ಬೀದರ್

ಅಂಧ-ಅನಾಥ ಮಕ್ಕಳಿಗಾಗಿ ಪಂಚಾಕ್ಷರಗವಾಯಿ ಸೇವಾಶ್ರಮ ಸ್ಥಾಪನೆ  — ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು

ಬೀದರ: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಮನವಿಯೆಂತೆ ಬೀದರ ನಗರದಲ್ಲಿ ಅಂಧ-ಅನಾಥ ,ದೀನ ದಲಿತ ಮಕ್ಕಳಿಗಾಗಿ  ಶೀಘ್ರದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮ ದಡಿ  ಪಂಚಾಕ್ಷರ ಗವಾಯಿ ಸೇವಾಶ್ರಮ ಸ್ಥಾಪಿಸಲಾಗುವುದು ಎಂದು ಪೀಠಾಧಿಪತಿಗಳಾದ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ನುಡಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮ ದಲ್ಲಿ ಇತ್ತೀಚಗೆ ಜರುಗಿದ ಗಾನಯೋಗಿ ಲಿಂ.ಪAಚಾರ ಗವಾಯಿ ಅವರ ೮೦ನೇ ಪುಣ್ಯತಿಥಿ ಹಾಗು ಲಿಂ.ಡಾ.ಪA. ಪುಟ್ಟರಾಜ ಗವಾಯಿ ಅವರ ೧೪ನೇ ಪುಣ್ಯತಿಥ ಸಮಾರಂಭದಲ್ಲಿ ಸಂಘದ ವತಿಯಿಂದ ಸನ್ಮಾನ ಮತ್ತು ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ಬೀದರ ಕರ್ನಾಟಕದ ಗಡಿ ಜಿಲ್ಲೆ ತೆಲಂಗಾಣ ಮತ್ತು ಮಹಾರಾಷ್ಟç ರಾಜ್ಯಗಳಿಗೆ  ಹೊಂದಿಕೊAಡಿರುವುದು . ಸುಮಾರು ೪೫೦ ಕಿ.ಮಿ. ದೂರದ ಕಲ್ಯಾಣ ಕರ್ನಾಟಕದ ನೂರಾರು ಮಕ್ಕಳು ಸಂಗೀತ, ಶಾಸ್ತç, ಕೀರ್ಥನ , ಪುರಾಣ ಪ್ರವಚನ ಅಧ್ಯಯನಕ್ಕಾಗಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಪ್ರತಿ ವರ್ಷ ಬರುತ್ತಾರೆ. ಬೀದರನಲ್ಲಿ ಪುಣ್ಯಾಶ್ರಮ ತೆರೆದರೆ ಆ ಮಕ್ಕಳಿಗೆ ಅಲ್ಲಿಯೇ ಅನಕೂಲವಾಗಲಿದೆ ಎಂದು ಪೂಜ್ಯರು ನುಡಿದರು.
ಸಂಘದ ಗೌರವಾಧ್ಯಕ್ಷರಾದ ಪ್ರೊ.ಸಂಗಯ್ಯ ಕಲ್ಮಠ ಅವರು ಪ್ರಸ್ತಾವಿಕ ಮಾತನಾಡುತ್ತ ಸುಮಾರು ೪೦ ವರ್ಷಗಳಿಂದ ಪಂ.ಪAಚಾಕ್ಷರ ಗವಾಯಿ ಹಾಗು ಡಾ.ಪಂ.ಪುಟ್ಟರಾಜ ಗವಾಯಿ ಅವರ ಪುಣ್ಯತಿಥಿ ಕಾರ್ಯಕ್ರಮ ಅಂಗವಾಗಿ ಸಂಗೀತ ಸಮ್ಮೇಳನವನ್ನು ಚಿಟಗುಪ್ಪ ಹಾಗು ಬೀದರ ಜಿಲ್ಲೆಯಲ್ಲಿ ಆಯೋಜಿಸುವ ಮೂಲಕ ಪಂಚಾಕ್ಷರ ಗವಾಯಿ ಹಾಗು ಪುಟ್ಟರಾಜ ಗುರುಗಳನ್ನು ಮನೆ ಮನೆಗೆ  ಪರಿಚಯಿಸುವಂತೆ ಮಾಡಿದೆ.
ಬೀದರ ನಗರದಲ್ಲಿ ಅಂಧ ಅನಾಥ ಮಕ್ಕಳ ಸಂಗೀತ ಶಿಕ್ಷಣಕ್ಕಾಗಿ ಸುಮಾರು ೮೯೦೦ ಚದುರಡಿ ನೀವೇಶನ ಖರೀದಿಸಿದೆ. ಅಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದಡಿ ಗಾನಯೋಗಿ ಪಂಚಾಕ್ಷರ ಗವಾಯಿ ಆಶ್ರಮ ಸ್ಥಾಪಿಸುವಂತೆ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರಲ್ಲಿ ಮನವಿ ಮಾಡಿಕೊಂಡರು.
ಗದುಗಿನ ವೀರೇಶ್ವರ ಪುಣ್ಯಾಶ್ರಮ  ಪೀಠಾಧಿಪತಿ ಅವರಿಗೆ  ಬೀದರ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ವತಿಯಿಂದ ಪ್ರೊ.ಸಂಗಯ್ಯ ಕಲ್ಮಠ ಸಂಘದ ಗೌರಾಧ್ಯಕ್ಷರು ,ಚಂದ್ರಶೇಖರ ಹೆಬ್ಬಾಳೆ ಅಧ್ಯಕ್ಷರು , ಕೋಶಾಧ್ಯಕ್ಷ ಡಾ.ಬಿ.ಎಸ್.ಬಿರಾದಾರ, ನಿರ್ದೇಶಕರಾದ ಸುರೇಶ ಚಿಟಗುಪಕರ್, ವೀರಭದ್ರಪ್ಪ ಉಪ್ಪಿನ, ರಮೇಶ ಮಹೀಂದ್ರಕರ್, ರಾಜೇಶ್ವರಿ ಕಲ್ಮಠ,ಮಲ್ಲಮ್ಮ ಹೆಬ್ಬಾಳೆ, ರಾಜೇಂದ್ರ ಜೊನ್ನೀಕೇರಿ, ಚಂದ್ರಕಲಾ ಜೊನ್ನೀಕೇರಿ, ಶಿವಕುಮಾರ ಹಂಗರಗಿ, ಜೈಶ್ರೀ ಹಂಗರಗಿ, ಸುರೇಶಕುಮಾರ ಸ್ವಾಮಿ, ಶಶಿಕಾಂತ ರಡ್ಡಿ, ಸಿದ್ದು, ಬಂಡೆಮ್ಮ ಕುಶನೂರ ಹಾಗು ಮಹಾದೇವಿ ಅಗಸಗಿರಿ, ರೇವಣಸಿದ್ದಯ್ಯ ಹಿರೇಮಠ ಹಾಗು ಮುರುಗಯ್ಯ ಹಿರೇಮಠ  ಅವರು ಪೂಜ್ಯರಿಗೆ ಅದ್ಧೂರಿ ಸನ್ಮಾನ ಮಾಡಿದರು.

Ghantepatrike kannada daily news Paper

Leave a Reply

error: Content is protected !!