ಹೆಸರು ಮತ್ತು ಉದ್ದಿನ ಖರೀದಿ ಕೇಂದ್ರ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ಬೀದರ: ಜಿಲ್ಲೆಯಲ್ಲಿ ಈಗಾಗಲೇ ಹೆಸರು ಬೆಳೆ ರಾಶಿ ಪ್ರಾರಂಭವಾಗಿ ಸುಮಾರು 15 ದಿವಸಗಳಾಗಿವೆ. ಇಲ್ಲಿಯವರೆಗೆ ಸರಕಾರದ ವತಿಯಿಂದ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ರೈತರು ಹೆಸರು ರಾಶಿ ಮಾಡಿದ್ದಾರೆ. ಅದರಲ್ಲಿ 50%, 60% ಪ್ರತಿಶತ ಮಾರುಕಟ್ಟೆಯಲ್ಲಿ ಬಂದ ಬೆಲೆಗೆ ಮಾರಾಟ ಮಾಡಿರುತ್ತಾರೆ. ಸರಕಾರದ ವತಿಯಿಂದ ಪ್ರತಿ ಕ್ವಿಂಟಲ್ ಹೆಸರಿಗೆ ಎಂ.ಎಸ್.ಪಿ. ಪ್ರಕಾರ ರೂ. 8682/- ರೂ. ಬೆಲೆ ಇರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ. 6000/- ರಿಂದ 6500/- ರ ವರೆಗೆ ಮಾತ್ರ ಬೆಲೆ ಇರುತ್ತದೆ. ಪ್ರತಿ ಕ್ವಿಂಟಲ್ ಹಿಂದೆ ರೂ. 2000/- ವ್ಯತ್ಯಾಸ ಇದ್ದರೂ ಕೂಡ ರೈತರು ಅನಿವಾರ್ಯವಾಗಿ ಎ.ಪಿ.ಎಂ.ಸಿ. ಮಾರುಟಕಟ್ಟೆಗೆ ಹೆಸರು ತೆಗೆದುಕೊಂಡು ಹೋಗಿ ವ್ಯಾಪಾರಸ್ಥರು ಕೇಳಿದ ಬೆಲೆಗೆ ಕೊಟ್ಟು ಬರುತ್ತಿದ್ದಾರೆ. ಏಕೆಂದರೆ ರೈತರಿಗೆ ಹಣದ ಅವಶ್ಯಕತೆ ಇರುತ್ತದೆ. ಇದಕ್ಕೆ ಬಿಟ್ಟು ಬೇರೆ ದಾರಿ ಇರುವುದಿಲ್ಲ. ಒಂದು ವೇಳೆ ಸರ್ಕಾರದ ವತಿಯಿಂದ ಹೆಸರು ಖರೀದಿ ಕೇಂದ್ರ 15 ದಿವಸ ಮೊದಲೇ ಪ್ರಾರಂಭವಾಗಿದ್ದರೆ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಕೂಡ ಬೆಲೆ ಹೆಚ್ಚಾಗಿ, ರೈತರಿಗೆ ಅನುಕೂಲವಾಗುತ್ತಿತ್ತು. ಬಹಳಷ್ಟು ರೈತರು ಖರೀದಿ ಕೇಂದ್ರಕ್ಕೆ ಹೆಸರು ತಂದು, ಸಾಕಷ್ಟು ಲಾಭ ಪಡೆಯುತ್ತಿದ್ದರು. ಇದಕ್ಕೆ ಸರ್ಕಾರ ಮತ್ತು ಅಧಿಕಾರಿಗಳ ರೈತರ ಮೇಲಿರುವ ನಿರ್ಲಕ್ಷವೆಂದು ನಾವು ಹೇಳಲು ಇಷ್ಟಪಡುತ್ತೇವೆ. ಏಕೆಂದರೆ, ಹೀಗೆ ಖರೀದಿ ಕೇಂದ್ರ ಪ್ರಾರಂಭ ಮಾಡಲು ವಿಳಂಬ ಮಾಡಿದರೆ ಎಂ.ಎಸ್.ಪಿ. ಘೋಷಣೆ ಮಾಡಿ ಏನು ಪ್ರಯೋಜನ? ರೈತರೆಲ್ಲರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಸರಕಾರದ ಖರೀದಿ ಕೇಂದ್ರಕ್ಕೆ ಯಾರು ಬರುತ್ತಾರೆ?
ಆದಕಾರಣ ಈಗಲಾದರೂ ಎಚ್ಚೆತ್ತುಕೊಂಡು, ಇಂದಿನಿAದ ಸರ್ಕಾರದ ವತಿಯಿಂದ ಹೆಸರು ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಮತ್ತು ಈಗಾಗಲೇ ಉದ್ದಿನ ರಾಶಿ ಪ್ರಾರಂಭವಾಗಿವೆ, ಅದನ್ನೂ ಕೂಡ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಿ, ಖರೀದಿ ಕೇಂದ್ರ ಪ್ರಾರಂಭಿಸಬೇಕು ಹಾಗೂ ಜಿಲ್ಲೆಯಲ್ಲಿ ಸೊಯಾ, ಅವರೆ ಏರಿಯಾ ಹೆಚ್ಚಾಗಿದ್ದು, ರಾಶಿ ಮಾಡಲು ಇನ್ನು ಒಂದು ತಿಂಗಳು ಬೇಕಾಗುತ್ತದೆ. ಇದರಿಂದ ಈವಾಗಿನಿಂದ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ರಾಶಿ ಮಾಡುವ ಪೂರ್ವದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ, ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿದ್ದರಾಮಪ್ಪಾ ಆಣದೂರೆ, ಕಾರ್ಯಧ್ಯಾಕ್ಷರಾದ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಸ್ವಾಮಿ, ಸುಭಾಷ ರಗಟೆ, ಬಾಬುರಾವ ಜೋಳದಾಬಕೆ, ನಾಗಯ್ಯಾ ಸ್ವಾಮಿ, ಶಿವಾನಂದ ಹುಡಗೆ, ಪ್ರವೀಣ ಕುಲಕರ್ಣಿ, ಪ್ರಕಾಶ ಬಾವಗೆ, ಶೇಷರಾವ ಕಣಜಿ, ಬಸವಣಪ್ಪಾ ಮರಖಲ್, ಬಾಬುರಾÀವ ಬೆಟ್ಟದ, ವಿಶ್ವನಾಥ ಧರಣೆ ಉಪಸ್ಥಿತರಿದ್ದರು