ಹೈದರಾಬಾದ ಟ್ರಾಫೀಕ ಡಿಸಿಪಿಗೆ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘ ಸನ್ಮಾನ
ಹೈದರಾಬಾದ : ನಗರದ ಟ್ರಾಫಿಕ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡ ನೂತನ ಡಿಸಿಪಿ ಕನ್ನಡಿಗರಾದ ಬೆಂಗಳೂರಿನ ನಿವಾಸಿ ಶ್ರೀ ರಾಹುಲ ಹೆಗಡೆ ಐಪಿಎಸ್ ಅವರಿಗೆ ಇಂದು ಕೇಂದ್ರ ಕಛೇರಿಯ ನಾಂಪಲ್ಲಿಯಲ್ಲಿ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದಿಂದ ಸತ್ಕರಿಸಲಾಯಿತು.
ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ, ಉಪಾಧ್ಯಕ್ಷ ಬಸವರಾಜ ಹಂಜನಾಳೆ. ಹರೀಶ ಪಸಪೂಲ, ಕೃಷ್ಣ ಅವರು ಸನ್ಮಾನಿಸಿ ರಾಹುಲ ಹೆಗಡೆಯವರಿಗೆ ಕುರಡಿ ರಾಘವೇಂದ್ರರಾವ ರಚಿಸಿರುವ ಕನ್ನಡದ ಹನ್ನೊಂದು ಉಪನಿಷತ್ತುಗಳ ಭಾಗ 1, ಭಾಗ 2 ಎರಡು ಗ್ರಂಥವನ್ನು ನೀಡಲಾಯಿತು.