ಬೀದರ್

ಹುಟ್ಟು ಹಬ್ಬ ಅಂಗವಾಗಿ ಹಣ್ಣು ಹಂಪಲ ವಿತರಣೆ

ಬೀದರ: ಕರ್ನಾಟಕ ಕ್ರೆöÊಸ್ತ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮೋಜಸ್ ನಿರ್ಣಾಕರ್ ರವರ ಗೆಳೆಯರ ಬಳಗದ ವತಿಯಿಂದ 31ನೇ ವರ್ಷದ ಹುಟ್ಟು ಹಬ್ಬವನ್ನು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ. ಮಹೇಶ ಬಿರಾದಾರ ರವರು ಮಾತನಾಡುತ್ತಾ, ಮೋಜಸ್ ರವರು 31ನೇ ಹುಟ್ಟು ಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬಹುದಾಗಿತ್ತು, ಆದರೆ ಅವರು ಹೀಗೆ ಮಾಡದೇ, ಸರ್ಕಾರಿ ಆಸ್ಪತ್ರೆಗೆ ಬಂದು ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದಾರೆ, ದೇವರು ಅವರ ಆಯುಷ್ ಆರೋಗ್ಯ ನೀಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸೈಮನ್ ಕೊಡಗಾಂವ ಇವರು ಮಾತನಾಡುತ್ತಾ, ಮೋಜಸ್ ನಿರ್ಣಾಕರ್ ಅವರ ಬಳಗದ ವತಿಯಿಂದ 31ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದು, ಸದರಿಯವರು ಕ್ರೆöÊಸ್ತ ಸಮುದಾಯದ ಪರವಾಗಿ ಬಹಳಷ್ಟು ಹೋರಾಟವನ್ನು ಮಾಡಿದ್ದಾರೆ, ಕ್ರೆöÊಸ್ತ ಸಮುದಾಯದವರ ಪರವಾಗಿ ಸದಾಕಾಲ ನಿಂತಿದ್ದಾರೆ. ಅವರು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ದೇವರು ಅವರಿಗೆ ಆಯಸ್ಸು ಆರೋಗ್ಯ ನೀಡಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸ್ವಾಮಿದಾಸ ಎಂ.ಕೆ. ಇವರು ಮಾತನಾಡುತ್ತಾ, ಮೋಜಿಸ್ ನಿರ್ಣಾಕರ್ ರವರು ಕಷ್ಟದಲ್ಲಿರುವವರನ್ನು ಆಲಿಸಿ, ಅವರ ಸು:ಖ ದು:ಖಗಳಲ್ಲಿ ಭಾಗಿಯಾಗಿ, ಅವರ ಸಮಸ್ಯೆಗಳನ್ನು ನಿವಾರಿಸುವಂತಹ ಕೆಲಸ ಅವರು ಮಾಡಿದ್ದಾರೆ ಹಾಗೂ ಮುಂದೆಯೂ ಕೂಡ ಇದೇ ರೀತಿ ಬಡವರಿಗೆ ಸಹಾಯ ಮಾಡಿ, ಅವರ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾರೆ ಎಂದು ಹೇಳುತ್ತಾ, ಮೋಜಸ್ ನಿರ್ಣಾಕರ್ ರವರ 31ನೇ ಹುಟ್ಟು ಹಬ್ಬದ ಶುಭಾಶಯವನ್ನು ಹೇಳಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಅಭಿಷೇಕ ಮಾನಕಾರೆ, ವಿಶಾಲ ದಾದಾ, ಇಮಾನುವೇಲ್ ಕಟ್ಟಿ, ವಿನೋದ, ಪವನ, ಸಾಲೊಮೊನ ಡಿಸೊಜಾ, ಜೇಮ್ಸ್ ನಿರ್ಣಾಕರ್, ವಿರೇಶ, ರಾಜಕುಮಾರ, ರಾಜೇಶ ಇನ್ನೀತರರ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!