತೆಗೆ ಅವರ ಕಂಡ ಕನಸನ್ನು ನನಸನ್ನಾಗಿ ಮಾಡಲು ಸಹಿತಿಗಳು ನೈತಿಕ ರಾಜನೀತಜ್ಞರು ಜನ ನಾಯಕರು ಚಿಂತಕರು ಶ್ರಮಿಸಬೆಕು. ಸಂವಿಧಾನ ಕೇವಲ ದಲಿತರಿಗೆ ಮಾತ್ರ ರಕ್ಷನೆ ನೀಡುತ್ತದೆ ಎಂಬುವುದು ತಪ್ಪು. ಅದು ಸಮಸ್ತ ಭಾರತೀಯರಾಗಿದೆ, ಎಂದ ಅವರು ಮಹತ್ವ ವಿವರಿಸಿದರು.
ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕ.ವಿ.ಪ್ರ.ನಿ.ನೌ.ಸಂ. 659 371(ಜೆ) ಸಮಿತಿ ಸಂಚಾಲಕ ಸುಮಂತ ಕಟ್ಟಿಮನಿ ಅವರು ಕೇಂದ್ರ ಸಚಿವರಿಗೆ ಮನವಿ ಪತ್ರವನು ಅರ್ಪಿಸಿ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಪ್ರತಿಜ್ಞೆಮಾಡುವ ಸರಕಾರ ನಿರ್ಧಾರ ಮಾಡುವ ಸ್ವಾಗತಿಸಿದ ಅವರು ಜಾರಿಗಾಗಿ ಆದೇಶಿಸಬೆಕೆಂದರು. 341 ತಿದ್ದು ಮಾಡಿ ಕೇಂದ್ರ ರಾಜ್ಯ ಸರಕಾರ ಜಾರಿ ಮಾಡಬೆಕು ಬೀದರನಲ್ಲಿ ಬಾಬು ಜಗಜೀವನರಾಮ ಭವನಕ್ಕೆ ಸ್ಥಳ ಜೊತೆಗೆ 25 ಕೋಟಿ ಅನುದಾನ ಒದಗಿಸಬೇಕೆಂದು ಆಗ್ರಹಿಸಿದರು. 371(ಜೆ) ಮೀಸಲಾತಿ ರಾಜ್ಯದ್ಯಾಂತ ಶೇಕಡ 8%ರಷ್ಟ ನೀಡಬೆಕೆಂದರು. ಲೊಕಮಂಚ ಟ್ರಸ್ಟಗೆ ಭವನಕ್ಕಾಗಿ ಸ್ಥಳ ಮತ್ತು ಅನುದಾನ ಒದಗಿಸಬೆಕು ಕೊಪ್ಪಳದಲ್ಲಿನ ತಪ್ಪಿತಸ್ಥರಿಗೆ ಶಿಕ್ಷಗೆ ಗುರಿಪಡಿಸಬೇಕು, ಮಣಿಪೂರದಲ್ಲಿನ ಕುಕ್ಕಿ ಬುಡಕಟ್ಟು ಸಮುದಾಯಕ್ಕೆ ಸೇರಿಸಿ ನ್ಯಾಯ ಕಲ್ಪಿಸಬೇಕು. ರಾಜ್ಯದ 5900 ದಲಿತರ ಮೇಲಿನ ಪ್ರಕರಣಗಳ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದು. ಪಿ.ಟಿ.ಸಿ.ಎಲ್. ಜಾರಿ ಮಾಡಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸಮರ್ಪಕ ಅನುಷ್ಠಾನ ಮಾಡಿಸಬೇಕೆಂದರು, ಎಸ್.ಇ.ಪಿ.ಟಿ.ಎಸ್.ಪಿ ಅಡಿ ಮೀಸಲಿಟ್ಟ ಅನುದಾನ ಕೇವಲ ದಲಿತರ ಸಬಲಿಕರಣಕ್ಕಾಗಿ ಬೇಕೆಂದು ಆಗ್ರಹಿಸಿದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮತ್ತು ಡಾ.ರೇವಣಸಿದ್ದಪ್ಪ ಹುಮನಾಬಾದ.
ಕಾರ್ಯಕ್ರಮದ ಅಧ್ಯಕ್ಷತೆ ಟ್ರಸ್ಟ ಜಿಲ್ಲಾದ್ಯಕ್ಷ ಎಂ.ಎಸ್. ಮನೋಹರ ವಹಿಸಿ ಮಾತನಾಡಿದರು. ಸಾಠೆ ರವರ ಪುತ್ರ ವಿಲಾಸ ಸಾಠೆ, ಜಿ.ಕೆ. ಗೊಖಲೆ, ರಾಜು ಕಡ್ಯಾಳ, ಅಂಬಣ್ಣ ಅರೋಲಿಕರ, ಮಾರುತಿ ಬೌಧ್ಯೆ, ಸಂಜಯ ಜಾಗಿರದಾರ, ಅಮೃತರಾವ ಚಿಮಕೋಡೆ, ಫರ್ನಾಂಡಿಸ್ ಹಿಪ್ಪಳಗಾಂವ, ರಾಜೇಂದ್ರಕುಮಾರ ಗಂದಗೆ, ಇ.ಎನ್.ಓಂಕಾರ, ಯಾಮರೆಡ್ಡಿ, ಶಿವಶಂಕರ ಟೋಕರೆ, ಸ್ವಾಮಿದಾಸ ಕೆಂಪೆನೋರ್, ಅಭಿಕಾಳೆ, ವಿಜಯಕುಮಾರ ಸೋನಾರೆ, ಡಾ. ದೇವಿದಾಸ ತುಮಕುಂಟೆ, ಸಂಜುಕುಮಾರ ಸೂರ್ಯವಂಶಿ ಅವರುಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು, ಪ್ರಭಾರಂಭದಲ್ಲಿ ಸುಭಾಷ ರತ್ನ ಸ್ವಾಗತಿಸಿದರು. ಪ್ರವಿಣ ಚಂದ್ರ ನಿರೂಪಿಸಿದರು, ರಾಘವೇಂದ್ರ ಮುತ್ತಂಗಿಕರ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!