ಅಕ್ಕಮಹಾದೇವಿ ಸಹಕಾರ ಸಂಘಕ್ಕೆ 20 ಲಕ್ಷ ನಿವ್ವಳ ಲಾಭ – ಡಾ. ಸಾವಿತ್ರಿ ಹೆಬ್ಬಾಳೆ
ಬೀದರ: 2023-24 ನೇ ಸಾಲಿಗೆ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘಕ್ಕೆ ರೂ. 20 ಲಕ್ಷ ನಿವ್ವಳ ಲಾಭ ದೊರೆತಿದೆ. ಸಂಘ ಸ್ಥಾಪನೆಯಾಗಿ ಸುಮಾರು 25 ವರ್ಷ ಗತಿಸಿರುವುದರಿಂದ ಸಂಘದ ಬೆಳ್ಳಿಹಬ್ಬ ಆಚರಣೆಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಸಾವಿತ್ರಿಬಾಯಿ ಹೆಬ್ಬಾಳೆ ತಿಳಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ರವಿವಾರ ಜರುಗಿದ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ 26ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಸಬಲೀಕರಣದ ಸದುದ್ದೇಶದಿಂದ ಸಾಲ ಮೇಳ ಹಮ್ಮಿಕೊಳ್ಳುವುದರ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ನಮ್ಮ ಸಹಕಾರ ಸಂಘವನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. ಸಂಘದ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ನಗರದಲ್ಲಿ ಅತ್ಯುತ್ತಮ ಮಹಿಳಾ ಸಂಘ ಎನ್ನುವ ಹಿರಿಮೆ ಗರಿಮೆ ಸಂಘ ಹೊಂದಿದೆ. ಸದಸ್ಯರ ವಿಶ್ವಾಸ, ಅಭಿಮಾನದಿಂದ 3 ಕೋಟಿ ವ್ಯವಹಾರ ಸಂಘವು ನಡೆಸುತ್ತಿದೆ. ನಿಮ್ಮೆಲ್ಲರ ಸಹಕಾರ ಹಿಂದಿನAತೆಯೇ ಮುಂದುವರೆಯಲಿ. ಇನ್ನೂ ಹೆಚ್ಚಿನ ಸೇವೆ ಪ್ರಾಮಾಣಿಕತೆಯಿಂದ ನೀಡುತ್ತೇವೆ ಎಂದು ಡಾ. ಸಾವಿತ್ರಿಬಾಯಿ ಹೆಬ್ಬಾಳೆ ತಿಳಿಸಿದರು.
2023-24ನೇ ಸಾಲಿನ ಲೆಕ್ಕಪತ್ರಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಚಿಮಕೋಡೆ ವಾಚನ ಮಾಡಿದರು. ಸಭೀಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು. ಇದೇ ವೇಳೆ ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ತಗಾರೆ, ನಿರ್ದೇಶಕರಾದ ಶಾಂತಾಬಾಯಿ ಗುಂದಗಿ, ಶಾಂತಾಬಾಯಿ ಗುನ್ನಳ್ಳಿ, ಡಾ.ಜಗದೇವಿ ಸೂರೆ, ಇಂದುಮತಿ ಮಾಳಗೆ, ಸರಸ್ವತಿ ನಾನಾಪುರೆ, ರೇಖಾ ಹಾದಿಮನಿ, ಶಾಮಲಾ ಎಲಿ, ಅಂಬಿಕಾ ಬಿರಾದಾರ, ಡಾ.ಸುನಿತಾ ಕೂಡ್ಲಿಕರ್, ಪುಷ್ಪಾವತಿ ಫುಲೇಕರ್, ಪಂಕಜಾ ಹುಗ್ಗಿ, ಲೆಕ್ಕಿಗರಾದ ಉಮಾಕಾಂತ ಎಂ, ಕಂಪ್ಯೂಟರ್ ಸುಪರ್‌ವೈಜರ್ ಸುನಿತಾ ಬುಡೇರಿ, ಅಟೆಂಡರ ಶಿವಕುಮಾರ ಪರೀಟ, ಸೇರಿದಂತೆ ಸಂಘದ ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.